Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಬಿಜೆಪಿ ರಾಜ್ಯಾಧ್ಯಕ್ಷ ಬದಲಾವಣೆ : ಕುಮಾರ ಬಂಗಾರಪ್ಪ ಹೇಳಿದ್ದೇನು..?

---Advertisement---

ಬೆಂಗಳೂರು: ಬಿಜೆಪಿಯಲ್ಲಿ ಸದ್ಯ ಬಿವೈ ವಿಜಯೇಂದ್ರ ಅವರು ರಾಜ್ಯಾಧ್ಯಕ್ಷರಾಗಿದ್ದು, ಬದಲಾವಣೆಯ ಚರ್ಚೆಗಳು ಜೋರಾಗಿವೆ. ಇದರ ನಡುವೆ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅದಕ್ಕೆ ಪ್ರತು ಸ್ಪರ್ಧಿಯಾಗಿದ್ದಾರೆ. ಈ ಸಂಬಂಧ ಅವರದ್ದೇ ಬಣದಲ್ಲಿ ಗುರುತಿಸಿಕೊಂಡ ಕುಮಾರ ಬಂಗಾರಪ್ಪ ಪ್ರತಿಕ್ರಿಯೆ ನೀಡಿದ್ದಾರೆ.

31 ನಾಡಿದ್ದು, ಎಲ್ಲಾ ಜಿಲ್ಲೆಯಿಂದಾನು ಮುಖಂಡರು ಬರುತ್ತಿದ್ದಾರೆ. ಅವರೆಲ್ಲರ ಜೊತೆಗೆ ಚರ್ಚೆಯಾಗುತ್ತದೆ. ಯತ್ನಾಳ್ ಅವರ ಜೊತೆ, ರಮೇಶ್ ಜಾರಕಿಹೊಳಿ ಅವರ ಜೊತೆಗೂ ಮಾತನಾಡಿ ವಿಚಾರವನ್ನ ಹೇಳ್ತೇನೆ. ಅಂದುಕೊಂಡಂಗೆ ಈ ಎಲೆಕ್ಷನ್ ಅಲ್ಲ. ಆಉ್ಕೆ ಮಾಡಿದ ಕೂಡಲೇ ವೋಟ್ ಹಾಕ್ತಾರೆ ಅಂತ ಅಲ್ಲ. 31ಕ್ಕೆ ಚರ್ಚೆ ಮಾಡಿ, ತಿಳಿಸುತ್ತೇವೆ.

ರಾಜ್ಯದಲ್ಲಿ ನಮ್ಮ ಬೂತ್ ಮಟ್ಟದ ಅಧ್ಯಕ್ಷರುಗಳು ,ಮಂಡಲ, ಜಿಲ್ಲೆ ಮತ್ತು ರಾಜ್ಯದ ಆರ್ಗನೈಸೇಶನ್ ನಡೆಯುತ್ತಾ ಇದೆ. ಅದು ಕರೆಕ್ಟ್ ಆಗಿ ಆಗಬೇಕಿತ್ತು. ಮೊನ್ನೆ ರಾಧಾಮೋಹನ್ ಅಗರ್ವಾಲ್ ಅವರು ಬಂದಂತ ಸಂದರ್ಭದಲ್ಲಿ ಬಹಳಷ್ಟು ಮಾರ್ಗದರ್ಶನವನ್ನ ಮಾಡಿದ್ರು ಎಂಬುದನ್ನ ನಾವೂ ಭಾವಿಸಿದ್ದೆವು. ಆದರೆ ಅದು ಅಷ್ಟು ಸರಿಯಾಗಿ ಇನ್ನು ಕೂಡ ಆಗ್ತಾ ಇಲ್ಲ ಅನ್ನೋದು ಇದೆ. ಬೀದರ್, ದಾವಣಗೆರೆ ಕಡೆಯಲ್ಲೂ ಗೊಂದಲ ಹುಟ್ಟಿಕೊಳ್ಳುತ್ತಿವೆ. ನಮ್ಮನ್ನ ಯಾರೂ ಕೂಡ ಕೇಳಲಿಲ್ಲ. ಒಂದೇ ಸಲ ಅಧ್ಯಕ್ಷರನ್ನ ಘೋಷಣೆ ಮಾಡ್ತೀವಿ ಅಂತ ಹೇಳಿದ್ದಾರೆ. ನಾನೀಗ ಸನ್ಮಾನ್ಯ ಅಗರ್ವಾಲ್ ಅವರ ಬಳಿಯೂ ಮನವಿ ಮಾಡಿಕೊಳ್ತೀನಿ, ಕೇಂದ್ರಕ್ಕೂ ಮನವಿ ಮಡಿಕೊಳ್ತೀನಿ. ಇದಕ್ಕೆ ಯಾರೂ ಜವಾಬ್ದಾರಿ ಇದೆ, ಇದಕ್ಕೆ ಪಕ್ವವಾಗಿರುವಂಥವರು, ಯಾವುದಕ್ಕೂ ವಾಲದೆ ಇರುವ, ಪಕ್ಷವನ್ನ ಸರಿಯಾದ ರೀತಿಯಲ್ಲಿ ನಡೆಸಿಕೊಂಡು ಹೋಗುವ, ಎಲ್ಲರನ್ನು ಒಗ್ಗಟ್ಟಿನಿಂದ ನಡೆಸಿಕೊಂಡು ಹೋಗುವ ಕೆಲಸ ಮಾಡಿದರೆ ಒಳ್ಳೆಯದಾಗುತ್ತೆ. ಇಲ್ಲವಾದರೆ ನಾಳೆ ದಿನ ಗೊಂದಲಗಳು ಶುರುವಾಗುವುದಕ್ಕೆ ಅವಕಾಶ ಮಾಡಿಕೊಟ್ಟಂತೆ ಆಗುತ್ತದೆ ಎಂದಿದ್ದಾರೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment

🏫 ಅಡ್ಮಿಷನ್ ಓಪನ್
🔒

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್

ಸ್ವಾಗತ...