Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಚಿತ್ರದುರ್ಗ | ಡಿಸೆಂಬರ್ 06 ರಂದು ಜಿಲ್ಲಾ ಮಟ್ಟದ ಯುವಜನೋತ್ಸವ

---Advertisement---

ಚಿತ್ರದುರ್ಗ. ನ.29: ಡಿಸೆಂಬರ್ 06 ರಂದು ಜಿಲ್ಲಾ ಮಟ್ಟದ ಯುವಜನೋತ್ಸವ ಕಾರ್ಯಕ್ರಮ ಆಯೋಜಿಸಲಾಗಿದೆ. ಈ ಹಿಂದೆ ಡಿ.7 ರಂದು ನಿಗದಿಯಾಗಿದ್ದ ಕಾರ್ಯಕ್ರಮವನ್ನು, ಅಂದು ಗ್ರಾಮಲೆಕ್ಕಾಧಿಕಾರಿ ಸ್ಪರ್ಧಾತ್ಮ ಪರೀಕ್ಷೆ ಇರುವ ಕಾರಣ ಡಿ.6 ರಂದು ನಡೆಸಲು ತೀರ್ಮಾನಿಸಲಾಗಿದೆ. ನಗರದ ಸರ್ಕಾರಿ ವಿಜ್ಞಾನ ಕಾಲೇಜಿನಲ್ಲಿ ಜಿಲ್ಲಾ ಮಟ್ಟದ ಯುವಜನೋತ್ಸವ ಸ್ಪರ್ದೆಗಳು ನಡೆಯಲಿವೆ.

ಜಾನಪದ ಗೀತೆ, ನೃತ್ಯ, ಕಥೆ ಹಾಗೂ ಕವನ ಬರಹ, ಭಾಷಣ, ಚಿತ್ರಕಲೆ, ವಿಜ್ಞಾನ ಮೇಳ, ಮೊಬೈಲ್ ಫೋಟೊಗ್ರಫಿ ಹಾಗೂ ಉತ್ತಮ ಕರಕುಶಲ ವಸ್ತು ಪ್ರದರ್ಶನ, ಸಿದ್ದಉಡುಪು ಹಾಗೂ ಆಹಾರ ಸಂಸ್ಕರಣೆ ವಿಭಾಗಗಳಲ್ಲಿ ಸ್ಪರ್ಧೆಗಳು ಜರುಗಲಿವೆ. ಚಿತ್ರದುರ್ಗ ಜಿಲ್ಲೆಯವರು ಅಥವಾ ಜಿಲ್ಲೆಯಲ್ಲಿ ವ್ಯಾಸಾಂಗ ಮಾಡುತ್ತಿರುವ 15 ವರ್ಷ ಮೇಲ್ಪಟ್ಟ ಹಾಗೂ ಸೆಪ್ಟಂಬರ್ ಅಂತ್ಯಕ್ಕೆ 29 ವರ್ಷದ ಒಳಗಿರುವವರು ಸ್ಪರ್ಧೆಗಳಲ್ಲಿ ಭಾಗವಹಿಸಬಹದು. ಜಾನಪದ ಗೀತೆ ಹಾಗೂ ನೃತ್ಯ ವಿಭಾಗದಲ್ಲಿ ವೈಯಕ್ತಿಕ ಹಾಗೂ ಗುಂಪಾಗಿ ಸ್ಪರ್ಧಿಸಹುದು.

