Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಮುನಿರತ್ನ ವಿರುದ್ಧ ಆರೋಪಗಳೆಲ್ಲ ಸತ್ಯ : ಇತ್ತ ಚಾರ್ಜ್ ಶೀಟ್ ಸಲ್ಲಿಕೆ.. ಅತ್ತ ಸಂತ್ರಸ್ತರಿಂದ ಆದಿಚುಂಚನಗಿರಿಯಲ್ಲಿ ಆಣೆ ಪ್ರಮಾಣ..!

---Advertisement---

ಬೆಂಗಳೂರು: ಶಾಸಕ ಮುನಿರತ್ನ ವಿರುದ್ಧ ಕೇಳಿ ಬಂದಿರುವ ಆರೋಪಗಳೆಲ್ಲ ಸತ್ಯವೆಂದು ಸಿಐಎಇ ವಿಶೆಷ ತನಿಖಾ ತಂಡ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ಆರೋಪ ಪಟ್ಟಿಯನ್ನು ಸಲ್ಲಿಸಿದೆ. ಅಂದ್ರೆ ತಮ್ಮ ವಿರೋಧಿಗಳನ್ನು ಹೆಚ್ಐವಿ ಪೀಡಿತರ ಮೂಲಕ ಹನಿಟ್ರ್ಯಾಪ್ ಬಲೆಗೆ ಬೀಳಿಸಿ ಏಡ್ಸ್ ಹರಡುವಿಕೆಯ ಕೆಲಸವನ್ನು ಮುನಿರತ್ನ ಮಾಡಿದ್ದರು ಎಂದು ಆರೋಪ ಪಟ್ಟಿಯಲ್ಲಿ ಉಲ್ಲೇಖ ಮಾಡಲಾಗಿದೆ.

ಇನ್ನು ಶಾಸಕ ಮುನಿರತ್ನ ಕೃತ್ಯಕ್ಕೆ ನೆರವು ನೀಡಿದ ಆರೋಪ ಹೊತ್ತಿದ್ದ ಪ್ರಕರಣದ ಎ3 ಸುಧಾಕರ್, ಎ7 ಪಿ.ಶ್ರೀನಿವಾದ್ ಮತ್ತು ಎ8 ಇನ್ಸ್‌ಪೆಕ್ಟರ್ ಐಯ್ಯಣ್ಣ ರೆಡ್ಡಿ ವಿರುದ್ಧ ದಾಖಲಾದ ಅಪಾದನೆ ಕೂಡ ತನಿಳೆಯಲ್ಲು ಸಾಬೀತಾಗಿದೆ. ಸದ್ಯ ಇನ್ಸ್‌ಪೆಕ್ಟರ್ ಬಿ.ಐಯ್ಯಣ್ಣ ಅವರನ್ನು ಎಸ್ಐಟಿ ಪೊಲೀಸರು ಈಗಾಗಲೇ ಬಂಧಿಸಿದ್ದಾರೆ. ಜನಪ್ರತಿನಿಧಿಗಳ ನ್ಯಾಯಾಲಯಕ್ಕೆ 2481 ಪುಟಗಳ ಚಾರ್ಜ್ ಶೀಟ್ ಸಲ್ಲಿಕೆ ಮಾಡಲಾಗಿದೆ. ಅತ್ಯಾಚಾರ, ಹೆಚ್ಐವಿ ರೊಇಗ ಹರಡುವಿಕೆ ಆರೋಪ ನಿಜವೆಂದು ಈ ಆರೋಪ ಪಟ್ಟಿಯಲ್ಲಿ ತಿಳಿಸಲಾಗಿದೆ.

ಇನ್ನು ಶಾಸಕ ಮುನಿರತ್ನ ಮೇಲೆ ಇತ್ತೀಚೆಗೆ ಮೊಟ್ಟೆ ಹೊಡೆದ ಘಟನೆ ನಡೆದಿತ್ತು. ಈ ಘಟನೆ ಸಂಬಂಧ ನೇರವಾಗಿ ಕುಸುಮಾ ಹಾಗೂ ಅವರ ತಂದೆ ಹನುಮಂತರಾಯಪ್ಪ ಅವರ ಮೇಲೆ ಆಪಾದನೆ ಮಾಡಲಾಗಿತ್ತು. ಈ ಸಂಬಂಧ ಮಂಜುನಾಥ ಸ್ವಾಮಿ ನಿಧಿಗೆ ಬಂದು ಪ್ರಮಾಣ ಮಾಡಲಿ ಎಂದು ಸವಾಲನ್ನು ಹಾಕಿದ್ದರು. ಇದೀಗ ಸಂತ್ರಸ್ತರು ಆದಿಚುಂಚನಗಿರಿಗೆ ಹೋಗಿ ಪ್ರಮಾಣ ಮಾಡಿದ್ದಾರೆ. ಮುನಿರತ್ನ ವಿರುದ್ಧ ತಿರುಗಿ ಬಿದ್ದಿದ್ದಾರೆ. ಮುನಿರತ್ನ ಅತ್ಯಾಚಾರ ಮಾಡಿದ್ದು, ಹೆಚ್ಐವಿ ವ್ಯಕ್ತಿಗಳಿಂದ ಹನಿಟ್ರ್ಯಾಪ್ ಮಾಡಿಸಿರೋದು ನಿಜ ಎಂದು ದೇವರ ಮುಂದೆ ಪ್ರಮಾಣ ಮಾಡಿದ್ದಾರೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment