Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

---Advertisement---

ಮಗ್ದರನ್ನು ಪ್ರಭುದ್ಧರನ್ನಾಗಿ ಮಾಡಿದವರು ಭೋವಿ ಕುಲತಿಲಕ ದಿ.ಮಂಜರಿ ಹನುಮಂತಪ್ಪ : ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ

---Advertisement---

ಚಿತ್ರದುರ್ಗ ಜ. 25 : ಮಗ್ದರನ್ನು ಪ್ರಭುದ್ಧರನ್ನಾಗಿಸಲು ಶಿಕ್ಷಣಕ್ರಾಂತಿ ಮಾಡಿದವರು ಭೋವಿ ಕುಲತಿಲಕ ದಿ.ಮಂಜರಿ ಹನುಮಂತಪ್ಪ. ಅವರು ಶಿಕ್ಷಣ ಹಾಗೂ ಸಂಘಟನೆ ಮಹತ್ವದ ಅರಿತು, ಇದರ ಸಸಿ ನೆಟ್ಟ ಫಲ ಇಂದು ಸದೃಢ ಸಂಘಟನೆ ಹಾಗೂ ನೌಕರರು ಮತ್ತು ಮೀಸಲಾತಿಯ ಫಲಾನುಭವಿಗಳಾಗಿ ಇಂದಿನ ಪೀಳಿಗೆ ಸವಿಯುತ್ತಿದೆ ಎಂದು ಭೋವಿ ಗುರುಪೀಠದ ಜಗದ್ಗುರು ಶ್ರೀ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ ಹೇಳಿದರು.

ನಗರದ ತ ರಾ ಸು ರಂಗ ಮಂದಿರದಲ್ಲಿ ಜರುಗಿದ ಮಂಜರಿ ಹನುಮಂತಪ್ಪರವರ ಸ್ಮರಣೋತ್ಸವ ಹಾಗೂ ಎಸ್ ಜೆ ಎಸ್ ಜ್ಞಾನ ಸಂಭ್ರಮದ ಸಮಾರೋಪ ಸಮಾರಂಭದ ಸಾನಿಧ್ಯವಹಿಸಿ ಮಾತನಾಡಿದ ಅವರು, ಗೌರವಯುತ ಬದುಕು, ಸ್ವಾವಲಂಬಿ ಬದುಕು ಹಾಗೂ ಆಧುನಿಕ ಯುಗದಲ್ಲಿ ಕುಲವೃತ್ತಿಗಳಿಂದ ಸ್ಪರ್ಧಾತ್ಮಕ ವೃತ್ತಿ ಬದುಕಿಗೆ ಶಿಕ್ಷಣ ಭದ್ರ ಅಡಿಪಾಯವಾಗಿದೆ ಎಂಬುದನರಿತು ಶಿಕ್ಷಣ ಸಂಸ್ಥೆ ಪ್ರಾರಂಭಿಸಿ ನೂರಾರು ಮಕ್ಕಳಿಗೆ ಜ್ಞಾನಜ್ಯೋತಿ ಬೆಳಗಿ, ಆ ಮನೆಗಳ ನಂದಾದೀಪಾ ಹಚ್ಚಿದವರು ಶಿಕ್ಷಣ ಪ್ರೇಮಿ ಮಂಜರಿ ಹನುಮಂತಪ್ಪರವರು. ಅಸಂಘಟಿತ ಅರೆಅಲೆಮಾರಿ ಸಮಾಜವಾದ ಭೋವಿ ಸಮಾಜಕ್ಕೆ ಪ್ರಪ್ರಥಮ ಸಂಘಟಿತ ರಾಜ್ಯಾಸಂಘವನ್ನು ಕಟ್ಟಿ ಸಾಂಘಿಕ ಶಕ್ತಿಯನ್ನು ರಾಷ್ಟ್ರರಾಜಧಾನಿ ದೆಹಲಿಯಲ್ಲಿ ಭಾರತದ ಪ್ರಥಮ ಪ್ರಧಾನಿ ಮಂತ್ರಿಗಳ ಮುಂದೆ ಪ್ರಕಾಶಿಸಿದವರು ಮಂಜರಿ ಹನುಮಂತಪ್ಪ ಹಾಗೂ ತಂಡದವರು. ಅಖಂಡ ಕರ್ನಾಟಕದ ಭೋವಿ ಸಮಾಜಕ್ಕೆ ಅಖಂಡತೆಯ ಏಕರೂಪದ ಮೀಸಲಾತಿಗಾಗಿ ಹೋರಾಡಿ ಪ್ರಾದೇಶಿಕ ನ್ಯಾಯ ನೀಡಿದವರು ಮಂಜರಿ ಹನುಮಂತಪ್ಪರವರು ಹಾಗೂ ತಂಡದವರು. ಸ್ತ್ರೀಕುಲಕ್ಕೆ ಶಿಕ್ಷಣದ ಸಿಂಧೂರ ನೀಡಿದವರು ಮಂಜರಿ ಹನುಮಂತಪ್ಪರವರು ಎಂದು ಹೇಳಿದರು.

