ಬೆಂಗಳೂರು: ಹಾಲಿ ಸಚಿವೆ ಅಧಿಕಾರದಲ್ಲಿರುವಾಗ್ಲೇ ನೂತನವಾಗಿ ಆದೇಶಗೊಂಡಿರುವ ಕುಲಸಚಿವ ತನ್ನ ಅಧಿಕಾರ ಚಲಾಯಿಸಲು ಮುಂದಾಗಿರುವ ಘಟನೆ ಬೆಂಗಳೂರು ವಿವಿಯಲ್ಲಿ ನಡೆದಿದೆ. ನೂತನ ಕುಲಸಚಿವ ಕೊಟ್ರೇಶ್ ವಿರುದ್ಧ ಈ ಆರೋಪ ಕೇಳಿ ಬಂದಿದೆ.
ಹಾಲಿ ಕುಲಸಚಿವೆ ಕೆ ಜ್ಯೋತಿ ಅವರಿಗೆ ಬೇರೆ ಯಾವುದೇ ಇಲಾಖೆಗೆ ವರ್ಗಾವಣೆಗೊಂಡಿಲ್ಲ. ಹೀಗಾಗಿ ಈಗಲೂ ವಿವಿಯಲ್ಲಿ ಹಾಲಿ ಕುಲಸಚಿವೆ ಜ್ಯೋತಿ ಅವರ ಅಧಿಕಾರವಿದೆ. ಆದ್ರೆ ಈ ನಡುವೆ ನೂತನ ಕುಲಸಚಿವ ಕೊಟ್ರೇಶ್ ಹಾಲಿ ಕುಲಸಚಿವರಿಲ್ಲದ ಸಮಯ ನೋಡಿಕೊಂಡು ಕಡತಗಳಿಗೆ ಸಹಿ ಮಾಡುವ ಕೆಲಸ ಮಾಡುತ್ತಿದ್ದಾರೆ.
ಈ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿರುವ ಹಾಲಿ ಕುಲಸಚಿವೆ, ಐಎಎಸ್ ಅಧಿಕಾರಿ ಕೆ ಜ್ಯೋತಿ ಅವರು ಕೊಟ್ರೇಶ್ ವಿರುದ್ಧ ದೂರು ನೀಡಿದ್ದಾರೆ. ಜ್ಞಾನ ಭಾರತಿ ಠಾಣೆಗೆ ದೂರು ನೀಡಿದ್ದಾರೆ. ವಿವಿ ಕುಲಪತಿ ವೇಣುಗೋಪಾಲ್ ವಿರುದ್ಧವೂ ದೂರು ದಾಖಲಿಸಿದ್ದಾರೆ. ಕುಲಪತಿ ಬಳಿ ರಿಪೋರ್ಟ್ ಮಾಡಿಕೊಂಡು ಡಿಸೆಂಬರ್ 1ರಿಂದ ಪ್ರೊ.ಕೊಟ್ರೇಶ್ ಕರ್ತವ್ಯಕ್ಕೆ ಹಾಜರಾಗಿದ್ದಾರೆ. ಕೆ.ಜ್ಯೋತಿ ಅಧಿಕಾರ ಹಸ್ತಾಂತರಕ್ಕೂ ಮೊದಲೇ ಕುಲಸಚಿವ ಸ್ಥಾನದಲ್ಲಿ ಪ್ರೊ.ಕೊಟ್ರೇಶ್ ಆಸೀನರಾಗಿದ್ದಾರೆ. ಅಲ್ಲದೆ ನಿನ್ನೆ ವಿವಿ ಸಿಬ್ಬಂದಿಯ ಜೊತೆಗೆ ದಿಢೀರ್ ಸಭೆ ನಡೆಸಿದ್ದಾರೆ. ಈ ವಿಚಾರವಾಗಿಯೂ ಕೆ.ಜ್ಯೋತಿ ದೂರುಕುಲಪತಿ ಬಳಿ ರಿಪೋರ್ಟ್ ಮಾಡಿಕೊಂಡು ಡಿಸೆಂಬರ್ 1ರಿಂದ ಪ್ರೊ.ಕೊಟ್ರೇಶ್ ಕರ್ತವ್ಯಕ್ಕೆ ಹಾಜರಾಗಿದ್ದಾರೆ. ಕೆ.ಜ್ಯೋತಿ ಅಧಿಕಾರ ಹಸ್ತಾಂತರಕ್ಕೂ ಮೊದಲೇ ಕುಲಸಚಿವ ಸ್ಥಾನದಲ್ಲಿ ಪ್ರೊ.ಕೊಟ್ರೇಶ್ ಆಸೀನರಾಗಿದ್ದಾರೆ. ಅಲ್ಲದೆ ನಿನ್ನೆ ವಿವಿ ಸಿಬ್ಬಂದಿಯ ಜೊತೆಗೆ ದಿಢೀರ್ ಸಭೆ ನಡೆಸಿದ್ದಾರೆ. ಈ ವಿಚಾರವಾಗಿಯೂ ಕೆ.ಜ್ಯೋತಿ ದೂರು ನೀಡಿದ್ದಾರೆ. ನೀಡಿದ್ದಾರೆ.