ಚಿತ್ರಗೀತೆಗಳನ್ನು ಹಾಡಲು ಅವಕಾಶ ಇರುದಿಲ್ಲ. ಗುಂಪು ವಿಭಾಗದಲ್ಲಿ ಗರಿಷ್ಠ 10 ಜನರು ಭಾಗವಹಿಸಬಹುದು. ಪಂಚಪ್ರಾಣ ಎಂಬ ವಿಷಯದೊಂದಿಗೆ ಯುವಜನೋತ್ಸವ ಆಚರಿಸಲಾಗುತ್ತಿದ್ದು, ಕಥೆ, ಕವನ ಹಾಗೂ ಭಾಷಣ ಸ್ಪರ್ಧೆಗಳು ಈ ವಿಷಯವನ್ನು ಆಧಾರಿಸಿ ಸ್ಪರ್ದಿಸಬೇಕು. ಚಿತ್ರಕಲೆಯಲ್ಲಿ ಒಬ್ಬ ಸ್ಪರ್ಧಿಗೆ ಒಂದು ರಚನೆ ಮಾತ್ರ ಅವಕಾಶವಿರುತ್ತದೆ. ವಿಜ್ಞಾನ ಮೇಳದಲ್ಲಿ ಗುಂಪು ಹಾಗೂ ವೈಯಕ್ತಿಕವಾಗಿ ಭಾಗವಹಿಸಬಹುದು. ಮೊಬೈಲ್ ಪೋಟೋಗ್ರಫಿ, ಉತ್ತಮ ಕರಕುಶಲ ವಸ್ತು ಪ್ರದರ್ಶನ, ಸಿದ್ದಉಡುಪು ಹಾಗೂ ಆಹಾರ ಸಂಸ್ಕರಣೆ ವಿಭಾಗಗಳಲ್ಲಿ ಸೃಜನಶೀಲನೆ, ನಾವಿನ್ಯತೆ, ಕ್ರೀಯಾಶೀಲತೆ ಹಾಗೂ ತಾಂತ್ರಿಕ ಅಂಶಗಳಿಗೆ ಹೆಚ್ಚಿನ ಒತ್ತು ನೀಡಿ ವಿಜೇತರನ್ನು ಆಯ್ಕೆ ಮಾಡಲಾಗುವುದು. ಅಭ್ಯರ್ಥಿಗಳು, ವಾಸಸ್ಥಳ ದಢೀಕರಣ ಅಥವಾ ವಿದ್ಯಾಸಂಸ್ಥೆಗಳಿAದ ಪಡೆದ ದೃಢೀಕರಣ ಪತ್ರಗಳೊಂದಗೆ ಸ್ಪರ್ಧೆಗಳಲ್ಲಿ ಭಾಗಹಿಸಬೇಕು. ವಯಸ್ಸಿನ ದೃಢೀಕರಣಕ್ಕೆ ಎಸ್.ಎಸ್.ಎಲ್.ಸಿ ಅಂಕಪಟ್ಟಿ, ಮುಖ್ಯೋಪಾಧ್ಯರ ದೃಢೀಕರಣಗಳ ಜೊತೆಗೆ ಮತದಾರ ಗುರುತಿನ ಚೀಟಿ, ಆಧಾರ್‌ಗಳನ್ನು ಪರಿಗಣಿಸಲಾಗುವುದು. ಪ್ರತಿ ಸ್ಪರ್ಧೆಯಲ್ಲಿ ಪ್ರಥಮ, ದ್ವೀತಿಯ ಹಾಗೂ ತೃತೀಯ ಸ್ಥಾನಗಳಲ್ಲಿ ವಿಜೇತರನ್ನು ಆಯ್ಕೆ ಮಾಡಲಾಗುವುದು. ನಗದು ಬಹುಮಾನೊಂದಿಗೆ ಪುರಸ್ಕಾರ ಮಾಡಲಾಗುವುದು. ಯುವಜನೋತ್ಸವಕ್ಕೆ ಆಗಮಿಸುವ ಸ್ಪರ್ಧಿಗಳಗಿಗೆ ಮಧ್ಯಾಹ್ನದ ಉಪಹಾರ ವ್ಯವಸ್ಥೆ ಇರಲಿದೆ. ಇದರೊಂದಿಗೆ ಜಿಲ್ಲೆಯ ವಿವಿಧ ಭಾಗಗಳಿಂದ ಆಗಮಿಸುವ ಸ್ಪರ್ಧಿಗಳಿಗೆ ಪ್ರಯಾಣದರ ಭತ್ಯೆ ನೀಡಲಾಗುವುದು. ಆಸಕ್ತರು  MyBharatPortal   ನಲ್ಲಿ ನೊಂದಾಯಿಸಿಕೊಳ್ಳಬಹುದು. ಹೆಚ್ಚಿನ ಮಾಹಿತಿಗಾಗಿ ಮೊಬೈಲ್ ಸಂಖ್ಯೆ 7760028435 ಹಾಗೂ 9945038684ಗೆ ಕರೆ ಮಾಡಬಹುದು ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕಿ ಎಸ್.ಎಂ.ನೆಲವಗಿ ತಿಳಿಸಿದ್ದಾರೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment

🏫 ಅಡ್ಮಿಷನ್ ಓಪನ್
🔒

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್

ಸ್ವಾಗತ...