Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಚೈತ್ರಾ ಕುಂದಾಪುರ ಪಕ್ಕಾ ನಾಟಕ ಮಾಡ್ತಿದ್ದಾರಾ..? ಕಿಚ್ಚನ ಪಂಚಾಯ್ತಿಯಲ್ಲಿ ಶಾಕ್..!

---Advertisement---

 

ಬಿಗ್ ಬಾಸ್ ಮನೆಗೆ ಹೋಗುವವರು ಗೆಲ್ಲುವುದಕ್ಕಾಗಿ ಕೆಲವೊಮ್ಮೆ ವಿಭಿನ್ನ ಸ್ಟಾಟರ್ಜಿ ಬಳಸುತ್ತಾರೆ. ಕಪ್ ಗೆಲ್ಲುವವರೆಗೂ ಏನಾದರೊಂದು ಮಾಡುತ್ತಲೆ ಇರುತ್ತಾರೆ. ಆದರೆ ಚೈತ್ರಾ ಕುಂದಾಪುರ ನಾಟಕ ಪೀಕ್ ಲೆವೆಲ್ ಗೆ ಹೋಗಿದ್ಯಾ ಎಂಬ ಪ್ರಶ್ನೆ ಕಾಡುವುದಕ್ಕೆ ಶುರುವಾಗಿದೆ. ಅದಕ್ಕೆ ಕಾರಣವೂ ಚೈತ್ರಾ ಕುಂದಾಪುರ ನಡೆ. ಇಂದು ಕಿಚ್ಚನ ಪಂಚಾಯ್ತಿಯಲ್ಲಿ ಚೈತ್ರಾ ವಿಚಾರವೇ ಹೈಲೇಟ್ ಆಗಿದೆ‌.

ಬಿಗ್ ಬಾಸ್ ಕೊಟ್ಟ ಟಾಸ್ಕ್ ನಲ್ಲಿ ಚೈತ್ರಾ ಕುಂದಾಪುರ ಕುಸಿದು ಬಿದ್ದಿದ್ದರು. ಪ್ರಜ್ಞೆ ತಪ್ಪಿ ಬಿದ್ದ ಚೈತ್ರಾ ಅವರಿಗೆ ಬಿಗ್ ಬಾಸ್ ಚಿಕಿತ್ಸೆಯ ಸಲುವಾಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದರು. ಒಂದು ದಿನ ಆಸ್ಪತ್ರೆಯಲ್ಲಿಯೇ ಉಳಿದ ಚೈತ್ರಾ ಬಿಗ್ ಬಾಸ್ ಮನೆಗೆ ಬಂದರು. ಆದರೆ ಬಿಗ್ ಬಾಸ್ ಮನೆಗೆ ಬಂದ ಚೈತ್ರಾ ಬೇರೆಯದ್ದೇ ಆಟ ಆಡುವುದಕ್ಕೆ ಶುರು ಮಾಡಿದರು. ಬಿಗ್ ಬಾಸ್ ಮುಖ್ಯ ನಿಯಮವನ್ನೇ ಮುರಿದು ಬಿಟ್ಟರು. ಹೊರಗಡೆಯ ಜನ ತಮ್ಮನ್ನು ಹೇಗೆ ನೋಡ್ತಾರೆ, ಏನು ಮಾತಾಡ್ತಾ ಇದಾರೆ ಎಂಬುದೆಲ್ಲವನ್ನು ತಿಳಿದುಕೊಂಡು ಬಂದಿದ್ದ ಚೈತ್ರಾ, ಮನೆ ಮಂದಿಗೆ ಅದನ್ನೇ ಹೇಳಿದ್ದಾರೆ.

ಇಂದು ವಾರದ ಕಥೆ ಕಿಚ್ಚನ ಜೊತೆ ಪ್ರೋಮೋವನ್ನು ಈಗಾಗಲೇ ಬಿಟ್ಟಿದ್ದು, ಎರಡು ಪ್ರೋಮೋದಲ್ಲೂ ಚೈತ್ರಾ ವಿಚಾರವೇ ಹೈಲೇಟ್ ಆಗಿದೆ. ಟಾಸ್ಕ್ ಗೋಸ್ಕರ ಶಿಶಿರ್ ಗೆ ನಂಬಿಕೆ ದ್ರೋಹ ಮಾಡಿದ್ದು ಮತ್ತೆ ಆಸ್ಪತ್ರೆಗೆ ಹೋಗಿ ಎಲ್ಲವನ್ನು ತಿಳಿದುಕೊಂಡು ಬಂದದ್ದು. ಕಿಚ್ಚ ಕೇಳಿದ ಪ್ರಶ್ನೆಗೆ, ನಾನೇ ಡಾಕ್ಟರ್ ಬಳಿ ಕೇಳಿದೆ. ಅವರು ಹೇಳಿದ್ದನ್ನಷ್ಟೇ ನಾನಿಲ್ಲಿ ಹೇಳಿದೆ ಎಂದಿದ್ದಾರೆ. ಇದೆಲ್ಲವನ್ನು ಕೇಳಿಸಿಕೊಂಡ ಬಳಿಕ ಸುದೀಪ್ ಶ್ ಎಂದ ಕೂಡಲೇ ಚೈತ್ರಾ ಗಪ್ ಚಿಪ್ ಆಗಿದ್ದಾರೆ. ಬ್ರೇಕ್ ಟೈಮ್ ನಲ್ಲಿ ನಂಗಿಲ್ಲಿ ಉಸಿರುಗಟ್ಟುವ ವಾತಾವರಣವಿದೆ. ನನ್ನನ್ನು ಮನೆಗೆ ಕಳುಹಿಸಿ ಎಂದಿದ್ದಾರೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment