Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಬಿಜೆಪಿ ನಾಯಕರು ಈ ಕಾರ್ಯಕ್ರಮಕ್ಕೆ ಬರಬೇಕಿತ್ತು : ಕಾಂಗ್ರೆಸ್ ಕಾರ್ಯಕ್ರಮದಲ್ಲಿ ಎಸ್.ಟಿ.ಸೋಮಶೇಖರ್ ಹೇಳಿಕೆ

---Advertisement---

ಬೆಳಗಾವಿ : ಮೂಲ ಕಾಂಗ್ರೆಸ್ಸಿಗರೇ ಆಗಿದ್ದ ಎಸ್‌ಟಿ.ಸೋಮಶೇಖರ್ ಬಿಜೆಪಿ ಸೇರಿದ್ದಾರೆ. ಆದರೆ ಕಳೆದ ಕೆಲವು ವರ್ಷಗಳಿಂದಾನೂ ಪರೋಕ್ಷವಾಗಿ ಕಾಂಗ್ರೆಸ್ ಜಿತೆಗೆ ಗುರುತಿಸಿಕೊಳ್ಳುತ್ತಿದ್ದಾರೆ. ಕಾಂಗ್ರೆಸ್ ನಾಯಕರನ್ನು ಭೇಟಿ ಮಾಡುವುದು, ಕಾಂಗ್ರೆಸ್ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವುದು ಮಾಡುತ್ತಿದ್ದಾರೆ. ವಾಪಾಸ್ ಕಾಂಗ್ರೆಸ್ ಗೆ ಹೋಗ್ತಾರೆ ಎಂದು ಎಲ್ಲರೂ ಮಾತನಾಡಿಕೊಂಡರು, ಸೋಮಶೇಖರ್ ಅವರಿಗೆ ನೇರವಾಗಿ ಪ್ರಶ್ನೆಯನ್ನ ಕೇಳಿದರು ಅವರಲ್ಲಿ ಉತ್ತರವಿಲ್ಲ. ನಾನು ಕಾಂಗ್ರೆಸ್ ಪಕ್ಷ ಸೇರುತ್ತೇನೆಂದು ಹೇಳಿಲ್ಲ ಅಂತಾರೆ. ಡಿಸಿಎಂ ಮೀಟ್ ಮಾಡಿದಾಗ, ಸಿಎಂ ಮೀಟ್ ಮಾಡಿದಾಗಲೂ ಕ್ಷೇತ್ರದ ಅಭಿವೃದ್ಧಿ ಎನ್ನುತ್ತಾರೆ. ಇದೀಗ ಬೆಳಗಾವಿಗೂ ಎಂಟ್ರಿಯಾಗಿದ್ದಾರೆ. ಗಾಂಧಿ ಸಮಾವೇಶದಲ್ಲಿ ಪಾಲ್ಗೊಂಡಿದ್ದು, ಇದು ಕಾಂಗ್ರೆಸ್ ಸಮಾವೇಶವಲ್ಲ ಸರ್ಕಾರದ್ದು. ಇದರಲ್ಲಿ ಎಲ್ಲರೂ ಭಾಗಿಯಾಗಬೇಕು ಎಂದಿದ್ದಾರೆ.

ಬೆಳಗಾವಿಯಲ್ಲಿ ಮಾತನಾಡಿದ ಎಸ್.ಟಿ.ಸೋಮಶೇಖರ್ ಅವರು, ಇಲ್ಲಿ ಎಲ್ಲರೂ ಇದ್ದಾರೆ. ಎಲ್ಲರೂ ಹಳಬರು. ಕಾಂಗ್ರೆಸ್ ನವರು ಇದ್ದಾರೆ, ಬಿಜೆಪಿನವರು ಇದ್ದಾರೆ, ಜೆಡಿಎಸ್ ನವರು ಇದ್ದಾರೆ. ಮೂಲ ಎಲ್ಲಾ ಇದ್ದಾರೆ. ಎಲ್ಲಾ ಸಿಕ್ತಾರೆ ಬಂದಿದ್ದೀನಿ ಎಂದಿದ್ದಾರೆ. ಇದೇ ವೇಳೆ ಮೂಲ ಪಕ್ಷಕ್ಕೆ ನೀವಷ್ಟೇನಾ ಅಥವಾ ಬೇರೆ ಯಾರನ್ನಾದರೂ ಕರೆದುಕೊಂಡು ಹೋಗ್ತೀರಾ ಎಂಬ ಪ್ರಶ್ನೆಗೆ ಈಗ ಸದ್ಯಕ್ಕೆ ನಾನಷ್ಟೇ. ಮುಂದಿನ ದಿನಗಳಲ್ಲಿ ನೋಡೋಣಾ ಎಂದಿದ್ದಾರೆ.

ಇದು ಸರ್ಕಾರದ ಕಾರ್ಯಕ್ರಮ ಅನ್ನೋದಕ್ಕಿಂತ ಮಹಾತ್ಮ ಗಾಂಧೀಜಿ ಅವರ ಪ್ರತಿಮೆಯ ಅನಾವರಣದ ಕಾರ್ಯಕ್ರಮ. ಇದಕ್ಕೆ ಎಲ್ಲರೂ ಬರಬೇಕಾಗಿತ್ತು. ಇದರಲ್ಲಿ ರಾಜಕಾರಣ ಅಂತ ಎಲ್ಲಾ ಏನಿಲ್ಲ. ಸರ್ಕಾರ ಕಾರ್ಯಕ್ರಮ ಮಾಡ್ತಾ ಇದೆ. ಪ್ರತಿಯೊಬ್ಬರು ಈ ಕಾರ್ಯಕ್ರಮದಲ್ಲಿ ಭಾಗವಹಿಸಬೇಕಿತ್ತು. ಎಲ್ಲದರಲ್ಲೂ ರಾಜಕೀಯ ಮಾಡ್ತಾ ಹೋಗುವುದು ಸರಿಯಿಲ್ಲ. ಅವರು ರಾಜಕಾರಣ ಮಾಡುವುದಕ್ಕೆ ಹೊರಟಿದ್ದಾರೆ. ನಾವೂ ರಾಜಕಾರಣ ಮಾಡ್ತಿಲ್ಲ. ಸರ್ಕಾರದ ಕಾರ್ಯಕ್ರಮಕ್ಕೆ ಬಂದಿದ್ದೀನಿ, ರಾಜಕೀಯ ಆಮೇಲೆ ಯೋಚನೆ ಮಾಡ್ತೀನಿ ಎಂದಿದ್ದಾರೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment

🏫 ಅಡ್ಮಿಷನ್ ಓಪನ್
🔒

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್

ಸ್ವಾಗತ...