Notice: Undefined index: options in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಕ್ರೀಡಾಪಟುಗಳಿಗೆ ಸಹಾಯಧನ ಪರಿಷ್ಕರಣೆಗೆ ಸಿಎಂ ಕ್ರಮ ಸ್ವಾಗತಾರ್ಹ : ಎನ್.ಡಿ.ಕುಮಾರ್

Facebook
Twitter
Telegram
WhatsApp

 

ವರದಿ ಮತ್ತು ಫೋಟೋ ಕೃಪೆ
ಸುರೇಶ್ ಪಟ್ಟಣ್,
ಮೊ : 98862 95817

ಸುದ್ದಿಒನ್, ಚಿತ್ರದುರ್ಗ ಡಿ. 18 : ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸ್ಪರ್ಧಿಸುವ ಕ್ರೀಡಾಪಟುಗಳಿಗೆ ರಾಜ್ಯ ಸರಕಾರದಿಂದ ನೀಡಲಾಗುವ ಸಹಾಯಧನ ಮೊತ್ತವನ್ನು ಹೆಚ್ಚಿಸಲು ಕ್ರಮ ಕೈಗೊಳ್ಳಲಾಗುವುದಾಗಿ ಬೆಳಗಾವಿ ವಿಧಾನಸಭೆಯ ಅಧಿವೇಶನದಲ್ಲಿ ಭರವಸೆಯನ್ನು ನೀಡಿರುವ ಮಖ್ಯಮಂತ್ರಿ ಸಿದ್ದರಾಮಯ್ಯರವರ ಮಾತಿಗೆ ಅಂತರಾಷ್ಟ್ರೀಯ ಕ್ರೀಡಾಪಟು, ಹಾಗೂ ಚಿತ್ರದುರ್ಗಜಿಲ್ಲಾ ಕಾಂಗ್ರೆಸ್ನ ಹಿಂದುಳಿದ ವರ್ಗಗಳ ಘಟಕದ ಜಿಲ್ಲಾಧ್ಯಕ್ಷರಾದ ಎನ್.ಡಿ.ಕುಮಾರ್ ಸ್ವಾಗತಿಸಿದ್ದಾರೆ.

 

ಈ ಬಗ್ಗೆ ಹೇಳಿಕೆಯನ್ನು ನೀಡಿರುವ ಅವರು ರಾಜ್ಯ ಕ್ರೀಡಾ ಪ್ರಾಧಿಕಾರದ ಮಾನ್ಯತೆ ಪಡೆದ ರಾಜ್ಯ ಕ್ರೀಡಾ ಸಂಸ್ಥೆಗಳು ರಾಷ್ಟ್ರ ಮಟ್ಟದ ಕ್ರೀಡಾಕೂಟಗಳಿಗೆ ಕಳುಹಿಸುವ ವಿದ್ಯಾರ್ಥಿಗಳನ್ನೂ ಒಳಗೊಂಡು ಕ್ರೀಡಾಪಟುಗಳಿಗೆ 2ನೇ ದರ್ಜೆ ರೈಲು/ ಬಸ್ ಪ್ರಯಾಣ ಭತ್ಯೆ, 200 ರೂ ದಿನಭತ್ಯೆ, 1000 ರೂ. ಕ್ರೀಡಾಗಂಟು, ಸ್ಥಳೀಯ ಪ್ರಯಾಣ ಶುಲ್ಕ ಪೂರ್ವಭಾವಿ ತರಬೇತಿ ಶಿಬಿರದಲ್ಲಿ ಭಾಗವಹಿಸುವವರಿಗೂ 200 ರೂ. ಸಹಾಯಧನ, ಹಾಗೂ ಅಂತಾರಾಷ್ಟ್ರೀಯ ಮಟ್ಟದ ಕ್ರೀಡಾಕೂಟಗಳಲ್ಲಿ ಭಾಗವಹಿಸಲು ಮಾನ್ಯತೆ ಪಡೆದ ರಾಷ್ಟ್ರೀಯ ಕ್ರೀಡಾ ಫೆಡರೇಷನ್ಗಳಿಗೆ ಕೇಂದ್ರ ಸರಕಾರ ಅನುದಾನ ಒದಗಿಸುತ್ತಿದೆ. ಮಾನ್ಯತೆ ಪಡೆದ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಕ್ರೀಡಾಕೂಟಗಳಲ್ಲಿ ಭಾಗವಹಿಸಿ ಪದಕ ವಿಜೇತರಾದ ಕರ್ನಾಟಕದ ಕ್ರೀಡಾಪಟುಗಳಿಗೆ ನಗದು ಬಹುಮಾನದ ಜತೆಗೆ, ಶೈಕ್ಷಣಿಕ ಶುಲ್ಕ ಮರುಪಾವತಿ ರೂಪದಲ್ಲಿ ಪ್ರೋತ್ಸಾಹಧನ ನೀಡಲಾಗುತ್ತಿದೆ. 5 ವರ್ಷಗಳ ಹಿಂದೆ ನಿಗದಿಯಾಗಿರುವ ಈ ಭತ್ಯೆ, ಸಹಾಯಧನವನ್ನು ಪರಿಷ್ಕರಣೆ ಮಾಡಲು ಕ್ರಮ ವಹಿಸಲಾಗುವುದು ಎಂದು ತಿಳಿಸಿರುವುದನ್ನು ಎನ್.ಡಿ.ಕುಮಾರ್ ಸ್ವಾಗತಿಸಿದ್ದಾರೆ.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಕೋಲಾರದಲ್ಲಿ ಭೀಕರ ಅಪಘಾತ : ನಾಲ್ವರು ಸಾವು..!

ಕೋಲಾರ: ಕೂಲಿ ಮಾಡಿ ಅಂದಿನ ಜೀವನ ಅಂದು ನಡೆಸಿದರೆ ಸಾಕಾಗಿರುತ್ತೆ. ಸಾವಿರ ಕನಸಿಲ್ಲದಿದ್ದರು ನಾಳೆಯ ಕನಸೊತ್ತು ಕೂಲಿಗೆ ಹೋಗುತ್ತಿದ್ದವರು ಅವರು. ಆದರೆ ಯಮರಾಯ ಇಂದು ಅವರನ್ನು ತಮ್ಮ ವಿಳಾಸಕ್ಕೆ ಕರೆದುಕೊಂಡು ಹೋಗಿದೆ. ಕೂಲಿ ಮುಗಿಸಿ

ಚಿತ್ರದುರ್ಗ ಜಿ.ಪಂ. ಎದುರು ಹಮಾಲಿ ಕಾರ್ಮಿಕರು ಮತ್ತು ಗ್ರಾ. ಪಂ. ನೌಕರರ ಪ್ರತಿಭಟನೆ

  ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್, ಮೊ : 78998 64552 ಸುದ್ದಿಒನ್, ಚಿತ್ರದುರ್ಗ, ಡಿಸೆಂಬರ್. 18 : ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಕರ್ನಾಟಕ ರಾಜ್ಯ ಹಮಾಲಿ ಕಾರ್ಮಿಕರ ಫೆಡರೇಶನ್, ಗ್ರಾಮ

ಚಿತ್ರದುರ್ಗ | ಕೂಸಿನ ಮನೆ ತರಬೇತಿಗೆ ತಾ.ಪಂ. ಇಓ ವೈ.ರವಿಕುಮಾರ್ ಚಾಲನೆ

  ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್ ಮೊ : 78998 64552 ಸುದ್ದಿಒನ್, ಚಿತ್ರದುರ್ಗ, ಡಿಸೆಂಬರ್. 18 : ಏಳು ದಿನಗಳ ಕಾಲ ನಡೆಯುವ ಕೂಸಿನ ಮನೆ ತರಬೇತಿಗೆ ಆರೈಕೆದಾರರು ಗೈರು

error: Content is protected !!