Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಸಚಿವ ಸ್ಥಾನಕ್ಕಾಗಿ ಕಾಯುತ್ತಿದ್ದವರಿಗೆ ಶಾಕ್ : ಸಿಎಂ ಸಿದ್ದರಾಮಯ್ಯ ಹೇಳಿದ್ದೇನು..?

---Advertisement---

ಮಂಡ್ಯ: ಇತ್ತೀಚೆಗಷ್ಟೇ ಸಂಪುಟ ಪುನರ್ ರಚನೆ ಆಗುತ್ತೆ ಎಂಬ ಚರ್ಚೆ ಜೋರಾಗಿತ್ತು. ಸಂಪುಟ ಪುನರ್ ರಚನೆಯಾಗುತ್ತೆ ಎಂದಾಗಲೇ ಈ ಬಾರಿ ನಮಗೂ ಅವಕಾಶ ಸಿಗುತ್ತೆ ಎಂಬನಿರೀಕ್ಷೆ ಹಲವರಿಗೆ ಹುಟ್ಟಿಕೊಂಡಿತ್ತು. ಅದರಲ್ಲೂ ಸಿದ್ದರಾಮಯ್ಯ ಅವರ ಸಂಪುಟ ಸೇರುವುದಕ್ಕೆ ಹಲವರು ಆಕಾಂಕ್ಷುಗಳಾಗಿದ್ದರು. ಯಾರೂ ಹೊರಗೆ ಹೋಗ್ತಾರೆ..? ಯಾರೂ ಹೊರಗೆ ಬರ್ತಾರೆ ಎಂಬ ಚರ್ಚೆಗಳು ಶುರುವಾಗಿತ್ತು. ಅಷ್ಟೇ ಅಲ್ಲ ಮಾಜಿ ಸಚಿವರಿಗೂ ಮತ್ತೆ ಅವಕಾಶಗಳು ಸಿಗಬಹುದಾ ಎಂಬ ಮಾತುಗಳು ಕೇಳಿ ಬಂದಿದ್ದವು. ಆದರೆ ಇದೀಗ ಸಿಎಂ ಸಿದ್ದರಾಮಯ್ಯ ಅವರು ಸಂಪುಟ ಪುನರ್ ರಚನೆ ಆಗುವುದರ ಬಗ್ಗೆ ಮಂಡ್ಯದಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ. ‘ಪುನರ್ ರಚನೆ ಸದ್ಯಕ್ಕೆ ಆಗಲ್ಲ. ನಾನೇಳಿದ್ದೀನಾ..?’ ಎಂದು ಪ್ರಶ್ನೆ ಮಾಡಿದ್ದಾರೆ.

ಮಂಡ್ಯದಲ್ಲಿ ಮಾತನಾಡಿದ ಸಿಎಂ ಸಿದ್ದರಾಮಯ್ಯ ಅವರು, ಯಾರು ಹೇಳುತ್ತಾರೆ ಎಂಬುದು ಮುಖ್ಯವಲ್ಲ, ಅಂತಿಮವಾಗಿ ಹೈಕಮಾಂಡ್ ನಾಯಕರು ನಂಗೆ ಸೂಚನೆ ಕೊಡಬೇಕು, ಬಳಿಕ ನಾನು ತೀರ್ಮಾನ ತೆಗೆದುಕೊಳ್ಳಬೇಕು. ಹೈಕಮಾಂಡ್ ನಾಯಕರು ನಂಗೆ ಹೇಳಿಯೂ ಇಲ್ಲ. ನಾನು ತೀರ್ಮಾನ ತೆಗೆದುಕೊಂಡು ಇಲ್ಲ‌.

 

ಇದೇ ವೇಳೆ ಹಾಸನದಲ್ಲಿ ಹಮ್ಮಿಕೊಂಡಿದ್ದ ಸಮಾವೇಶದ ಬಗ್ಗೆ ಮಾತನಾಡಿದ ಸಿಎಂ ಸಿದ್ದರಾಮಯ್ಯ ಅವರು, ನಾಳೆ ಹಾಸನದಲ್ಲಿ ಕಾಂಗ್ರೆಸ್ ಪಕ್ಷ ಹಾಗೂ ಸ್ವಾಭಿಮಾನಿ ಒಕ್ಕೂಟದ ಜಂಟಿಯಲ್ಲಿ ಸಮಾವೇಶ ನಡೆಯುತ್ತಿದೆ. ಅದು ಹೆಚ್ಚಾಗಿ ಸ್ವಾಭಿಮಾನಿ ಒಕ್ಕೂಟದ ಜನಗಳನ್ನ ಕರೆದುಕೊಂಡು ಬರುತ್ತಾರೆ. ಹೆಸರೇನು ಬದಲಾಗಿಲ್ಲ. ಮೊದಲಿನಿಂದಾನೂ ಹಾಗೇ ಇದೆ. ಕಾಂಗ್ರೆಸ್ ಪಕ್ಷ ಕುಇಡ ಸೇರಿಕೊಂಡು ನಡೆಸುತ್ತಿರುವ ಕಾರಣ ಜಂಟಿ ಆಶಯದಲ್ಲಿ ನಡೆಯುತ್ತಿದೆ ಎಂದು ಹೇಳುವ ಮೂಲಕ ಹಲವು ಪ್ರಶ್ನೆಗಳಿಗೆ ತೆರೆ ಎಳೆದಿದ್ದಾರೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment

🏫 ಅಡ್ಮಿಷನ್ ಓಪನ್
🔒

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್

ಸ್ವಾಗತ...