Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಚಿತ್ರದುರ್ಗ | ತಾಲ್ಲೂಕಿನ ಈ ಊರುಗಳಲ್ಲಿ ಡಿಸೆಂಬರ್ 09 ರಿಂದ 23 ರವರೆಗೆ ವಿದ್ಯುತ್ ವ್ಯತ್ಯಯ

---Advertisement---

 

ಚಿತ್ರದುರ್ಗ. ಡಿ.07: ಕೆಪಿಟಿಸಿಎಲ್ ಬೃಹತ್ ಕಾಮಗಾರಿ ವತಿಯಿಂದ 66 ಕೆ.ವಿ ದಾವಣಗೆರೆ-ಚಿತ್ರದುರ್ಗ ಲೈನ್-1ರ ಟ್ಯಾಪ್ ಪಾಯಿಂಟ್‍ನಿಂದ 2.196 ಕಿಮೀ ಉದ್ದಕ್ಕೂ ಭರಮಸಾಗರ ವಿ.ವಿ ಕೇಂದ್ರಕ್ಕೆ 2.196 ಕಿಮೀ ದೂರದ ನಿರ್ಮಾಣಕ್ಕೆ  ಕೊಯೋಟ್ ಕಂಡಕ್ಟರ್‍ನೊಂದಿಗೆ ಜೋಡಿ ಪ್ರಸರಣ ಮಾರ್ಗದ ಮೇಲಿರುವ ಜೋಡಿ ಮಾರ್ಗದಿಂದ ಒಂಟಿ ಪ್ರಸರಣ ಮಾರ್ಗದ ಮೇಲಿರುವ ಒಂಟಿ ಮಾರ್ಗ ಪರಿವರ್ತಿಸುವ ಮೂಲಕ ಅಸ್ತಿತ್ವದಲ್ಲಿರುವ 66/11 ಕೆವಿ ಭರಮಸಾಗರ ವಿ.ವಿ ಕೇಂದ್ರಕ್ಕೆ ಲೀಲೋ ವ್ಯವಸ್ಥೆ  ಒದಗಿಸಲು 1 ಸಂಖ್ಯೆಯ 66 ಕೆವಿ ಟಿ.ಬಿಯನ್ನು 66/11 ಕೆ.ವಿ ಭರಮಸಾಗರ ವಿ.ವಿ ಕೇಂದ್ರದಲ್ಲಿ ನಿರ್ಮಾಣ ಕಾರ್ಯಕ್ಕಾಗಿ ಇದೇ ಡಿ.09 ರಿಂದ 23 ರವರೆಗೆ (ಪರ್ಯಾಯ ದಿನಗಳಂದು ಡಿ.09, 11, 13, 15, 17, 19, 21 ಮತ್ತು ಡಿ.23ರಂದು) ಬೆಳಿಗ್ಗೆ 9 ರಿಂದ ಸಂಜೆ 5 ರವರೆಗೆ  ಭರಮಸಾಗರ ವಿ.ವಿ ಕೇಂದ್ರದಿಂದ ಸರಬರಾಜಾಗುವ ಎಲ್ಲಾ 11 ಕೆ.ವಿ ಮಾರ್ಗಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.

ವಿದ್ಯುತ್ ಅಡಚಣೆಯಾಗುವ ಪ್ರದೇಶಗಳು: ಹೆಗ್ಗೆರೆ, ಎಮ್ಮೆಹಟ್ಟಿ, ನಲ್ಲಿಕಟ್ಟೆ, ಕೋಳಾಳ್ ಎನ್.ಜೆ.ವೈ, ಹೆಗ್ಗಡೆಹಾಳ್,  ವಿಜಾಪುರ, ಶಿವನಕೆರೆ, ನಂದಿಹಳ್ಳಿ,  ಬಹದ್ದೂರ್ ಘಟ್ಟ , ಅಡವಿ ಗೊಲ್ಲರಹಳ್ಳಿ, ಭರಮಸಾಗರ , ಪಮೇರಹಳ್ಳಿ, ಕೋಗುಂಡೆ, ಎಸ್.ಕೆ.ಎಮ್ ಕೈಗಾರಿಕಾ ಪ್ರದೇಶ, ಕೋಡಿಹಳ್ಳಿ, ಅರಳಕಟ್ಟೆ ಮತ್ತು ಸುತ್ತ ಮುತ್ತಲಿನ ಗ್ರಾಮಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.
ಡಿ.09 ರಿಂದ 18 ರವರೆಗೆ ವಿದ್ಯುತ್ ವ್ಯತ್ಯಯ :

