Notice: Undefined index: options in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಮಾನವೀಯತೆ ಮೆರೆದ ದುನಿಯಾ ವಿಜಯ್ ಗೆ ಸಂಕಷ್ಟ..!

Facebook
Twitter
Telegram
WhatsApp

ಕೆಲವೊಮ್ಮೆ ಮಾಡುವ ಒಳ್ಳೆ ಕೆಲಸಗಳೇ ಜೀವನಕ್ಕೆ ಮುಳ್ಳಾಗಿ ಬಿಡುತ್ತವೆ. ಈ ಮಾತು ಈಗ ದುನಿಯಾ ವಿಜಯ್ ಗೆ ಪಕ್ಕಾ ಮ್ಯಾಚ್ ಆಗ್ತಾ ಇದೆ. ಭೀಮಾ ಸಿನಿಮಾ ಸಮಯದಲ್ಲಿ ಜೈಲು ಹಕ್ಕಿಗಳಿಗೆ ಬಿಡುಗಡೆಯ ಭಾಗ್ಯ ಕಲ್ಪಿಸಿದ್ದರು. ಸುಮಾರು ವರ್ಷ ಜೈಲಿನಲ್ಲಿಯೇ ಇದ್ದ ಆರೋಪಿಗಳಿಗೆ ಜಾಮೀನು ಸಿಕ್ಕಿರಲಿಲ್ಲ. ಅಂತ ಹತ್ತು ಆರೋಪಿಗಳಿಗೆ ಲಕ್ಷ ಲಕ್ಷ ಶ್ಯೂರಿಟಿ ಕೊಟ್ಟು ಬಿಡುಗಡೆ ಮಾಡಿಸಿದ್ದರು. ಇದೀಗ ಅದೇ ದುನಿಯಾ ವಿಜಯ್ ಅವರಿಗೆ ಸಂಕಷ್ಟ ತಂದೊಡ್ಡುತ್ತಿದೆ.

ಸುರೇಶ್ ಎಂಬಾತ ಇತ್ತೀಚೆಗೆ ಕೋಪದ ಕೈಗೆ ಬುದ್ದಿ ಕೊಟ್ಟು ಎರಡು ಕೊಲೆಯನ್ನು ಮಾಡಿದ್ದ. ಆತನನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಈಗ ಕೊಲೆಯ ತನಿಖೆ ನಡೆಯುತ್ತಿದ್ದು, ಸುರೇಶ್ ಗೆ ಶ್ಯೂರಿಟಿ ಕೊಟ್ಟವರ ಬಗ್ಗೆಯೂ ಮಾಹಿತಿ ಕಲೆ ಹಾಕಲಾಗಿದೆ. ಅಂದು ಶ್ಯೂರಿಟಿ ಕೊಟ್ಟು ಬಿಡಿಸಿದ್ದ ದುನಿಯಾ ವಿಜಯ್ ಅವರನ್ನು ವಿಚಾರಣೆ ನಡೆಸಲಿದ್ದಾರೆ. ದುನಿಯಾ ವಿಜಯ್ ಅವರಿಗೆ ಪೊಲೀಸರು ನೋಟೀಸ್ ನೀಡಲಿದ್ದಾರೆ. ಬಳಿಕ ದುನಿಯಾ ವಿಜಯ್ ಅವರು ಸುರೇಶ್ ಗೆ ಜಾಮೀನು ಕೊಡಿಸಿದ ಬಗ್ಗೆ ಪ್ರಶ್ನೆಗಳು ಎದುರಾಗಬಹುದು.

ಬಿಡಿಸಲು ಯಾರೂ ಇಲ್ಲದ ಕಾರಣ ಜೈಲಿನಲ್ಲಿಯೇ ಕಾಲ ಕಳೆಯುತ್ತಿದ್ದ ಸುರೇಶ್ ಪಾಲಿಗೆ ದೇವರಾಗಿ ಬಂದದ್ದು ದುನಿಯಾ ವಿಜಯ್‌. ಜೈಲಿನಿಂದ ಹೊರ ಬಂದ ಮೇಲೂ ಅಲ್ಲೋ ಇಲ್ಲೋ ಕೆಲಸ ಮಾಡಿಕೊಂಡು ಕಾಲ ಕಳೆಯುತ್ತಿದ್ದ ಸುರೇಶ್, ಕೊಲೆಯಾದ ವ್ಯಕ್ತಿಗಳು ರೇಗಿಸಿದರು ಎಂಬ ಕಾರಣಕ್ಕೆ ಮತ್ತದೆ ತಪ್ಪನ್ನ ಮಾಡಿದ್ದಾನೆ. ಈಗ ಮತ್ತೆ ಜೈಲಿಗೆ ಹೋಗಿದ್ದಾನೆ. ಅದೃಷ್ಟ ಚೆನ್ನಾಗಿದ್ದು ಹೊರಗೆ ಬಂದಿದ್ದಾತ ಮತ್ತದೆ ಜೈಲು ಸೇರಿದ್ದಾನೆ. ಇದರಿಂದ ದುನಿಯಾ ವಿಜಯ್ ಗೂ ಸಂಕಷ್ಟ ಎದುರಾಗಿದೆ.

Facebook
Twitter
Telegram
WhatsApp
suddionenews

suddionenews

Leave a Comment

Top Stories

ನವೆಂಬರ್ 30 ರಂದು ಸಿಟಿ ಇನ್ಸ್ಟಿಟ್ಯೂಟ್ ಚುನಾವಣೆ : ನ್ಯಾಯವಾದಿ ವಿಶ್ವನಾಥ್ ನಾಮಪತ್ರ ಸಲ್ಲಿಕೆ

    ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್ ಮೊ : 78998 64552 ಸುದ್ದಿಒನ್, ಚಿತ್ರದುರ್ಗ, ನವೆಂಬರ್. 17 : ಸಿಟಿ ಇನ್ಸ್‌ಟಿಟ್ಯೂಟ್ ನ ವ್ಯವಸ್ಥಾಪನಾ ಸಮಿತಿಗೆ ನಡೆಯುವ ಚುನಾವಣೆಯಲ್ಲಿ ಖಜಾಂಚಿ

ಕೋಟೆ ಜಾಗ ಕಬಳಿಕೆ : ಶ್ರೀನಿವಾಸ್, ಭಾಸ್ಕರ್ ವಿರುದ್ಧ ದೀಪು ಆರೋಪ

  ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್ ಮೊ : 78998 64552 ಸುದ್ದಿಒನ್, ಚಿತ್ರದುರ್ಗ, ನವೆಂಬರ್. 17 : ಮುಕ್ತಿಧಾಮ ಚಿತಾಗಾರದಿಂದ ಸ್ವಲ್ಪ ಮುಂದೆ ಕೋಟೆಗೆ ಸೇರಿದ ಒನ್ನೆ ಬಾಗಿಲಿನ ಜಾಗಕ್ಕೆ

ಬ್ರೈಟ್ ಮೈಂಡ್ಸ್ ಅಕಾಡೆಮಿ ಉದ್ಘಾಟಿಸಿದ ಡಾ.ಬಸವಕುಮಾರ ಸ್ವಾಮೀಜಿ

  ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್ ಮೊ : 78998 64552 ಸುದ್ದಿಒನ್, ಚಿತ್ರದುರ್ಗ, ನವೆಂಬರ್. 17 : ಪದವಿ ಜೊತೆ ಕೌಶಲ್ಯ ಶಿಕ್ಷಣವಿದ್ದಾಗ ಮಾತ್ರ ಉತ್ತಮ ಬದುಕು ಕಟ್ಟಿಕೊಳ್ಳಬಹುದು ಎಂದು

error: Content is protected !!