Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

9 ವಿವಿ ಮುಚ್ಚಲು ಸರ್ಕಾರ ನಿರ್ಧಾರ : ಡಿಕೆಶಿ ಹೇಳಿದ್ದೇನು..?

ಡಿಕೆ ಶಿವಕುಮಾರ್
---Advertisement---

ಬೆಂಗಳೂರು: ಬಿಜೆಪಿ ಸರ್ಕಾರದ ಅವಧಿಯಲ್ಲಿ 10 ಹೊಸ ವಿಶ್ವವಿದ್ಯಾಲಯಗಳನ್ನು ಆರಂಭಿಸಿದ್ದರು. ಆ ವಿಶ್ವವಿದ್ಯಾಲಯಗಳಿಂದ ಈಗ ಆರ್ಥಿಕವಾಗಿ ದುಬಾರಿಯಾಗುತ್ತಿದೆ. ಇದು ಸರ್ಕಾರಕ್ಕೆ ಇನ್ನಷ್ಟು ಹಣಕಾಸಿನ ಸಮಸ್ಯೆಯನ್ನು ತಲೆದೂರುವಂತೆ ಮಾಡಿದೆ. ಈ ನಿಟ್ಟಿನಲ್ಲಿ ಸರ್ಕಾರ ಒಂದಷ್ಟು ಪರಮಾರರ್ಶೆ ನಡೆಸಿ 10ರಲ್ಲಿ 9 ವಿವಿಗಳನ್ನು ಮುಚ್ಚುವ ನಿರ್ಧಾರಕ್ಕೆ ಬಂದಿದೆ. ಹೊಸ ಯೂನಿವರ್ಸಿಟಿ ಸ್ಥಾಪನೆ ಹಾಗೂ ಕಾರ್ಯಾಚರಣೆಗಾಗಿಯೇ 342 ಕೋಟಿ ಹಣದ ಅಗತ್ಯವಿದೆ. ವಿಶ್ವವಿದ್ಯಾಲಯಗಳ ಸ್ಥಾಪನೆಗಾಗಿ 100-200ಎಕರೆ ಜಮೀನು ಬೇಕು. ಬಹುತೇಕ ಯೂನಿವರ್ಸಿಟಿಗಳಿಗೆ ಅಷ್ಟು ಪ್ರಮಾಣದ ಜಮೀನು ಲಭ್ಯವಿಲ್ಲ. ಹೀಗಾಗಿ ಯೂನಿವರ್ಸಿಟಿಗಳನ್ನ ಮುಚ್ಚಲು ರಾಜ್ಯ ಸರ್ಕಾರ ತೀರ್ಮಾನಿಸಿದೆ.

ಈ ಸಂಬಂಧ ಡಿಸಿಎಂ ಡಿಕೆ ಶಿವಕುಮಾರ್ ಮಾತನಾಡಿ, ಈ ಮೊದಲು ಒಂದು ಕಾನೂನು ಮಾಡಿದ್ದರು. ಬರೀ ಒಂದು ಯೂನಿವರ್ಸಿಟಿಗೆ ಎರಡು ಕೋಟಿ ಇಟ್ಟಿದ್ದರು. ಜಮೀನಿಲ್ಲ, ಹೋಗೋರಿಲ್ಲ. ಮಂಡ್ಯ, ಚಾಮರಾಜನಗರ ಸೇರಿದಂತೆ ಹಲವು ಜಿಲ್ಲೆಯಿಂದ ಮೈಸೂರು ಯೂನಿವರ್ಸಿಟಿ ಡಿಮ್ಯಾಂಡ್ ಇಟ್ಟಿದ್ದಾರೆ. ಬೇರೆ ಯೂನಿವರ್ಸಿಟಿಯಲ್ಲಿ ಅಡ್ಮಿಷನ್ ಡ್ರಾಪ್ ಔಟ್ ಆಗಿದೆ. ಇದನ್ನ ಇಂಟರ್ ನಲ್ ಒಂದು ರಿಪೋರ್ಟ್ ಕೂಡ ಮಾಡಿದ್ದರು. ಅದನ್ನ ಮುಖ್ಯಮಂತ್ರಿಗಳು ಈಗಾಗಲೇ ನನ್ನ ಅಧ್ಯಕ್ಷತೆಯಲ್ಲಿ ಒಂದು ಕ್ಯಾಬಿನೇಟ್ ಸಭೆ ಮಾಡಿ, ಡೀಪಾಗಿ ಚರ್ಚೆ ಕೂಡ ಮಾಡಲಾಗಿದೆ.

ಇದರಲ್ಲಿ ಯಾವುದೇ ಪರ್ಸನಲ್ ಅಜೆಂಡಾ ಇಲ್ಲ. ನಮಗೆ ಮಕ್ಕಳ ಭವಿಷ್ಯವೇ ಮುಖ್ಯ. ಚಾಮರಾಜನಗರಕ್ಕೆ ಲೆಕ್ಚರರ್ ಹೇಗೋಕೆ ತಯಾರಿಲ್ಲ. ಮಂಡ್ಯಕ್ಕೆ ಹೋಗೋದಕ್ಕೆ ತಯಾರಿಲ್ಲ. ಪೆನ್ಶನ್, ಸೀನಿಯಾರಿಟಿ ಸೇರಿದಂತೆ ಹಲವು ಸಮಸ್ಯೆಗಳು ಅವರನ್ನ ಕಾಡ್ತಿದೆ. ಅದರ ಬಗ್ಗೆ ಎಲ್ಲಾ ಚರ್ಚೆ ಮಾಡಿದ್ದೀವಿ, ಅಭಿಪ್ರಾಯಗಳ ಸಂಗ್ರಹ ಆಗಿದೆ. ಸಿಎಂ ಅವರಿಗೆ ಈ ಬಗ್ಗೆ ಕಂಪ್ಲೀಟ್ ಬ್ರೀಫ್ ಮಾಡಿಲ್ಲ. ಅವರಿಗೂ ವಿಚಾರವನ್ನು ತಿಳಿಸ್ತೀನಿ ಎಂದಿದ್ದಾರೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment

🏫 ಅಡ್ಮಿಷನ್ ಓಪನ್
🔒

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್

ಸ್ವಾಗತ...