ಕೆಪಿಟಿಸಿಎಲ್ ಬೃಹತ್ ಕಾಮಗಾರಿ ವತಿಯಿಂದ ಚಿತ್ರದುರ್ಗ 66  ಕೆ.ವಿ ವಿದ್ಯುತ್ ವಿತರಣಾ ಕೇಂದ್ರದಿಂದ ಪಂಡರಹಳ್ಳಿ ವಿ.ವಿ ಕೇಂದ್ರಕ್ಕೆ ವಿದ್ಯುತ್ ಸರಬರಾಜಾಗುವ ಮಾರ್ಗ-3ರ ವಾಹಕ ಬದಲಾವಣೆ ಮತ್ತು ಗೋಪುರಗಳನ್ನು ನಿರ್ಮಾಣ ಮಾಡುವ ಕಾಮಗಾರಿಗೆ ಪಂಡರಹಳ್ಳಿ, ಚಿತ್ರಹಳ್ಳಿ, ಹೆಚ್.ಡಿ.ಪುರ ಮತ್ತು ಹೊಳಲ್ಕೆರೆ 66/11 ಕೆ.ವಿ ವಿ.ವಿ ಕೇಂದ್ರದಿಂದ ಸರಬರಾಜಾಗುವ ಎಲ್ಲಾ 11 ಕೆ.ವಿ ಮಾರ್ಗಗಳಲ್ಲಿ ಮಾರ್ಗ ಮುಕ್ತತೆ ತೆಗೆದುಕೊಳ್ಳುವುದರಿಂದ ಇದೇ ಡಿ.9 ರಿಂದ 18 ರವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ.

 

ವಿದ್ಯುತ್ ಅಡಚಣೆಯಾಗುವ ಪ್ರದೇಶಗಳು: ಪಂಡರಹಳ್ಳಿ, ಅನ್ನೆಹಾಳು, ಹುಲ್ಲೂರು, ಜಾನುಕೊಂಡ, ಸಿದ್ದಾಪುರ, ಗೋಡಬನಾಳು, ಸೊಂಡೆಕೊಳ, ಸೊಲ್ಲಾಪುರ, ಕುರುಬರಹಳ್ಳಿ, ಬೆಟ್ಟದ ನಾಗೇನಹಳ್ಳಿ, ಹೆಚ್.ಡಿ.ಪುರ, ಟಿ.ನುಲೇನೂರು, ಬೋದಿಪುರ, ತಾಳ್ಯ, ಮತ್ತಿಘಟ್ಟ, ತೆಕಲವಟ್ಟಿ, ಚಿತ್ರಹಳ್ಳಿ, ಬಿ.ಜಿ.ಹಳ್ಳಿ, ಮದ್ದೇರು, ಕೇಶವಪುರ, ಕೊಂಡಾಪುರ, ಹೊಳಲ್ಕೆರೆ, ಚನ್ನಪಟ್ಟಣ, ಹರೇನಹಳ್ಳಿ, ಪುಣಜೂರು, ಎನ್.ಜಿ.ಹಳ್ಳಿ, ಗುಂಡೇರಿ ಮತ್ತು ಸುತ್ತಮುತ್ತಲಿನ ಗ್ರಾಮಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.

ಗ್ರಾಹಕರು ಸಹಕರಿಸಬೇಕು ಎಂದು ಬೆಸ್ಕಾಂ ಕಾರ್ಯನಿರ್ವಾಹಕ ಇಂಜಿನಿಯರ್ ಪ್ರಕಟಣೆಯಲ್ಲಿ ಕೋರಿದ್ದಾರೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment

🏫 ಅಡ್ಮಿಷನ್ ಓಪನ್
🔒

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್

ಸ್ವಾಗತ...