Notice: Undefined index: options in /home/nagendra/public_html/content/plugins/elementor-pro/modules/theme-builder/widgets/site-logo.php on line 124

ತಲೈವಾ ಸತತ ಪ್ರಯತ್ನದ ನಡುವೆಯೂ ಮಗಳು-ಅಳಿಯ ಅಧಿಕೃತವಾಗಿ ದೂರ..!

Facebook
Twitter
Telegram
WhatsApp

ತಮಿಳು ನಟ ಧನುಶ್ ಹಾಗೂ ಐಶ್ವರ್ಯಾ ದಾಂಪತ್ಯಕ್ಕೆ ಇಂದು ಅಧಿಕೃತವಾಗಿ ತೆರೆ ಬಿದ್ದಿದೆ. ಚೆನ್ನೈನ ಕುಟುಂಬ ಕಲ್ಯಾಣ ನ್ಯಾಯಾಲಯವು ಡಿವೋರ್ಸ್ ಮಂಜೂರು ಮಾಡಿದೆ. ಇಬ್ಬರ ಒಮ್ಮತದ ಆಧಾರದ ಮೇಲೆಯೇ ಡಿವೋರ್ಸ್ ನೀಡಿದೆ. 2004ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದ ಈ ಜೋಡಿ 20 ವರ್ಷಗಳಿಗೆ ದಾಂಪತ್ಯ ಅಂತ್ಯ ಮಾಡಿಕೊಂಡಿದ್ದಾರೆ.

ಧನುಷ್ ಹಾಗೂ ಐಶ್ವರ್ಯಾ ನಡುವಿನ ದಾಂಪತ್ಯ ಜೀವನದಲ್ಲಿ ಬಿರುಕು ಮೂಡಿದೆ ಎಂದು ತಿಳಿದಾಗಲೇ ಸೂಪರ್ ಸ್ಟಾರ್ ರಜನೀಕಾಂತ್ ಮಗಳ ಜೀವನವನ್ನು ಸರಿ ಮಾಡುವ ಪ್ರಯತ್ನ ಮಾಡಿದರು. ಮಗಳ ಹಾಗೂ ಅಳಿಯನ ಸಮಸ್ಯೆ ಬಗೆ ಹರಿಸುವುದಕ್ಕೆ ನೋಡಿದರು. ಆದರೆ ಆ ಪ್ರಯತ್ನ ಸಫಲವಾಗಲಿಲ್ಲ. ಕಡೆಗೂ ಅಳಿಯ ಹಾಗೂ ಮಗಳು ದೂರವಾಗಿದ್ದಾರೆ. ಕಾನೂನಿನ ಮೂಲಕವೇ ಡಿವೋರ್ಸ್ ಪಡೆದಿದ್ದಾರೆ.

ಐಶ್ವರ್ಯಾ ಹಾಗೂ ಧನುಶ್ ಪ್ರೀತಿಸಿ ಮದುವೆಯಾದವರು. ಧನುಶ್ ಗಿಂತ ಐಶ್ಚರ್ಯಾ ದೊಡ್ಡವರಾಗಿದ್ದರು ಸಹ ಗುರು ಹಿರಿಯರ ಸಮ್ಮುಖದಲ್ಲಿ, ಎಲ್ಲರು ಒಪ್ಪಿ ಮದುವೆ ಮಾಡಿಕೊಟ್ಟಿದ್ದರು. ಮದುವೆಯಾದ ಮೇಲೆ 18 ವರ್ಷಗಳ ಕಾಲ ಈ ಜೋಡಿ ಒಟ್ಟಿಗೆ ಇತ್ತು. ಆದರೆ 2022ರ ಜನವರಿಯಲ್ಲಿ ಧನುಶ್ ಮತ್ತು ಐಶ್ವರ್ಯಾ ದೂರ ಆಗ್ತಿರುವ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಹಾಕಿಕೊಂಡಿದ್ದರು. ಆ ನಂತರದಲ್ಲಿ ಎರಡು ಕುಟುಂಬದವರು ಮಕ್ಕಳ ಸಂಸಾರವನ್ನು ಸರಿ ಮಾಡುವ ಪ್ರಯತ್ನ ಮಾಡಿದರು. ಅದು ಸಾಧ್ಯವಾಗಲಿಲ್ಲ. ಬಳಿಕ ಧನುಶ್ ಹಾಗೂ ಐಶ್ಚರ್ಯಾ ಮಕ್ಕಳ ವಿಚಾರಕ್ಕಷ್ಟೇ ಒಂದಾಗುತ್ತಿದ್ದರು. ಧನುಶ್ ಹಾಗೂ ಐಶ್ವರ್ಯಾಗೆ ಇಬ್ಬರು ಮಕ್ಕಳಿದ್ದಾರೆ. ತಮಿಳು ಚಿತ್ರರಂಗದಲ್ಲಿ ಈ ಜೋಡಿಯನ್ನು ಲವ್ಲಿ ಕಪಲ್ ಅಂತಾನೇ ಕರೆಯುತ್ತಿದ್ದರು. ಇದೀಗ ದೂರ ದೂರ ಆಗಿದ್ದಾರೆ.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಅಡಿಕೆ ಬೆಳೆಗಾರರಿಗೆ ಧೈರ್ಯ ತುಂಬಲು ಕೇಂದ್ರ ಸಚಿವರ ಆಗಮನ : ಡಿ.6ಕ್ಕೆ ಶಿವಮೊಗ್ಗದಲ್ಲಿ ಸಮಾವೇಶ

ಶಿವಮೊಗ್ಗ: ಕಳೆದ ಕೆಲವು ದಿನಗಳ ಹಿಂದೆ ಏರಿದ್ದ ಅಡಿಕೆ ಬೆಲೆ ದಿಢೀರನೆ ಕುಸಿತವಾಗಿದೆ. ಅಷ್ಟೇ ಅಲ್ಲ ಎಲ್ಲೆಲ್ಲಿಂದಲೋ ಅಡಿಕೆ ಮಾರುಕಟ್ಟೆಗೆ ಬರುತ್ತಿದ್ದು, ರಾಜ್ಯದ ಅಡಿಕೆಗೆ ಬೆಲೆಯೂ ಕಡಿಮೆಯಾಗುತ್ತಿದೆ, ಡಿಮ್ಯಾಂಡು ಕುಸಿಯುತ್ತಿದೆ. ಇದರಿಂದ ರಾಜ್ಯದ ಅಡಿಕೆ

ವಾಣಿ ವಿಲಾಸ ಜಾಲಶಯ ಕೋಡಿ ಬೀಳಲು ಕ್ಷಣಗಣನೆ..!

ಚಿತ್ರದುರ್ಗ: ಹಿರಿಯೂರು ತಾಲೂಕಿನ ವಾಣಿ ವಿಲಾಸ ಜಲಾಶಯ ಕೋಡಿ ಬೀಳುವುದಕ್ಕೆ ಕ್ಷಣಗಣನೆ ಶುರುವಾಗಿದೆ. ಈ ಬಾರಿಯ ಮುಂಗಾರು-ಹಿಂಗಾರು ಮಳೆ ಉತ್ತಮವಾಗಿ ಬಿದ್ದದ್ದರಿಂದ ಜಲಾಶಯ ಕೋಡಿ ಬೀಳುವ ನಿರೀಕ್ಷೆಯೂ ಹೆಚ್ಚಾಗಿತ್ತು. ಆದರೆ ಇನ್ನೇನು ಕೋಡಿ ಬೀಳುತ್ತದೆ

ಯುವಜನತೆ ಮೊಬೈಲ್‍ ಬಿಟ್ಟು ರಂಗಭೂಮಿಯೆಡೆಗೆ ಆಸಕ್ತಿ ವಹಿಸಬೇಕು : ಶ್ರೀ ಶಿವಲಿಗಾಂನದ ಸ್ವಾಮೀಜಿ

    ಸುದ್ದಿಒನ್, ಚಿತ್ರದುರ್ಗ, ನವೆಂಬರ್. 28 : ನಾಟಕಗಳು ಮನುಷ್ಯನಲ್ಲಿ ಸೃಜನಶೀಲತೆಯನ್ನು ಹೆಚ್ಚಿಸಿ ಶಿಸ್ತು, ಕಲ್ಪನಾಶಕ್ತಿ, ವಿವೇಚನಾಶಕ್ತಿ, ತಾರ್ಕಿಕತೆ, ಗ್ರಹಿಕೆ, ಅನುಕರಣೆ, ಸಮಯ ಪಾಲನೆ, ಏಕಾಗ್ರತೆ ಹೆಚ್ಚುಸುವಲ್ಲಿ ಸಹಕಾರಿಯಾಗಿದೆ ಆದರಿಂದ ಯುವಜನತೆ ತಮ್ಮನು

error: Content is protected !!