ಅಖಿಲ ಭಾರತ ಶರಣ ಸಾಹಿತ್ಯ ಸಮ್ಮೇಳನದಲ್ಲಿ ಕೈಗೊಂಡ ನಿರ್ಣಯಗಳು

suddionenews
2 Min Read

ಚಿತ್ರದುರ್ಗ: 13ನೆಯ ಅಖಿಲ ಭಾರತ ಶರಣ ಸಾಹಿತ್ಯ ಸಮ್ಮೇಳನದಲ್ಲಿ ಸಮ್ಮೇಳನಾಧ್ಯಕ್ಷರಾದ ಡಾ. ಸಿದ್ದರಾಮ ಬೆಲ್ದಾಳರೊಂದಿಗೆ ಸಂವಾದ ಕಾರ್ಯಕ್ರಮ ನಡೆಯಿತು.

ಸಂವಾದದಲ್ಲಿ ಸಂವಾದಕರು ಹೆಚ್ಚಾಗಿ 12ನೆಯ ಶತಮಾನದ ಬಸವಣ್ಣನವರ ವಚನ ಸಾಹಿತ್ಯ ಎಷ್ಟರ ವiಟ್ಟಿಗೆ ಇವತ್ತಿನ ಜನಕ್ಕೆ ಸಾಕ್ಷಿಯಗಿದೆ? ಇವತ್ತಿನ ಸಾಮಾಜಿಕ ಜೀವನದಲ್ಲಿ ಸಾವಿರಾರು ಜಾತಿ ಉಪಜಾತಿ ಕಾಣುತ್ತೇವೆ ಇವು ಎಷ್ಟರ ಮಟ್ಟಿಗೆ ಪ್ರಗತಿಗೆ ಸಾಧ್ಯವಾಗಿವೆ? ಏಳು ಎಂಟು ನೂರು ವರ್ಷಗಳಲ್ಲಿ ಇದ್ದ ಸರ್ವಸಮಾನತೆ ವ್ಯವಸ್ಥೆ ಇಂದು ಏಕೆ ಕಾಣುವುದಕ್ಕೆ ಸಾಧ್ಯವಾಗುತ್ತಿಲ್ಲ? ಒಂದು ಸಂದರ್ಭದಲ್ಲಿ ಜಾತಿ ಹೆಮ್ಮರವಾಗಿ ಎದ್ದು ಕಾಣುತ್ತಿತ್ತು. ಆದರೆ ಈಗ ಜಾತಿ ಎನ್ನುವ ಅಂಶ ಕಡಿಮೆಯಾಗಿದೆ ಇದು ಹೇಗೆ ಬಣ್ಣಿಸಬಹುದು?ವಿಶ್ವಗುರು ಬಸವಣ್ಣನವರು ಸ್ತ್ರೀ ಸಮಾನತೆಯನ್ನು ಸೂಚಿಸಿದರು ಆದರೆ ಇವತ್ತಿನ ಸಮಾಜದಲ್ಲಿ ಆ ಭಾವನೆ ಸಿಗುತ್ತಿಲ್ಲ ಏಕೆ? ಎಂಬಿತ್ಯಾದಿ ಪ್ರಶ್ನೆಗಳು ಕೇಳಲ್ಪಟ್ಟವು.

ಈ ಪ್ರಶ್ನೆಗಳಿಗೆ ಸಮ್ಮೇಳನಾಧ್ಯಕ್ಷರಾದ ಡಾ. ಸಿದ್ದರಾಮ ಬೆಲ್ದಾಳರು ಉತ್ತರಿಸುತ್ತ, ಇವು ಬರವಣಿಗೆಗೆ ಸೀಮಿತವೋ ಅಥವಾ ಆಚರಣೆಗೆ ತರುವುದೋ. ನಮ್ಮಲ್ಲಿ ಸ್ವಜನಪಾತ ತೊಲಗಬೇಕು. ಕೇವಲ ಚರ್ಚೆಗೆ ಸೀಮಿತವಾಗಬಾರದು. ಸಾಮಾನತೆ ಬರಬೇಕಾದರೆ ನಾವು ನೀವು ಅದನ್ನು ಬೆಂಬಲಿಸಬೇಕು. ಲಿಂಗಾಯತ ಲಿಂಗ ಅಂದರೆ ಈ ಜಗದೊಳಗೆ ಒಳಗೊಂಡಿರುವ ಸೃಷ್ಟಿ ಎಂದರ್ಥ. ಅದನ್ನು ಅನುಸರಿಸುತ್ತಿರುವವನೆ ಲಿಂಗಾಯತ. ನಮ್ಮ ಜೀವನದಲ್ಲಿ ಆಚಾರವನ್ನೇ ನುಡಿಯುವವನು ಅಂತಃಕರಣದಲ್ಲಿ ಯಾವ ಕೆಟ್ಟಭಾವವಿಲ್ಲದೆ ಜಾತಿಯೆನ್ನುವ ಭ್ರಮೆಯನ್ನು ತೊಲಗಿಸಬೇಕು. ನಮ್ಮಲ್ಲಿ ಇನ್ನು ಸೃಜನ ಪಕ್ಷಪಾತವಿದೆ. ಅದು ಎಲ್ಲಿಯವರೆಗು ಇರುತ್ತದೆಯೋ ಅಲ್ಲಿಯವರೆಗೂ ಸಮಾನತೆ ಸಿಗುವುದು ಕಷ್ಟ. ಬಸವಾದಿ ಧರ್ಮದ ವಿಚಾರಗಳನ್ನು ಎಲ್ಲರೂ ಅನುಸರಿಸಿದರೆ ಆಗ ನಮ್ಮ ಸಮಾಜ ಸಂಪೂರ್ಣವಾಗಿ ಪರಿವರ್ತನೆಯಾಗುವುದು ಸಾಧ್ಯ ಎಂದು ನುಡಿದರು.

ಸಂವಾದದಲ್ಲಿ ಡಾ.ಕರಿಯಪ್ಪ ಮಾಳಗಿ, ಡಾ.ಕುರುವ ಬಸವರಾಜ್, ಡಾ.ಅಶೋಕ್‍ಕುಮಾರ್, ಶ್ರೀ ಭರಮಣ್ಣ, ಶ್ರೀಮತಿ ಪ್ರೇಮಕ್ಕಅಂಗಡಿ, ಡಾ. ಹೆಚ್.ಟಿ.ಶೈಲಜಾ, ಶ್ರೀ ಎಂ.ಎಸ್.ಶಿವಪ್ರಕಾಶ್, ಶ್ರೀ ಅಶೋಕ್‍ಗಂಗಾಧರ ಮಳಗಲಿ, ಶ್ರೀ ಎನ್.ಆರ್.ಜ್ಞಾನಮೂರ್ತಿ, ಶ್ರೀ ಪ್ರಕಾಶ್‍ಅಂಗಡಿ ಕನ್ನಳ್ಳಿ, ಡಾ. ಮಲ್ಲಿಕಾರ್ಜುನ ವಡ್ಡನಕೇರಿ, ಶ್ರೀ ಮಾರುತಿ ಮಲ್ಲಪ್ಪ ಶಿಡ್ಲಾಪುರ, ಪ್ರೊ.ಶಂಭುಲಿಂಗಕಾಮಣ್ಣ ಭಾಗವಹಿದ್ದರು.
ಕಾರ್ಯಕ್ರಮದಲ್ಲಿ ಸಿದ್ದಪ್ಪ ಶರಣಪ್ಪ ಹೊಟ್ಟಿ ಸ್ವಾಗತಿಸಿ, ಡಾÀ.ಹೆಳವರಹುಂಡಿ ಸಿದ್ದಪ್ಪ ನಿರೂಪಿಸಿ, ಡಾ.ಹನುಮಂತಪ್ಪ ವಂದಿಸಿದರು.
ರಾಜ್ಯ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಡಾ. ಸಿ.ಸೋಮಶೇಖರ್‍ರವರು ಬಹಿರಂಗ ಅಧಿವೇಶನದಲ್ಲಿ ಕೆಳಕಂಡ ನಿರ್ಣಯಗಳನ್ನು ಮಂಡಿಸಿದರು.

• ಸಾಂಸ್ಕøತಿಕ ನಾಯಕ ಬಸವಣ್ಣನವರು ಎಂದು ಸೂಚಿಸುವುದು.
• ಜಿಲ್ಲೆಗಳಲ್ಲಿ ಬಸವ ಭವನ ನಿರ್ಮಾಣ ಮಾಡುವುದು.
• ಕರ್ನಾಟಕ ಮತ್ತು ಹೊರ ರಾಜ್ಯಗಳಲ್ಲಿ ಶರಣರ ಸ್ಮಾರಕಗಳ ಪುನಃ ನಿರ್ಮಾಣ.
• ದಾವಣಗೆರೆ ವಿಶ್ವವಿದ್ಯಾಲಯಕ್ಕೆ ರಾಷ್ಟ್ರನಾಯಕ ಎಸ್.ನಿಜಲಿಂಗಪ್ಪನವರ ಹೆಸರಿಡುವುದು.
• ಮಠದ ಮುಂಭಾಗದ ಕೆರೆಯ ಮಧ್ಯ ಭಾಗದಲ್ಲಿ ಜಗದ್ಗುರು ಶ್ರೀ ಜಯದೇವ ಸ್ವಾಮಿಗಳ ಪುತ್ಥಳಿ ನಿರ್ಮಾಣ ಮಾಡುವುದು.
• 1ರಿಂದ 11ನೆಯ ತರಗತಿಯವರೆಗಿನ ಪಠ್ಯ ಪುಸ್ತಕದಲ್ಲಿ ಬಸವಾದಿ ಶರಣರ ವಚನಗಳನ್ನು ಸೇರ್ಪಡೆ ಮಾಡುವುದು.

ಸಮಾರಂಭದಲ್ಲಿ ಸನ್ಮಾನ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ಪಧಾದಿಕಾರಿಗಳು, ಜಿಲ್ಲಾಧ್ಯಕ್ಷರು, ಕದಳಿ ವೇದಿಕೆ ಜಿಲ್ಲಾಧ್ಯಕ್ಷರು, 13ನೆಯ ಅಖಿಲ ಭಾರತ ಶರಣ ಸಾಹಿತ್ಯ ಸಮ್ಮೇಳನ ಸ್ವಾಗತಿ ಸಮಿತಿ ಹಾಗೂ ಚಿತ್ರದುರ್ಗ ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನ ಪಧಾದಿಕಾರಿಗಳನ್ನು ಸನ್ಮಾನಿಸಲಾಯಿತು.

Share This Article
Leave a Comment

Leave a Reply

Your email address will not be published. Required fields are marked *