Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ನಟ ಶಿವರಾಜ್ ಕುಮಾರ್ ಮನೆಗೆ ಸಿಎಂ ಭೇಟಿ, ಆರೋಗ್ಯ ವಿಚಾರಿಸಿದ ಸಿದ್ದರಾಮಯ್ಯ

---Advertisement---

 

ಬೆಂಗಳೂರು, ಜನವರಿ 27: ನಟ ಶಿವರಾಜ್ ಕುಮಾರ್ ನಿನ್ನೆಯಷ್ಟೇ ಅಮೆರಿಕಾದಿಂದ ಬೆಂಗಳೂರಿಗೆ ಬಂದಿದ್ದಾರೆ. ಕ್ಯಾನ್ಸರ್ ಕಾಯಿಲೆಗೆ ಚಿಕಿತ್ಸೆ ಪಡೆದು ಸಂಪೂರ್ಣ ಗುಣಮುಖರಾಗಿ ಬಂದಿದ್ದಾರೆ. ಶಿವಣ್ಣ ಬೆಂಗಳೂರಿಗೆ ಬರುತ್ತಿದ್ದಂತೆ, ಶ್ರೀಮುತ್ತು ನಿವಾಸದಲ್ಲಿ ಹೂವಿನ ಹಾಸಿಗೆ ಹಾಸಿ ನಡೆಸಿದ್ದರು. ಅವರ ಅಭಿಮಾನಿಗಳಿಗೆ ಮರುಜೀವವೇ ಬಂದಂತೆ ಆಯ್ತು. ಇದೀಗ ಶಿವಣ್ಣ ಅವರ ಆರೋಗ್ಯ ವಿಚಾರಿಸಿ ಸ್ವತಃ ಸಿಎಂ ಸಿದ್ದರಾಮಯ್ಯ ಅವರು ಕೂಡ ಮನೆಗೆ ಭೇಟಿ ನೀಡಿದ್ದಾರೆ.

ನಾಗಾವರದಲ್ಲಿರುವ ಶಿವಣ್ಣ ಅವರ ನಿವಾಸಕ್ಕೆ ಸಿಎಂ ಸಿದ್ದರಾಮಯ್ಯ ಅವರು ಭೇಟಿ ನೀಡಿ, ಆರೋಗ್ಯ ವಿಚಾರಿಸಿದ್ದಾರೆ. ಶಿವಣ್ಣ ಜೊತೆಗೆ ಕೂತು ಸ್ವಲ್ಪ ಕಾಲ ಉಭಯ ಕುಶಲೋಪರಿ ಮಾತನಾಡಿದ್ದಾರೆ. ಬಳಿಕ ಮಾತನಾಡಿದ ಸಿಎಂ ಸಿದ್ದರಾಮಯ್ಯ ಅವರು, ಶಿವರಾಜ್ ಕುಮಾರ್ ಅವರಿಗೆ ಆಪರೇಷನ್ ಆದ ಮರುದಿನವೇ ಕರೆ ಮಾಡಿದ್ದೆ. ಆಪರೇಷನ್ ಸಕ್ಸಸ್ ಆಗಿದೆ ಎಂದು ಡಾಕ್ಟರ್ ಹೇಳಿದ್ದಾರೆ. ಮುಂದಿನ ತಿಂಗಳಿನಿಂದ ಶೂಟಿಂಗ್ ಹೋಗ್ತಾರೆ. ಅವರು ಸದ್ಯ ಆರೋಗ್ಯವಾಗಿದ್ದಾರೆ. ಈಗ ಯಾವ ತೊಂದರೆಯೂ ಇಲ್ಲ ಎಂದರು. ಹಾಗೂ ಶಿವಣ್ಣ ಅವರಿಗೆ ಸಿಎಂ ಆಶೀರ್ವಾದ ಮಾಡಿ, ಹಾರೈಸಿ ಹೊರಟರು.

ಶಿವ ರಾಜ್‍ಕುಮಾರ್ ಸದ್ಯ ವಿಶ್ರಾಂತಿಯಲ್ಲಿದ್ದಾರೆ. ಅಮೆರಿಕಾದಲ್ಲಿ ಆಪರೇಷನ್ ಆದ ಎರಡೇ ದಿನಕ್ಕೆ ಎದ್ದು‌ ಓಡಾಡಿದ್ದರು. ಈಗ ಅಮೆರಿಕಾದಿಂದ ಪ್ರಯಾಣ ಮಾಡಿದ್ದು ಸ್ವಲ್ಪ ಬಳಲಿದ್ದಾರೆ. ಹೀಗಾಗಿ ವಿಶ್ರಾಂತಿ ಮೂಡಲ್ಲಿದ್ದು, ಚಿತ್ರರಂಗದಲ್ಲಿ ಮತ್ತೆ ಆಕ್ಟೀವ್ ಆಗಲಿದ್ದಾರೆ. ಶಿವಣ್ಣ ಕೈಯಲ್ಲಿ ಈಗಾಗಲೇ ಸಾಕಷ್ಟು ಸಿನಿಮಾಗಳು ಇದಾವೆ. 45 ರಿಲೀಸ್ ಗೆ ರೆಡಿ ಇದೆ. ಹೊಸ ಹೊಸ ಸಿನಿಮಾಗಳು ಅನೌನ್ಸ್ ಕೂಡ ಆಗಿವೆ. ಮುಂದಿನ ತಿಂಗಳಿನಿಂದ ಮತ್ತೆ ಶಿವಣ್ಣ ಈಸ್ ಬ್ಯಾಕ್ ಎಂಬಂತೆ ಕಮ್ ಬ್ಯಾಕ್ ಆಗಲಿದ್ದಾರೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment