ವರದಿ ಮತ್ತು ಫೋಟೋ ಕೃಪೆ
ಕೆ.ಎಂ. ಮುತ್ತುಸ್ವಾಮಿ ಕಣ್ಣನ್,
ಮೊ : 78998 64552
ಸುದ್ದಿಒನ್, ಚಿತ್ರದುರ್ಗ, ಜನವರಿ. 12 : ಕೆಳಗೋಟೆಯಲ್ಲಿರುವ ಅಂಬಾ ಭವಾನಿ ದೇವಸ್ಥಾನದಲ್ಲಿ ಭಾನುವಾರ ಛತ್ರಪತಿ ಶಿವಾಜಿ ಮಹಾರಾಜ್‍ರವರ ತಾಯಿ ಜೀಜಾಬಾಯಿರವರ 427 ನೇ ಜಯಂತಿಯನ್ನು ಆಚರಿಸಲಾಯಿತು.
ಮರಾಠ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಗೋಪಾಲ್‍ರಾವ್ ಜಾಧವ್ ಜೀಜಾಬಾಯಿರವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಮಾತನಾಡುತ್ತ ಜೀಜಾಬಾಯಿ ತನ್ನ ಪುತ್ರ ಶಿವಾಜಿಗೆ ಚಿಕ್ಕಂದಿನಿಂದಲೇ ರಾಮಾಯಣ, ಮಹಾಭಾರತದ ವಿಚಾರಗಳನ್ನು ಪರಿಚಯಿಸಿ ಧೈರ್ಯ, ಆತ್ಮವಿಶ್ವಾಸವನ್ನು ಮೂಡಿಸಿದ್ದರಿಂದ ದೇಶಭಕ್ತಿ ಬೆಳೆಯಿತು.
ಹಿಂದೂಗಳ ಮೇಲೆ ದಬ್ಬಾಳಿಕೆ ನಡೆಸುತ್ತಿದ್ದ ಮೊಘಲರ ಮೇಲೆ ಶಿವಾಜಿ ಯುದ್ದ ನಡೆಸಲು ನೆರವಾಯಿತು ಎಂದು ಸ್ಮರಿಸಿದರು.
ಮರಾಠ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಸುರೇಶ್‍ರಾವ್ ಜಾಧವ್, ಜೀಜಾಮಾತೆ ಮಹಿಳಾ ಮಂಡಳಿ ಅಧ್ಯಕ್ಷೆ ಉಷಭಾಯಿ, ಕಾರ್ಯದರ್ಶಿ ಶಾರದಾಬಾಯಿ, ಮಂಜುನಾಥ್
ಗಾಯಕ್ವಾಡ್, ಲಕ್ಷ್ಮಿರಾವ್‍ಜಾದವ್, ಗಣೇಶ್‍ಕುಮಾರ್ ಜಾಧವ್, ಮೋಹನ್‍ರಾವ ಗಾಟ್ಗೆ, ಹರೀಶ್‍ಜಾದವ್, ಕೃಷ್ಣೋಜಿರಾವ್ ಮೋರೆ, ವಿದ್ಯಾನಂದ ಲಾಡ್, ಚಂದ್ರೋಜಿರಾವ್ ಜಾದವ್, ನಾಗೇಂದ್ರರಾವ್ ಚವ್ಹಾಣ್, ಕಲಾಬಾಯಿ, ಪದ್ಮಬಾಯಿ ಮೋಹಿತೆ, ಶಾರದಾಬಾಯಿ ಜಾದವ್, ವೀಣಜಾದವ್, ಸುಚಿತ್ರಲಾಡ್, ಅಶ್ವಿನಿ ಚವ್ಹಾಣ್, ಸುಜಾತ ಗಾಯಕ್ವಾಡ್, ನಂದಿನಿ ಚವ್ಹಾಣ್ ಇವರುಗಳು ಜಯಂತಿಯಲ್ಲಿ ಉಪಸ್ಥಿತರಿದ್ದರು.