Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಭೈರತಿ ರಣಗಲ್ ಭರ್ಜರಿ ಯಶಸ್ಸು : ಆದರೆ ಶಿವಣ್ಣ ವಿರುದ್ದ ಅಪ್ಪು ಫ್ಯಾನ್ಸ್ ಬೇಸರ..!

---Advertisement---

 

ಬೆಂಗಳೂರು, ನವೆಂಬರ್. 16 : ಶಿವಣ್ಣ ಅಭಿನಯದ ಭೈರತಿ ರಣಗಲ್ ಸಿನಿಮಾ ರಾಜ್ಯಾದ್ಯಂತ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಮಫ್ತಿ ಸಿನಿಮಾ ನೋಡಿದ ಅಭಿಮಾನಿಗಳು ಕೆಲ ವರ್ಷಗಳಾದರು ಕೂಡ ಅದೇ ಗುಂಗಲ್ಲಿ ಇದ್ದರು. ಮತ್ತೆ ನರ್ತನ್ ಹಾಗೂ ಶಿವಣ್ಣ ಒಂದಾಗಿದ್ದು ಅಭಿಮಾನಿಗಳಿಗೆ ಹಬ್ಬದೂಟ ಬಡಿಸಿದೆ. ಶಿವಣ್ಣನ ಎಂಟ್ರಿಗೆ ಫ್ಯಾನ್ಸ್ ದಿಲ್ ಖುಷ್ ಆಗಿದ್ದಾರೆ. ಸಿನಿ ಪ್ರೇಮಿಗಳು ಒಂದೊಳ್ಳೆ ಸಿನಿಮಾ ನೋಡಿದ ಖುಷಿಯಲ್ಲಿದ್ದಾರೆ. ಆದರೆ ಇದರ ನಡುವೆ ಅಪ್ಪು ಅಭಿಮಾನಿಗಳಿಗೆ ಭೈರತಿ ರಣಗಲ್ ಸಿನಿಮಾ ನಡೆ ಬೇಸರ ತರಿಸಿದೆ.

ಅಪ್ಪು ಅಗಲಿಕೆ ಬರಿಸಲಾರದ ನಷ್ಟ. ಯಾವುದೇ ಸಿನಿಮಾ ರಿಲೀಸ್ ಆದರೂ ಸಿನಿಮಾ ತಂಡದವರು ಆರಂಭದಲ್ಲಿಯೇ ಅಪ್ಪು ಫೋಟೋ ಹಾಕಿ ನಮನ ಸಲ್ಲಿಸುತ್ತಾರೆ. ಆದರೆ ಭೈರತಿ ರಣಗಲ್ ಸಿನಿಮಾ ಆ ರೀತಿ ಮಾಡಿಲ್ಲ. ಅಪ್ಪು ಫೋಟೋವನ್ನೇ ಬಳಸಿಕೊಂಡಿಲ್ಲ. ದೊಡ್ಮನೆ ಪ್ರೊಡಕ್ಷನ್ ನಲ್ಲೇ ತಯಾರಾದ ಸಿನಿಮಾ ಇದು. ಗೀತಾ ಪಿಕ್ಚರ್ಸ್ ಬ್ಯಾನರ್ ನಡಿ ಭೈರತಿ ರಣಗಲ್ ನಿರ್ಮಾಣವಾಗಿದೆ. ಹೀಗಾಗಿ ಅಪ್ಪು ಫ್ಯಾನ್ಸ್ ನೇರವಾಗಿಯೇ ತಮ್ಮ ಬೇಸರವನ್ನು ಹೊರ ಹಾಕಿದ್ದಾರೆ.

ಇದಕ್ಕೆ ಶಿವಣ್ಣ ಕೂಡ ಪ್ರತಿಕ್ರಿಯೆ ನೀಡಿದ್ದಾರೆ. ಖಾಸಗಿ ಚಾನೆಲ್ ನ ಕಾರ್ಯಕ್ರಮ ಒಂದರಲ್ಲಿ ಭೈರತಿ ರಣಗಲ್ ಬಗ್ಗೆ ಮಾತನಾಡಲಾಗಿದೆ. ಆ ಸಮಯದಲ್ಲಿ ಅಭಿಮಾನಿಯೊಬ್ಬರ ಕರೆಯನ್ನು ಸ್ವೀಕರಿಸಲಾಗಿತ್ತು. ಅಪ್ಪು ಅಭಿಮಾನಿ ಈ ಪ್ರಶ್ನೆಯನ್ನು ನೇರವಾಗಿ ಶಿವಣ್ಣನಿಗೆ ಕೇಳಿದ್ದಾರೆ. ‘ನಿಮಗಿಂತ ಮೊದಲು ನಾನು ಅಪ್ಪು ಅಭಿಮಾನಿ. ಯಾವುದೇ ಸಿನಿಮಾ ರಿಲೀಸ್ ಆದ್ರೂ ಫಸ್ಟ್ ಡೇ ಫಸ್ಟ್ ಶೋ ನೋಡ್ತಾ ಇದ್ದೆ. ಅಪ್ಪು ಇಲ್ಲ ಎಂದು ನಾನ್ಯಾವತ್ತು ಭಾವಿಸಿಲ್ಲ. ಅದಕ್ಕೆ ಅಪ್ಪು ಫೋಟೋ ಹಾಕಿಲ್ಲ. ಅಪ್ಪು ಇರಬೇಕಾಗಿರುವುದು ಫೋಟೋದಲ್ಲಲ್ಲ ನಮ್ಮ ಮನಸ್ಸಲ್ಲಿ’ ಎಂದು ಶಿವಣ್ಣ ಉತ್ತರ ಕೊಟ್ಟಿದ್ದಾರೆ.

ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ

ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.

ವರದಿ ಮಾಡುವುದು ಹೇಗೆ?

  • ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ವಾಟ್ಸಪ್ ಮಾಡಿ: 90369 74702

ನಾವು ಏನು ಮಾಡುತ್ತೇವೆ?

  • ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
  • ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
  • ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment