ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್, ಚಿತ್ರದುರ್ಗ
2026-27ನೇ ಸಾಲಿನ ದಾಖಲಾತಿಗಳು ಪ್ರಾರಂಭ! (ಪ್ಲೇ ಗ್ರೂಪ್‌ನಿಂದ 12ನೇ ತರಗತಿವರೆಗೆ)
2026-27ನೇ ಸಾಲಿನ ದಾಖಲಾತಿಗಳು ಪ್ರಾರಂಭ! (ಪ್ಲೇ ಗ್ರೂಪ್‌ನಿಂದ 12ನೇ ತರಗತಿವರೆಗೆ)
ಸುದ್ದಿಒನ್, ಚಿತ್ರದುರ್ಗ,ಜನವರಿ. 28 : ನಗರದಲ್ಲಿ ರಸ್ತೆ ಆಗಲೀಕರಣ ಮಾಡುತ್ತಿರುವುದು ಸಾರ್ವಜನಿಕರಿಗೆ ನುಂಗಲಾರದ ತುತ್ತಾಗಿದೆ. ಅವೈಜ್ಞಾನಿಕ ಡಿವೈಡರ್ ನಿರ್ಮಾಣ ರಸ್ತೆ ಅಗಲೀಕರಣ ಮಾಡುತ್ತಿರುವುದು ಕಾಂಪ್ಲೆಕ್ಸ್ ಮಾಲೀಕರಿಗೆ ತೊಂದರೆ ಕೊಡುವಂತಹ ನಿರ್ಧಾರ ತೆಗೆದುಕೊಳ್ಳಲಾಗುತ್ತಿದೆ ಎಂದು ಅಮ್ ಆದ್ಮಿ ಪಕ್ಷದ ಚಿತ್ರದುರ್ಗ ಘಟಕದ ಜಿಲ್ಲಾಧ್ಯಕ್ಷ ಬಿ.ಇ. ಜಗದೀಶ್ ಹೇಳಿದರು.
ಅವರು ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು.
ಹೊಸದಾಗಿ ನಿರ್ಮಾಣ ಮಾಡುತ್ತಿರುವ ಡಿಸಿ ಆಫೀಸ್ ಕಡೆಗೆ ಸಿಟಿ ನಿರ್ಮಾಣ ಮಾಡಿದರೆ ಆಟೋ ಹಾಗೂ ಮತ್ತಿತರ ಸಾರ್ವಜನಿಕ ವಲಯದಲ್ಲಿ ಉದ್ಯೋಗ ಸೃಷ್ಟಿಯಾಗುತ್ತದೆ. ಸಿಟಿಯಲ್ಲಿರುವ ಅಗಲೀಕರಣವನ್ನು ನಿಲ್ಲಿಸಿ ಆದಷ್ಟು ಬೇಗ ಚಿತ್ರದುರ್ಗ ಉಸ್ತುವಾರಿ ಸಚಿವರು ಸ್ಥಳೀಯ ಶಾಸಕರು ಗಮನ ಹರಿಸಬೇಕು. ಕಟ್ಟಡ ಮಾಲೀಕರು ಲಕ್ಷಗಟ್ಟಲೆ ಕಟ್ಟಡ ನಿರ್ಮಾಣ ಮಾಡುವುದಕ್ಕೆ ಹಣ ಹಾಕಿ ತೊಂದರೆಗೆ ಒಳಗಾಗಿರುತ್ತಾರೆ.
ಹಾಗೆಯೇ ಇತ್ತೀಚಿಗೆ ಮೈಕ್ರೋ ಫೈನಾನ್ಸ್ ಅಂತಹ ಸಂಸ್ಥೆಗಳು ಕೂಲಿ ಕಾರ್ಮಿಕರಿಗೆ ಅಮಿಷ ತೋರಿಸಿ ಹಣ ನೀಡಿ ಅವರನ್ನು ದಿಕ್ಕು ತಪ್ಪಿಸುವ ಕಾರ್ಯ ಮಾಡುತ್ತಿದ್ದಾರೆ. ಇದರ ಬಗ್ಗೆ ಆರ್ ಬಿ ಐ ಕೂಡಲೇ ಕ್ರಮ ಕೈಗೊಳ್ಳಬೇಕು. ಇತ್ತೀಚಿಗೆ ನಡೆದ ಮೈಕ್ರೋ ಫೈನಾನ್ಸ್ ಹಾವಳಿಯಿಂದ ಸುಮಾರು 6 ಜನ ಆತ್ಮಹತ್ಯೆಗಿಡಾಗಿದ್ದಾರೆ. ಇದರಿಂದ ಮೈಕ್ರೋ ಫೈನಾನ್ಸ್ ಅಂತಹ ಸಂಸ್ಥೆಗಳ ಬಗ್ಗೆ ಸರ್ಕಾರ ಕೂಡಲೇ ಕ್ರಮ ಕೈಗೊಂಡು ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿಗಳಿಗೆ ಪರಿಹಾರ ಘೋಷಣೆ ಮಾಡಬೇಕು. ಇಲ್ಲದಿದ್ದರೆ ರಾಜ್ಯದಲ್ಲಿ ಎಲ್ಲಾ ಜಿಲ್ಲೆಗಳಲ್ಲಿ ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದರು.
ಹಾಗೂ ದಿನಾಂಕ:27.01.2025 ರಂದು ಚಿತ್ರದುರ್ಗ ತಾಲ್ಲೂಕ್, ಕಡೇಗುದ್ದು, ಗ್ರಾಮದಲ್ಲಿ ವೆರಿಟಾಸ್ ಎಂಬ ಫೈನಾನ್ಸ್ ನಿಂದ ಸಾಲಪಡೆದವರ ಹತ್ತಿರ ಹಣ ವಸೂಲಿಗೆ ಹೋದಾಗ ತಕ್ಷಣ ಸ್ಥಳೀಯ ಜನರು ಬಂದು ಗಲಾಟೆ ಮಾಡಿದ್ದರಿಂದ ಪೈನಾನ್ಸ್ ಸಿಬ್ಬಂದಿಗಳು ಓಡಿಹೋಗಿರುತ್ತಾರೆ. ಮತ್ತು ದಿನಾಂಕ:28.01.2025 ರಂದು ಚಿತ್ರದುರ್ಗ ತಾಲ್ಲೂಕ್, ಸುಲ್ತಾನಿಪುರ ಗ್ರಾಮದಲ್ಲಿ ಸುಮಾರು ಬೆಳಗ್ಗೆ 10-10 ರ ಸುಮಾರು ಸತ್ಯ ಮೈಕ್ರೋ ಫೈನಾನ್ಸ್ ಇವರು ಸಹ ಸಾಲ ವಸೂಲಿಗೆ ಹೋದಾಗ ಸ್ಥಳೀಯ ಜನರು ಗಲಾಟೆ ಮಾಡಿರುತ್ತಾರೆ ಎಂದು ತಿಳಿಸಿದರು.

ನಿಮ್ಮ ಊರಿನ ಅದ್ಧೂರಿ ಜಾತ್ರೆ, ವಿಶೇಷ ಆಚರಣೆಗಳು, ಅಥವಾ ನಿಮ್ಮ ಗಮನಕ್ಕೆ ಬಂದ ಸ್ಥಳೀಯ ಸಮಸ್ಯೆಗಳೇ? ಚಿತ್ರದುರ್ಗ ಹಾಗೂ ಸುತ್ತಮುತ್ತಲಿನ ಯಾವುದೇ ಸುದ್ದಿಯಾದರೂ ನಮಗೆ ತಿಳಿಸಿ. ನಿಮ್ಮ ಧ್ವನಿಯಾಗಿ ನಾವು ನಾಡಿಗೆ ತಲುಪಿಸುತ್ತೇವೆ. ಛಾಯಾಚಿತ್ರ ಮತ್ತು ವಿವರಗಳೊಂದಿಗೆ ನಮಗೆ ಇಮೇಲ್ ಮಾಡಿ.
✉️ suddionenews@gmail.com🛡️ ನಿಮ್ಮ ಮಾಹಿತಿಯನ್ನು ಗೌಪ್ಯವಾಗಿಡಲಾಗುವುದು.






ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್