Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಕಿಚ್ಚ ಸುದೀಪ್ ಅವರಿಗೆ ರಾಜ್ಯ ಪ್ತಶಸ್ತಿ : ಯಾವೆಲ್ಲಾ ಸಿನಿಮಾಗಳಿಗೆ ಪ್ರಶಸ್ತಿ ಬಂತು ಇಲ್ಲಿದೆ ಮಾಹಿತಿ

---Advertisement---

ಬೆಂಗಳೂರು: ಕಳೆದ 4-5 ವರ್ಷಗಳಿಂದ ರಾಜ್ಯ ಸರ್ಕಾರ ಸಿನಿಮಾಗಳಿಗೆ ಪ್ರಶಸ್ತಿಯನ್ನೇ ನೀಡಿರಲಿಲ್ಲ. ಇದೀಗ 2019ನೇ ಸಾಲಿನ ಕನ್ನಡ ಸಿನಿಮಾಗಳಿಗೆ ರಾಜ್ಯ ಪ್ರಶಸ್ತಿ ಘೋಷಣೆಯಾಗಿದೆ. ಪ್ರಶಸ್ತಿ ಪುರಸ್ಕೃತರ ಪಟ್ಟಿ ಬಿಡುಗಡೆಯಾಗಿದ್ದು, ಸುದೀಪ್ ಅವರಿಗೆ ಅತ್ಯುತ್ತಮ ನಟ ಪ್ರಶಸ್ತಿ ಲಭಿಸಿದೆ. ರಾಜ್ಯ ಸರ್ಕಾರ ಒಟ್ಟು 25 ಪ್ರಶಸ್ತಿಗಳನ್ನು ಘೋಷಣೆ ಮಾಡಿದೆ. 24 ವಿಭಾಗಗಳಾಗಿದ್ದು, ಒಂದು ತೀರ್ಪುಗಾರರ ಪ್ರಶಸ್ತಿ ಕೂಡ ವಿಶೇಷವಾಗಿ ಘೋಷಣೆ ಮಾಡಲಾಗಿದೆ.

ಆ ಕಂಪ್ಲೀಟ್ ಲೀಸ್ಟ್ ಇಲ್ಲಿದೆ.

* ಅತ್ಯುತ್ತಮ ನಟ – ಸುದೀಪ್, ಪೈಲ್ವಾನ್ ಸಿನಿಮಾ

* ಅತ್ಯತ್ತಮ ನಟಿ – ಅನುಪಮಾ ಗೌಡ, ತ್ರಯಂಬಕಂ

* ಅತ್ಯುತ್ತಮ ಸಂಗೀತ ನಿರ್ದೇಶಕ – ವಿ.ಹರಿಕೃಷ್ಣ, ಯಜಮಾನ

* ಅತ್ಯುತ್ತಮ ಗಾಯಕ – ರಘು ದೀಕ್ಷಿತ್, ಲವ್ ಮಾಕ್ಟೇಲ್

* ಅತ್ಯುತ್ತಮ ಗಾಯಕಿ – ಡಾ.ಜಯದೇವಿ ಜಿಂಗಮ ಶೆಟ್ಟಿ, ರಾಗ ಭೈರವಿ

* ಮೊದಲ ಅತ್ಯುತ್ತಮ ಚಿತ್ರ – ಮೋಹನ ದಾಸ, ಪಿ.ಶೆಷಾದ್ರಿ ಅವರ ನಿರ್ದೇಶನ

* 2ನೇ ಅತ್ಯುತ್ತಮ ಚಿತ್ರ – ಲವ್ ಮಾಕ್ಟೇಲ್

* 3ನೇ ಅತ್ಯುತ್ತಮ ಚಿತ್ರ – ಅರ್ಘ್ಯಂ

* ವಿಶೇಷ ಸಾಮಾಜಿಕ ಕಳಕಳಿ ಚಿತ್ರ – ಕನ್ನೇರಿ

* ಅತ್ಯುತ್ತಮ ಜನಪ್ರಿಯ ಮನರಂಜನ ಚಿತ್ರ – ಇಂಡಿಯಾ ವರ್ಸಸ್ ಇಂಗ್ಲೆಂಡ್

* ಅತ್ಯುತ್ತಮ ಮಕ್ಕಳ ಚಿತ್ರ – ಎಲ್ಲಿ ಆಡೋದು ನಾವೂ ಎಲ್ಲಿ ಆಡೋದು

* ನಿರ್ದೇಶಕರ ಪ್ರಥಮ ಗಾಂಧಿ ಚಿತ್ರ – ಗೋಪಾಲಗಾಂಧಿ

* ಅತ್ಯುತ್ತಮ ಪೋಷಕ ನಟ – ತಬಲ ನಾಣಿ

* ಅತ್ಯುತ್ತಮ ಪೋಷಕ ನಟಿ – ಅನುಷಾ ಕೃಷ್ಣ

* ಅತ್ಯುತ್ತಮ ಚಿತ್ರಕಥೆ – ಡಾರ್ಲಿಂಗ್ ಕೃಷ್ಣ, ಲವ್ ಮಾಕ್ಟೇಲ್

* ಅತ್ಯುತ್ತಮ ಛಾಯಾಗ್ರಾಹಕ – ಜಿ ಎಸ್ ಭಾಸ್ಕರ್

ಸೇರಿದಂತೆ ಹಲವರಿಗೆ ಪ್ರಶಸ್ತಿ ಲಭಿಸಿದೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment