Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಗವಿ ಸಿದ್ದೇಶ್ವರ ಜಾತ್ರೆಗೆ ಎಷ್ಟು ಲಕ್ಷ ಮಂದಿ ಸೇರಿದ್ದರು ಗೊತ್ತಾ..?

---Advertisement---

ಕೊಪ್ಪಳದ ಗವಿ ಸಿದ್ದೇಶ್ವರ ಜಾತ್ರೆ ಅದ್ದೂರಿಯಾಗಿ ಮುಕ್ತಾಯವಾಗಿದೆ. ಅಲ್ಲಿನ ಜನರ ಆರಾಧ್ಯದೈವನಾಗಿರುವ ಗವಿ ಸಿದ್ದೇಶ್ವರ ಸ್ವಾಮಿಯ ರಥವನ್ನು ಎಳೆಯುವ ಮೂಲಕ ಜಾತ್ರೆಗೆ ತೆರೆ ಎಳೆಯಲಾಗಿದೆ. ಆದರೆ ಲಕ್ಷಾಂತರ ಭಕ್ತರು ಗವಿ ಸಿದ್ದೇಶ್ವರ ಸ್ವಾಮಿಯನ್ನು ಕಣ್ತುಂಬಿಕೊಂಡಿದ್ದಾರೆ. ಬಹಳ ಅದ್ದೂರಿಯಿಂದ ರಥೋತ್ಸವ ನಡೆಯಿತು. ಭಕ್ತರು ಬಾಳೆಹಣ್ಣು, ಹುತ್ತತ್ತಿ, ಹೂ ಅನ್ನು ಸಿದ್ದೇಶ್ವರ ಸ್ವಾಮಿ ಇದ್ದಂತ ರಥಕ್ಕೆ ಸಮರ್ಪಿಸಿದರು.

ರಥೋತ್ಸವದ ಮೆರವಣಿಗೆ ನೆರವೇರಿದಾಗ ಜೈ ಗವಿಸಿದ್ದೇಶ ಎಂಬ ಘೋಶ ವಾಕ್ಯ ಮೊಳಗಿತ್ತು. ಗವಿಸಿದ್ದೇಶ್ವರ ಜಾತ್ರೆಗೆ ಅಂದಾಜು 8 ಲಕ್ಷ ಮಂದಿ ಆಗಮಿಸಿದ್ದರು. ಪೊಲೀಸರು ಬಿಗಿ ಭದ್ರತೆ ಕೈಗೊಂಡಿದ್ದರು. ಹೈ ಸೆಕ್ಯುರಿಟಿ ಮಾಡಲಾಗಿತ್ತು. ಹದಿನೈದು ದಿನಗಳ ಕಾಲ ನಡೆಯುವ ಈ ಜಾತ್ರೆಯಲ್ಲಿ ಪೊಲೀಸರು ಸತತವಾಗಿ ಭದ್ರತೆಯನ್ನು ಒದಗಿಸಿದ್ದರು. ಎಲ್ಲಿಯೂ ಯಾವುದೇ ಅಹಿತಕರ ಘಟನೆ ನಡೆಯದಂತೆ ನೋಡಿಕೊಂಡ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ. ಅಜ್ಜನ ಜಾತ್ರಾ ಮಹೋತ್ಸವದ ಭದ್ರತೆ ಕುರಿತು ಮಾತನಾಡಿದ ಎಸ್​​ಪಿ ಡಾ.ರಾಮ್ ಎಲ್ ಅರಸಿದ್ಧಿ ಅವರು, ದಕ್ಷಿಣ ಭಾರತದ ಕುಂಭ ಎಂದೇ ಪ್ರಸಿದ್ಧವಾದ ಗವಿಸಿದ್ದೇಶ್ವರ ಜಾತ್ರೆಗೆ ಸುಮಾರು 8 ಲಕ್ಷಕ್ಕೂ ಅಧಿಕ ಜನರು ಆಗಮಿಸಿದ್ದಾರೆ. ಭದ್ರತೆ ಸಂಬಂಧ ಎಲ್ಲ ಸಕಲ ಸಿದ್ಧತೆ ಮಾಡಿಕೊಂಡಿದ್ದೇವೆ. ಐಜಿ, ಎಸ್​ಪಿ, ಇಬ್ಬರು ಅಡಿಷನಲ್ ಎಸ್​ಪಿ, 20 ಡಿಎಸ್​ಪಿಜಿ ಅಧಿಕಾರಿಗಳು, 30 ಇನ್​ಸ್ಪೆಕ್ಟರ್ಸ್​, 60 ಪಿಎಸ್​, 1500 ಪೊಲೀಸ್ ಕಾನ್​ಸ್ಟೆಬಲ್ಸ್, ಹೋಂ ಗಾರ್ಡ್ಸ್​, 5 ಕೆಎಸ್​ಆರ್​ಪಿ, 10 ಡಿಆರ್​ ಸೇರಿ ಭದ್ರತೆ ನೀಡಲಾಗುತ್ತಿದೆ ಎಂದು ಕೊಪ್ಪಳದ ಎಸ್ಪಿ ಡಾ.ರಾಮ್ ಎಲ್ ಅರಸಿದ್ಧಿ ಮಾಹಿತಿ ನೀಡಿದ್ದಾರೆ.

ಇನ್ನು ಗವಿಸಿದ್ದೇಶ್ವರ ಸ್ವಾಮಿಯವರ ರಥೋತ್ಸವ ಶುರುವಾಗುವುದಕ್ಕೂ ಮುನ್ನವೇ ಬೆಳಗಿನ ಜಾವವೇ ಗುಹೆಯಲ್ಲಿರುವ ಗವಿಸಿದ್ದೇಶ್ವರ ಸ್ವಾಮೀಜಿಯ ಗದ್ದುಗೆಗೆ ವಿಶೇಷ ಪೂಜೆ ಸಲ್ಲಿಸಲಾಗಿದೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment