ಬಿಗ್ ಬಾಸ್ ಸೀಸನ್ 11 ವಾರಕ ಕಥೆ ಕಿಚ್ಚನ ಜೊತೆಗೆ ಅದ್ಭುತವಾಗಿ ನಡೆದಿದೆ. ಇಂದು ಸೂಪರ್ ಸಂಡೇ ವಿತ್ ಸುದೀಪ ಪಂಚಾಯ್ತಿ ನಡೆಯಲಿದ್ದು, ಈ ಪಂಚಾಯ್ತಿಯಲ್ಲಿಯೇ ಒಬ್ಬರು ಎಲಿಮಿನೇಟ್ ಆಗಲಿದ್ದಾರೆ. ಮೊದಲ ವಾರಕ್ಕೆ ನಟಿ ಎಲಿಮಿನೇಟ್ ಆಗಿದ್ದು, ಶಾಕ್ ಆಗಿದೆ. ಬಿಗ್ ಬಾಸ್ ಮನೆಯ ಈ ಒಂದು ವಾರವೂ ಹೆಚ್ಚು ಸದ್ದು ಕೇಳಿದ್ದು ಅವರದ್ದೇ. ಈಗ ಅವರೇ ಎಲಿಮಿನೇಟ್ ಆಗಿರೋದು ಶಾಕ್ ಆಗಿದೆ.
ಸೂಪರ್ ಸಂಡೇ ವಿತ್ ಸುದೀಪ ಪಂಚಾಯ್ತಿಯಲ್ಲಿ ನಟಿ ಯಮುನಾ ಶ್ರೀನಿಧಿ ಹೊರಗೆ ಬಂದಿದ್ದಾರೆ ಎನ್ನಲಾಗಿದೆ. ಕಡಿಮೆ ವೋಟ್ ಗಳು ಬಿದ್ದ ಕಾರಣಕ್ಕೆ ಮನೆಯಿಂದ ಹೊರಗೆ ಬಂದಿದ್ದಾರೆ. ಸ್ಟ್ರಾಂಗ್ ಕಂಟೆಸ್ಟೆಂಟ್ ಹೊರಗೆ ಬಂದಿರುವುದು ಆಶ್ಚರ್ಯವಾಗಿದೆ. ಬಿಗ್ ಬಾಸ್ ಮನೆಯ ಗಟ್ಟಿ ಸ್ಪರ್ಧಿ ಎಂದೇ ಹೇಳಲಾಗಿತ್ತು.
ಬಿಗ್ ಬಾಸ್ ಮನೆಗೆ ಬಂದ ಯಮುನಾ ಅವರಿಗೆ ಆರಂಭದಲ್ಲಿಯೇ ಬರುವ ಸ್ಪರ್ಧಿಗಳು ನರಕಕ್ಕೆ ಹೋಗಬೇಕಾ ಸ್ವರ್ಗಕ್ಕೆ ಹೋಗಬೇಕಾ ಎಂಬ ನಿರ್ಧಾರ ತೆಗೆದುಕೊಳ್ಳುವ ಅವಕಾಶವನ್ನು ನೀಡಿತ್ತು. ಯಮುನಾ ಹೇಳಿದಂತೆ ಒಂದಷ್ಟು ಮಂದಿ ನರಕಕ್ಕೆ ಹೋಗಿದ್ದಾರೆ. ಇನ್ನು ಮನೆಯೊಳಗೆ ಜೋರಾಗಿದ್ದದ್ದು ಇದೇ ಯಮುನಾ ಶ್ರೀನಿಧಿ. ಎಲ್ಲದಕ್ಕೂ ಬಾಯಿ ಜೋರು ಮಾಡುತ್ತಿದ್ದರು. ಭವ್ಯಾ ಜೊತೆಗೆ ಒಳ್ಳೆಯ ಬಾಂಧವ್ಯವವನ್ನು ಹೊಂದಿದ್ದರು ಇದೀಗ ಮೊದಲ ವಾರಕ್ಕೆ ಮನೆಯಿಂದ ಹೊರಗೆ ಬಂದಿದ್ದಾರೆ.
ಲಾಯರ್ ಜಗದೀಶ್ ಬಿಗ್ ಬಾಸ್ ಬಗ್ಗೆ ಕೆಟ್ಟದಾಗಿ ಮಾತಾಡಿದ್ದರು. ನನ್ನ ಎದುರಾಕಿಕೊಂಡು ಬಿಗ್ ಬಾಸ್ ನಡೆಸಲು ಸಾಧ್ಯವಿಲ್ಲ ಎಂದು ಸವಾಲು ಹಾಕಿದ್ದರು. ಹೀಗಾಗಿ ಮೊದಲ ವಾರವೇ ಜಗದೀಶ್ ಹೊರಗೆ ಬರ್ತಾರೆ ಎಂದುಕೊಂಡಿದ್ದವರಿಗೆ ಗಟ್ಟಿ ಸ್ಪರ್ಧಿ ಎಂದುಕೊಂಡಿದ್ದ ಯಮುನಾ ಹೊರಗೆ ಬಂದಿರೋದು ಶಾಕ್ ಆಗಿದೆ.
ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ
ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.
ವರದಿ ಮಾಡುವುದು ಹೇಗೆ?
- ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ನಾವು ಏನು ಮಾಡುತ್ತೇವೆ?
- ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
- ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
- ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.



















