ಕೊಬ್ಬರಿ ಎಣ್ಣೆ ಸಾಮಾನ್ಯವಾಗಿ ಎಲ್ಲರ ಮನೆಯಲ್ಲೂ ಇದ್ದೇ ಇರುತ್ತದೆ. ಹಲವರು ಪ್ಯೂರ್ ಕೊಬ್ಬರಿ ಎಣ್ಣೆಯನ್ನ ಬಳಸಿದರೆ, ಇನ್ನು ಕೆಲವರು ರೆಡಿಮೇಡ್ ಎಣ್ಣೆಯನ್ನು ತಂದು ಬಳಸುತ್ತಾರೆ. ಹಲವು ಕಡೆ ಕೊಬ್ಬರಿ ಎಣ್ಣೆಯನ್ನ ಅಡುಗೆಗೂ ಉಪಯೋಗಿಸುತ್ತಾರೆ. ಬಾಟೆಲ್ ಕೊಬ್ಬರಿ ಎಣ್ಣೆಯನ್ನು ತಲೆ ಕೂದಲಿನ ಹಾರೈಕೆಗೆ ಬಳಸಲಾಗುತ್ತದೆ. ಕೊಬ್ಬರಿ ಎಣ್ಣೆಯಿಂದ ಚರ್ಮವೂ ಹೊಳಪು ಬೀರುತ್ತದೆ ಎಂಬುದು ಸಾಮಾನ್ಯವಾಗಿ ಹಲವರಿಗೆ ಗೊತ್ತಿದೆ. ಹಾಗಾದ್ರೆ ಕೊಬ್ಬರಿ ಎಣ್ಣೆಯಿಂದ ಇನ್ನು ಏನೆಲ್ಲಾ ಉಪಯೋಗವಿದೆ ನೋಡೋಣಾ ಬನ್ನಿ.
* ನಿಮ್ಮ ಚರ್ಮ ಹೊಳಪನ್ನು ಪಡೆಯಬೇಕೆಂದರೆ ಹೀಗೆ ಮಾಡಿ. ಒಂದು ಚನಚ ಕೊಬ್ಬರಿ ಎಣ್ಣೆಯನ್ನು ತೆಗೆದುಕೊಂಡು ನಿಮ್ಮ ಅಂಗೈಗೆ ಹಾಕಿಕೊಂಡು ನಿಧಾನವಾಗಿ ಮುಖ, ಕುತ್ತಿಗೆ ಭಾಗಕ್ಕೆ ಮಸಾಜ್ ಮಾಡಿ. ಅರ್ಧ ಗಂಟೆ ಬಿಟ್ಟು ಸ್ವಚ್ಛವಾಗಿ ತೊಳೆದುಕೊಳ್ಳಿ. ಆಮೇಲೆ ನೋಡಿ ಚರ್ಮದ ಕಾಂತಿ ಹೇಗೆ ಬದಲಾಗುತ್ತದೆ ಎಂಬುದನ್ನ.
* ಸಾಮಾನ್ಯವಾಗಿ ಕೊಬ್ಬರಿ ಎಣ್ಣೆಯನ್ನ ಎಲ್ಲರೂ ಅಡುಗೆಗೆ ಬಳಸುವುದಿಲ್ಲ. ಕೆಲವೊಂದು ಭಾಗದಲ್ಲಿ ಮಾತ್ರ ಬಳಸುತ್ತಾರೆ. ಆದರೆ ಕೊಬ್ಬರಿ ಎಣ್ಣೆಯನ್ನು ಅಡುಗೆಯಲ್ಲಿ ಬಳಸುವುದರಿಂದ ರೋಗ ನಿರೋಧಕ ಶಕ್ತಿಯೂ ಹೆಚ್ಚಾಗುತ್ತದೆ.
* ಕೊಬ್ಬರಿ ಎಣ್ಣೆಯಲ್ಲಿ ಒಗ್ಗರಣೆ ಹಾಕುವುದರಿಂದ ಈ ಆಹಾರ ಸೇವನೆಯಿಂದ ಸ್ಮರಣಾ ಶಕ್ತಿ ಹೆಚ್ಚಾಗುತ್ತದೆ.
* ಬಹಳ ಮುಖ್ಯವಾಗಿ ದೇಹದಲ್ಲಿನ ಕೆಟ್ಟ ಕೊಲೆಸ್ಟ್ರಾಲ್ ಅನ್ನು ತೊಡೆದು ಹಾಕಲು ಸಹಾಯವಾಗುತ್ತದೆ. ಕೊಬ್ಬರಿ ಎಣ್ಣೆಯ ಆಹಾರದಿಂದ ಒಳ್ಳೆಯ ಕೊಲೆಸ್ಟ್ರಾಲ್ ಉತ್ಪತ್ತಿಯಾಗುತ್ತದೆ.
* ಕೊಬ್ಬರಿ ಎಣ್ಣೆಯಿಂದ ಬಾಯಿ ಮುಕ್ಕಳಿಸುವುದರಿಂದ ದವಡೆಯ ಸಮಸ್ಯೆ ವಾಸಿಯಾಗುತ್ತದೆ.
* ತೂಕ ಕಡಿಮೆ ಮಾಡಿಕೊಳ್ಳಲು ನಾನಾ ಸಾಹಸ ಮಾಡುವವರು ಕೊಬ್ಬರಿ ಎಣ್ಣೆ ಬಳಸುವುದರಿಂದ ಬೇಗ ತೂಕ ಕಡಿಮೆಯಾಗಲಿದೆ
* ರಕ್ತ ಸಂಚಲನ ಕಡಿಮೆ ಇದೆ ಎನಿಸಿದರೆ ಆ ಜಾಗಕ್ಕೆ ಮಸಾಜ್ ಮಾಡುವುದರಿಂದ ರಕ್ತಸಂಚಲನ ಸುಗಮವಾಗುತ್ತದೆ. ಹೀಗಾಗಿ ಕೊಬ್ಬರಿ ಎಣ್ಣೆಯನ್ನು ಬಳಸುವುದರಿಂದ ನಾನಾ ಉಪಯೋಗಗಳು ಸಿಗಲಿದೆ.