ಹೊಸ ವರ್ಷ ಹತ್ತಿರ ಬರ್ತಾ ಇದೆ. ಈ ಎಂಜಾಯ್ಮೆಂಟ್ ಮೂಡ್ ಗೆ ಒಂದೊಳ್ಳೆ ರ್ಯಾಪ್ ಸಾಂಗ್ ಇಲ್ಲದೆ ಹೋದರೆ ಹೇಗೆ ಹೇಳಿ. ಎಲ್ಲರಿಂದ ಡಿಮ್ಯಾಂಡ್ ಇದ್ದ ರ್ಯಾಪ್ ಸಾಂಗ್ ಬಂದೇ ಬಿಟ್ಟಿದೆ. ನ್ಯೂ ಇಯರ್ ನಾಲ್ಕು ದಿನ ಇರುವಾಗಲೇ ಚಂದನ್ ಶೆಟ್ಟಿ ಕಾಟನ್ ಕ್ಯಾಂಡಿ ಸಾಂಗ್ ರಿಲೀಸ್ ಮಾಡಿದ್ದಾರೆ. ಹೊಸ ವರ್ಷಕ್ಕೆ ಥ್ರಿಲ್ ಕೊಡೋದಕ್ಕೆ ಈ ರ್ಯಾಪ್ ಸಾಂಗ್ ರೆಡಿಯಾಗಿದೆ.
ಕಾಟನ್ ಕ್ಯಾಂಡಿ ಹಾಡಿನಲ್ಲಿ ಇವಳೇನಾ ಲಂಡನ್ ಹುಡುಗಿ.. ಮಂಗಳೂರು ಬಂಗಡ ಮೀನು.. ತಾನಾಗೇ ಬುಟ್ಟಿಗೆ ಬಿತ್ತು ಎಂದೆಲ್ಲ ಸಾಲುಗಳಿಂದ ಯುವಕರನ್ನ ಸೆಳೆಯುತ್ತಿದೆ. ಹಾಡಿನ ಆರಂಭದಲ್ಲಿಯೇ ಹುಡುಗಿ ಬ್ರೇಕಪ್ ಮಾಡಿಕೊಳ್ಳುತ್ತಾಳೆ. ಆತ ಅರ್ಧ ದಾರಿಯಲ್ಲಿಯೇ ಬಿಟ್ಟೋಗುತ್ತಾನೆ. ಅಲ್ಲಿಗೆ ಬಂದ ಚಂದನ್ ಶೆಟ್ಟಿ ಏನಾಯ್ತು ಎಂದು ಕೇಳುತ್ತಾರೆ. ಬ್ರೇಕಪ್ ಎಂದಾಗ ನಂದು ಕೂಡ ಎಂದು ಜೊತೆಯಾಗಿ ಸಾಗುತ್ತಾರೆ. ಆ ಬಳಿಕ ಬರುವಂತ ಸಾಲುಗಳು ಅದ್ಭುತ ಎನಿಸಿವೆ. ಹಾಡಿನಲ್ಲಿ ಹೆಜ್ಜೆ ಹಾಕಿದ್ದಾರೆ. ಅವರನ್ನ ಅದ್ಭುತವಾಗಿ ಚಂದನ್ ಶೆಟ್ಟಿ ವರ್ಣಿಸಿದ್ದಾರೆ.
ಬಿಗ್ ಬಾಸ್ ಮಾಜೊ ಸ್ಪರ್ಧಿಗಳಾಗಿದ್ದ ಚಂದನ್ ಶೆಟ್ಟಿ ಹಾಗೂ ನಿವೇದಿತಾ ಗೌಡ ಇಬ್ಬರು ಕೂಡ ಪ್ರೀತಿಸಿ ಮದುವೆಯಾಗಿದ್ದರು. ಆದರೆ ಇತ್ತೀಚೆಗೆ ತಮ್ಮ ದಾಂಪತ್ಯ ಜೀವನಕ್ಕೆ ಅಂತ್ಯವಾಡಿದ್ದರು. ಆದರೂ ಇಬ್ಬರು ತಮ್ಮ ಪ್ರೊಫೆಷನಲ್ ನಲ್ಲಿ ಬ್ಯುಸಿಯಾಗಿದ್ದಾರೆ. ಚಂದನ್ ಶೆಟ್ಟಿ ಸಾಂಗ್ ಮಾಡುತ್ತಾ ಲೈಫ್ ಎಂಜಾಯ್ ಮಾಡ್ತಾ ಇದ್ರೆ ಅತಚತ ನಿವೇದಿತಾ ಗೌಡ ಸಿನಿಮಾ, ರೀಲ್ಸ್ ಅಂತ ಬ್ಯುಸಿಯಾಗಿದ್ದಾರೆ. ಈ ಬ್ರೇಕಪ್ ಹಾಡು ಬಿಟ್ಟಿದ್ದಕ್ಕೆ ಚಂದನ್ ಶೆಟ್ಟಿ ಫ್ಯಾನ್ಸ್ ಖುಷಿಯಾಗಿದ್ದಾರೆ. ಬಿಟ್ಟು ಹೋದವರ ಮುಂದೆ ದೊಡ್ಡದಾಗಿ ಬೆಳೆಯಿರಿ ಎಂದಿದ್ದಾರೆ.