Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

🔴 ಅಡ್ಮಿಷನ್ ಓಪನ್

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್, ಚಿತ್ರದುರ್ಗ

2026-27ನೇ ಸಾಲಿನ ದಾಖಲಾತಿಗಳು ಪ್ರಾರಂಭ! (ಪ್ಲೇ ಗ್ರೂಪ್‌ನಿಂದ 12ನೇ ತರಗತಿವರೆಗೆ)

ಸಂಪೂರ್ಣ ಮಾಹಿತಿ & ದಾಖಲಾತಿಗಾಗಿ ಕ್ಲಿಕ್ ಮಾಡಿ ➔
---Advertisement---

ಸಾಹಿತ್ಯವನ್ನು ಓದುವುದು, ಹಾಡುವುದು ಉತ್ತಮ ಹವ್ಯಾಸ : ಬಿ.ಎ.ಸೀತಾರಾಂ

---Advertisement---

ಸುದ್ದಿಒನ್, ಚಿತ್ರದುರ್ಗ, ಅಕ್ಟೋಬರ್. 27 : ಹಾಡುಗಾರಿಕೆಯಂತಹ ಉತ್ತಮ ಹವ್ಯಾಸಗಳನ್ನು ಯುವಕರು ಬೆಳೆಸಿಕೊಳ್ಳಬೇಕು ಎಂದು ದಾವಣಗೆರೆ ಜಿಲ್ಲಾಸ್ಪತ್ರೆಯ ನಿವೃತ್ತ ನೇತ್ರತಜ್ಞ ಬಿ.ಎ.ಸೀತಾರಾಂ ಹೇಳಿದ್ದಾರೆ.

ಅವರು ಭಾನುವಾರ ನಗರದ ಸ್ಕೌಟ್ ಮತ್ತು ಗೈಡ್ ಭವನದಲ್ಲಿ ಏರ್ಪಡಿಸಿದ್ದ ಜಿತ್ರದುರ್ಗ ತಾಲ್ಲೂಕು ಅಧ್ಯಕ್ಷರ ಪದಗ್ರಹಣ ಮತ್ತು ಕನ್ನಡ ಹಾಡುಗಳ ಕರೋಕೆ ಸ್ಪರ್ಧೇಯಲ್ಲಿ ಮಾತನಾಡಿದರು. ಸಾಹಿತ್ಯವನ್ನು ಓದುವ, ಹಾಡುವ ಅಭ್ಯಾಸ ಉತ್ತಮ ಹವ್ಯಾಸಗಳಲ್ಲಿ ಪ್ರಮುಖವಾಗಿದೆ. ನಾಡು,ನುಡಿಯ ಹೆಮ್ಮೆಯನ್ನು ಸಾರುವ ಹಾಡುಗಳು ಹೆಚ್ಚಿನ ಪ್ರಖ್ಯಾತಿಯನ್ನು ಪಡದಿವೆ. ಹಾಡುಗಳನ್ನು ಹಾಡುವ ಹವ್ಯಾಸ ವೈಯುಕ್ತಿಕವಾಗಿ ನೆಮ್ಮದಿ ಮತ್ತು ಸಂತೋಷವನ್ನು ನೀಡುತ್ತದೆ. ಜಂಜಾಟದ ಬದುಕಿನಲ್ಲಿ ಹಾಡುಗಾರಿಕೆಯನ್ನು ಹೆಚ್ಚಿನ ಜನರು ರೂಢಿಸಿಕೊಂಡಿದ್ದಾರೆ. ನಗರಗಳಲ್ಲಿ ಕರೋಕೆ ಕ್ಲಬ್‍ಗಳು ಅಸ್ತಿತ್ವದಲ್ಲಿವೆ. ಸಾಹಿತ್ಯ ಪರಿಷತ್ತು ಇಂಥಹ ವಿನೂತನ ಕಾರ್ಯಕ್ರಮ ಆಯೋಜಿಸಿರುವುದು ಉತ್ತಮ ಬೆಳವಣಿಗೆಯಾಗಿದೆ. ಮನೆಯಲ್ಲಿ ಮೊಬೈಲ್‍ಗಳ ಮೂಲಕ ಹಾಡುವಿಕೆ ರೂಢಿಸಿಕೊಂಡಿರುವ ಗಾಯಕರಿಗೆ ಇದು ಉತ್ತಮ ಅವಕಾಶವಾಗಿದೆ. ಹಾಡುಗಾರರು ಮೊದಲು ತಮಗೆ ಸೂಕ್ತವಾದ ಹಾಡುಗಳನ್ನು ಆಯ್ಕೆ ಮಾಡಿಕೊಳ್ಳಬೇಕು. ನಂತರ ವೇದಿಕೆಯ ಮೇಲೆ ಹಾಡುವಾಗ ಯಾವುದೇ ರೀತಿಯ ಭಯವನ್ನು ಹೊಂದದೆ ಧೈರ್ಯದಿಂದ ಸ್ವತಂತ್ರವಾಗಿ ನಿರರ್ಗಳವಾಗಿ ಹಾಡುವುದನ್ನು ಅಭ್ಯಾಸ ಮಾಡಬೇಕು. ನಿರಂತರ ಅಭ್ಯಾಸದಿಂದ ಉತ್ತಮ ಹಾಡುಗಾರರಾಗುವುದು ಸಾಧ್ಯ ಎಂದು ಹೇಳಿದರು.

ಕಸಾಪ ಜಿಲ್ಲಾಧ್ಯಕ್ಷ ಕೆ.ಎಂ. ಶಿವಸ್ವಾಮಿ ಮಾತನಾಡಿ, ಜಿಲ್ಲಾ ಕೇಂದ್ರದಲ್ಲಿ ಕನ್ನಡದ ನಿರಂತರ ಕಾರ್ಯಕ್ರಮಗಳನ್ನು ಆಯೋಜಿಸಲು ಯುವಕರಾದ ವಿ.ಎಲ್.ಪ್ರಶಾಂತ್‍ರವರಿಗೆ ತಾಲ್ಲೂಕು ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ. ಅವರು ನಿರಂತರವಾಗಿ ನಾಡು,ನುಡಿಯ ಕಾರ್ಯಕ್ರಮಗಳನ್ನು ಆಯೋಜಿಸಬೇಕು. ಮಂಡ್ಯದಲ್ಲಿ ಜರುಗುವ ಅಖಿಲ ಭಾರತ ಸಮ್ಮೇಳನದ ಅಂಗವಾಗಿ ಸಾಗುತ್ತಿರುವ ರಥ ಮಂಗಳವಾರ ಜಿಲ್ಲೆಯನ್ನು ಪ್ರವೇಶಿಸಲಿದೆ. ಮೂರು ದಿನಗಳ ಕಾಲ ಜಿಲ್ಲೆಯ ಎಲ್ಲ ತಾಲ್ಲೂಕುಗಳಲ್ಲಿ ಸಂಚರಿಸಲಿದೆ ಎಂದರು.

ನೂತನ ತಾಲ್ಲೂಕು ಅಧ್ಯಕ್ಷ ವಿ.ಎಲ್.ಪ್ರಶಾಂತ್ ಮಾಡನಾಡಿ, ಕನ್ನಡ ಸಾಹಿತ್ಯ ಪರಿಷತ್ತು ರಾಜ್ಯದ ಪ್ರಮುಖ ಸಾಂಸ್ಕøತಿಕ ಸಂಸ್ಥೆಯಾಗಿದೆ. ಮಕ್ಕಳು ಮತ್ತು ಯುವಕರಿಗೆ ತಲುಪುವ ರೀತಿಯಲ್ಲಿ ಕಾರ್ಯಕ್ರಮಗಳನ್ನು ರೂಪಿಸಲಾಗುವುದು. ತಾಲ್ಲೂಕಿನ ಹಿರಿಯರ ಮತ್ತು ಕಿರಿಯರ ಸಹಕಾರದಿಂದ ಉತ್ತಮ ಕಾರ್ಯಕ್ರಮಗಳನ್ನು ನೀಡಲಾಗುವುದು ಎಂದರು.

ತೀರ್ಪುಗಾರರಾರರಾಗಿ ಡಾ.ಬಿ.ಎ.ಸೇತಾರಾಂ ಮತ್ತು ನಿವೃತ್ತ ಶಿಕ್ಷಕ ಸಿದ್ದಪ್ಪ ನಿಲುವಂಜಿ ಭಾಗವಹಿಸಿದ್ದರು. ಸೀನಿಯರ್ ವಿಭಾಗದಲ್ಲಿ ಪ್ರಥಮ ಸ್ಥಾನವನ್ನು ಡಿ.ಎ.ಆರ್.ಪೇದೆ ಮನು, ದ್ವಿತೀಯ ಸ್ಥಾನವನ್ನು ರಾಘವೇಂದ್ರ ರಾವ್ ಮತ್ತು ಧನಂಜಯ್, ತೃತೀಯ ಸ್ಥಾನವನ್ನು ಡಾ.ನರಹತಿ ಮತ್ತು ರಮ್ಯ ಪಡೆದರು.

ಜ್ಯೂನಿಯರ್ ವಿಭಾಗದಲ್ಲಿ ಪ್ರಥಮ ಸ್ಥಾನವನ್ನು ಶಾಲೂಮ್, ದ್ವಿತೀಯ ಸ್ಥಾನವನ್ನು ಇಂಪನಾ ಮತ್ತು ತೃತೀಯ ಸ್ಥಾನವನ್ನು ನಂದೀಶ್ ಪಡೆದರು. 43 ಸ್ಪರ್ಧೇಗಳು ಕನ್ನಡ ಕರೋಕೆ ಗಾಯನದಲ್ಲಿ ಭಾಗವಹಿಸಿದ್ದರು.
ಕಸಾಪ ಪದಾಧಿಕಾರಿಗಳಾದ ಸಿ.ಚೌಳೂರು ಲೋಕೇಶ, ವಿ.ಶ್ರೀನಿವಾಸ ಮಳಲಿ, ಕೆ.ಜಿ.ಅಜಯ್,ವಿಶ್ವನಾಥ್ ಸೇರಿದಂತೆ ಇತರರು ಭಾಗವಹಿಸಿದ್ದರು.

ನಿಮ್ಮೂರಿನ ಸುದ್ದಿ, ಈಗ 'ಸುದ್ದಿ ಒನ್' ನಲ್ಲಿ!

ನಿಮ್ಮ ಊರಿನ ಅದ್ಧೂರಿ ಜಾತ್ರೆ, ವಿಶೇಷ ಆಚರಣೆಗಳು, ಅಥವಾ ನಿಮ್ಮ ಗಮನಕ್ಕೆ ಬಂದ ಸ್ಥಳೀಯ ಸಮಸ್ಯೆಗಳೇ? ಚಿತ್ರದುರ್ಗ ಹಾಗೂ ಸುತ್ತಮುತ್ತಲಿನ ಯಾವುದೇ ಸುದ್ದಿಯಾದರೂ ನಮಗೆ ತಿಳಿಸಿ. ನಿಮ್ಮ ಧ್ವನಿಯಾಗಿ ನಾವು ನಾಡಿಗೆ ತಲುಪಿಸುತ್ತೇವೆ. ಛಾಯಾಚಿತ್ರ ಮತ್ತು ವಿವರಗಳೊಂದಿಗೆ ನಮಗೆ ಇಮೇಲ್ ಮಾಡಿ.

✉️ suddionenews@gmail.com

🛡️ ನಿಮ್ಮ ಮಾಹಿತಿಯನ್ನು ಗೌಪ್ಯವಾಗಿಡಲಾಗುವುದು.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment

🏫 ಅಡ್ಮಿಷನ್ ಓಪನ್
🔒

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್

ಸ್ವಾಗತ...