ಇತ್ತೀಚಿನ ದಿನಗಳಲ್ಲಿ ಹೊಟ್ಟೆಯ ಬೊಜ್ಜಿನ ಸಮಸ್ಯೆಯನ್ನು ಅನುಭವಿಸುತ್ತಿರುವ ಜನ ಸಂಖ್ಯೆ ಜಾಸ್ತಿ. ಅದನ್ನ ಕರಗಿಸುವುದಕ್ಕೆ ಸಾಕಷ್ಟು ಶ್ರಮ ಹಾಕುತ್ತಾರೆ. ಇನ್ನಿಲ್ಲದ ವ್ಯಾಯಾಮವನ್ನು ಮಾಡುತ್ತಾರೆ. ಕೆಲವೊಂದಿಷ್ಟು ಮಂದಿಗೆ ವ್ಯಾಯಾಮ ಮಾಡುವುದಕ್ಕೂ ಸಮಯ ಸಿಗುವುದಿಲ್ಲ. ಅಂಥವರಿಗೆ ಇಲ್ಲೊಂದು ಟಿಪ್ಸ್ ಇದೆ ನೋಡಿ.
* ಕೊತ್ತಂಬರಿ ಸೊಪ್ಪು, ಪುದೀನಾ, ನಿಂಬೆರಸ, ಶುಂಠಿ ಹಾಗೂ ಜೇನುತುಪ್ಪವನ್ನು ಬಳಸಿಕೊಂಡು ಒಂದು ಜ್ಯೂಸ್ ತಯಾರಿಸಿಕೊಳ್ಳಿ.
* ಮೊದಲಿಗೆ ಪುದೀನಾ ಹಾಗೂ ಕೊತ್ತಂಬರಿ ಸೊಪ್ಪನ್ನು ಚೆನ್ನಾಗಿ ತೊಳೆದುಕೊಳ್ಳಿ. ಎಲ್ಲಾ ಪದಾರ್ಥಗಳನ್ನು ಮಿಕ್ಸಿಗೆ ಹಾಕಿ, ನೀರನ್ನು ಹಾಕಿಕೊಂಡು ರುಬ್ಬಿರಿ. ನಿಮಗೆ ಎಷ್ಟು ತೆಳುವಾಗಿ ಬೇಕೋ ಅಷ್ಟು ನೀರನ್ನು ಹಾಕಿಕೊಳ್ಳಿ.
* ಬಳಿಕ ಆ ರಸವನ್ನ ಒಂದು ಬೌಲ್ ಗೆ ಸೋಸಿಕೊಳ್ಳಿ. ಅದಕ್ಕೆ ಒಂದು ಸ್ಪೂನ್ ಜೇನು ತುಪ್ಪ ಹಾಕಿಕೊಂಡು ಮಿಕ್ಸ್ ಮಾಡಿ ಸೇವಿಸಿ.
* ಬೆಳಗ್ಗೆ ಈ ಪಾನೀಯವನ್ನು ಕುಡಿಯುವುದರಿಂದ ಸಾಕಷ್ಟು ಅನುಕೂಲಗಳು ಸಿಗಲಿವೆ. ಸುಲಭವಾಗಿ ಬೊಜ್ಜು ಕರಗಲಿದೆ. ಬೊಜ್ಜು ಕರಗುವುದಕ್ಕೆ ಬೇರೆ ಸಾಹಸ ಪಡಬೇಕಿಲ್ಲ. ಹಾಗೇ ವರ್ಕೌಟ್ ಮಾಡಿಕೊಳ್ಳುವುದಕ್ಕೆ ಸಾಹಸವನ್ನು ಪಡಬೇಕಿರುವುದಿಲ್ಲ.
* ಇನ್ನು ಪುದೀನಾ ಜ್ಯೂಸ್ ನಿಂದಾನೂ ಸಾಕಷ್ಟು ಲಾಭವಿದೆ. ಇದರಲ್ಲಿ ಫೈಬರ್ ಅಂಶ ಜಾಸ್ತಿ ಇದೆ. ಎದೆಯುರಿಯನ್ನು ಈ ಪುದೀನಾ ನಿವಾರಿಸುತ್ತದೆ. ಕೊಬ್ಬನ್ನು ಕರಗಿಸುತ್ತದೆ.
* ನಿಂಬೆಯಲ್ಲಿ ಸಾಮಾನ್ಯವಾಗಿ ಗೊತ್ತಿರುವಂತೆ ವಿಟಮಿನ್ ಸಿ ಇದೆ. ಇದು ದೇಹವನ್ನು ಡಿಟಾಕ್ಸ್ ಮಾಡುತ್ತದೆ. ಇದು ದೇಹದಲ್ಲಿರುವ ವಿಷವನ್ನು ತೊಡೆದು ಹಾಕುತ್ತದೆ. ಹೀಗಾಗಿ ತೂಕ ಕಳೆದುಕೊಳ್ಳುವುದಕ್ಕೆ ಅನುಕೂಲವಾಗುತ್ತದೆ. ಈ ಮೂರನ್ನು ಬಳಸಿಕೊಂಡು ನಿಮ್ಮ ಬೊಜ್ಜನ್ನು ಸುಲಭವಾಗಿ ಕರಗಿಸಬಹುದಾಗಿದೆ. ಪ್ರತಿದಿನ ಈ ಜ್ಯೂಸ್ ಅನ್ನು ಒಮ್ಮೆ ಟ್ರೈ ಮಾಡಿ.