ಕೊಡಗಿನ ಮಹಾಂತ ಶ್ರೀಗಳು ಮಾತನಾಡಿ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವ ಜತೆಗೆ ಅವರನ್ನು ಭವಿಷ್ಯದ ಸತ್ಪ್ರಜೆಗಳಾಗಿಸಬೇಕು. ಶಿಕ್ಷಣ ಕೇವಲ ಕೆಲಸ ಪಡೆಯಲು ಸರ್ಟಿಫಿಕೇಟ್ ನೀಡಲು ಸೀಮಿತವಾಗಬಾರದು. ಮಕ್ಕಳನ್ನು ಉತ್ತಮ ನಾಗರಿಕರನ್ನಾಗಿಸುವ ಶಿಕ್ಷಣದ ಅವಶ್ಯಕತೆ ಇಂದಿನ ಸಮಾಜಕ್ಕೆ ತುರ್ತು ಅಗತ್ಯವಿದೆ. ವ್ಯಕ್ತಿ ಮತ್ತು ಸಮಾಜದ ಅಂಧಕಾರವನ್ನು ತೊಲಗಿಸುವ ಬೆಳಕಾದ ಜ್ಞಾನ ಜೊತೆಯಲ್ಲಿ ಸಂಸ್ಕಾರ ಅಳವಡಿಸಿಕೊಂಡಾಗ ನಮ್ಮ ಸಂಸ್ಕೃತಿ ಭವ್ಯ ಹಾಗೂ ದಿವ್ಯತೆಯಿಂದ ಕೂಡಿರುತ್ತದೆ ಎಂದರು.

ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ನಾಗಭೂಷಣ್ ಮಾತನಾಡಿ ಇಂದಿನ ಮಕ್ಕಳೇ ಮುಂದಿನ ದೇಶದ ಪ್ರಜೆಗಳು ಇವರನ್ನು ಉತ್ತಮವಾದ ಸಂಸ್ಕಾರಯುತವಾದ ಪ್ರಜೆಗಳನ್ನಾಗಿ ಮಾಡುವ ಹೊಣೆಗಾರಿಕೆ ನಮ್ಮೆಲ್ಲರ ಮೇಲಿದೆ ಮಕ್ಕಳಿಗೆ ಉತ್ತಮವಾದ ಶಿಕ್ಷಣವನ್ನು ನೀಡುವುದರ ಮೂಲಕ ಅವರ ಜೀವನವನ್ನು ಸುಗಮವಾಗಿಸಬೇಕಿದೆ ಶ್ರೀಗಳು ತಮ್ಮ ಸಮಾಜದ ಕಾರ್ಯದ ಜೊತೆಗೆ ಶಿಕ್ಷಣದಲ್ಲಿಯೂ ಸಹಾ ಕ್ರಾಂತಿಯನ್ನು ಮಾಡುತ್ತಿದ್ದಾರೆ ಬಡ ಮಕ್ಕಳಿಗೆ ಶಿಕ್ಷಣವನ್ನು ನೀಡುವುದರ ಮೂಲಕ ಎಲ್ಲರನ್ನು ಜ್ಞಾನವಂತರನ್ನಾಗಿ ಮಾಡುತ್ತಿದ್ದಾರೆ ಎಂದರು.

ಕರ್ನಾಟಕ ಸರ್ಕಾರದ 2023ನೇ ಸಾಲಿನ ಶಿಲ್ಪಕಲಾ ಕ್ಷೇತ್ರದಲ್ಲಿ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಶಿಲ್ಪಿ ಶಿವಶಂಕರ ಅವರಿಗೆ ಹಾಗೂ 2024 ಶಿಲ್ಪಕಲಾ ಅಕಾಡಮಿ ಪ್ರಶಸ್ತಿ ಪುರಸ್ಕೃತ ಶಿಲ್ಪಿ ಶ್ರೀನಿವಾಸ ಅವರಿಗೆ ಅಭಿನಂದನೆ ಸಲ್ಲಿಸಲಾಯಿತು.

ಸಮಾರಂಭದಲ್ಲಿ ಯಾದವ ಗುರುಪೀಠದ ಜಗದ್ಗುರು ಶ್ರೀಕೃಷ್ಣ ಯಾದವಾನಂದ ಸ್ವಾಮೀಜಿ, ಭೋವಿ ಗುರುಪೀಠದ ಕಾರ್ಯನಿರ್ವಾಹಣಾಧಿಕಾರಿ ಗೌನಹಳ್ಳಿ ಗೋವಿಂದಪ್ಪ, ಭೋವಿ ಸಂಘದ ಕಾರ್ಯದರ್ಶಿ ಲಕ್ಷ್ಮಣ, ಜಗಳೂರಿನ ಅರ್ಜುನಪ್ಪ, ಉಡುಪಿಯ ರಾಜು, ಕಂಪ್ಲಿಯ ಮೌನೇಶ ಹಾಗೂ ಇತರರು ಉಪಸ್ಥಿತಿಯಿದ್ದರು.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment

🏫 ಅಡ್ಮಿಷನ್ ಓಪನ್
🔒

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್

ಸ್ವಾಗತ...