Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಅಣ್ಣಾವ್ರ ಹಾಡುಗಳನ್ನಾಡುತ್ತಿದ್ದ ಬಾಲಿವುಡ್ ನಟ ಗೋವಿಂದ ಕಾಲಿಗೆ ಗುಂಡೇಟು : ಈಗ ಹೇಗಿದ್ದಾರೆ..?

---Advertisement---

ನಸೀಮ್, ರಾಜಾ ಬಾಬು, ಪಾಟ್ನರ್ ಸೇರಿದಂತೆ ಹಲವು ಸಿನಿಮಾಗಳಲ್ಲಿ ಖ್ಯಾತಿ ಪಡೆದಿದ್ದ ಬಾಲಿವುಡ್ ನಟ ಗೋವಿಂದ ಅವರ ಕಾಲಿಗೆ ಗುಂಡೇಟು ಬಿದ್ದಿದೆ. ಬೆಳಗಿನ ಜಾವ 5 ಗಂಟೆಗೆ ಈ ಘಟನೆ ನಡೆದಿದೆ. ತಮ್ಮದೇ ರಿವಾಲ್ವರ್ ನಿಂದ ಗುಂಡೇಟು ತಗುಲಿದೆ. ಈ ನಟನನ್ನ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಯಸಿಯುನಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದಾರೆ.

ಗೋವಿಂದ ಅವರು ತಮ್ಮದೇ ಹೆಸರಿನಲ್ಲಿ ಪರವಾನಗಿ ಪಡೆದುಕೊಂಡು ರಿವಾಲ್ಚರ್ ಇಟ್ಟುಕೊಂಡಿದ್ದರು. ಇಂದು ಬೆಳಗ್ಗೆ ರಿವಲ್ವರ್ ಸ್ವಚ್ಛಗೊಳಿಸುತ್ತಿದ್ದಾಗ, ಗುಂಡೇಟು ಮಿಸ್ ಆಗಿ ಬಿದ್ದಿದೆ. ವೈದ್ಯರು ನಟನ ಕಾಲಿನಿಂದ ಗುಂಡನ್ನು ತೆಗೆದಿದ್ದಾರೆ. ನಟನಿಗೆ ಗುಂಡೇಟು ತಗುಲಿರುವ ವಿಚಾರ ತಿಳಿದು ಅಭಿಮಾನಿಗಳು ಆತಂಕದಲ್ಲಿದ್ದರು. ಇದೀಗ ಚೇತರಿಸಿಕೊಂಡಿರುವ ನಟ ಗೋವಿಂದ, ತಮ್ಮ ಆರೋಗ್ಯದ ಬಗ್ಗೆ ಮಾಹಿತಿ ತಿಳಿಸಿದ್ದಾರೆ.

‘ನಿಮ್ಮ ಆಶೀರ್ವಾದ, ತಂದೆ ತಾಯಿಯ ಆಶೀರ್ವಾದ, ದೇವರ ಆಶೀರ್ವಾದದಿಂದ ಆರೋಗ್ಯವಾಗಿದ್ದೇನೆ. ಬೆಳಗ್ಗೆ ಗುಂಡು ಬಿದ್ದಿತ್ತು. ಈಗ ಅದನ್ನು ತೆಗೆಯಲಾಗಿದೆ. ಆಸ್ಪತ್ರೆಯ ವೈದ್ಯರಿಗೆ ಧನ್ಯವಾದ ಹೇಳುತ್ತೇನೆ. ನಿಮ್ಮ ಪ್ರಾರ್ಥನೆಗೆ ಧನ್ಯವಾದಗಳು ಎಂದಿದ್ದಾರೆ. ನಟನ ಮಾತು ಕೇಳಿ ಅಭಿಮಾನಿಗಳು ನಿರಾಳರಾಗಿದ್ದಾರೆ.

ಗೋವಿಂದ ಅವರು ಇಂದು ಬೆಳಗ್ಗೆ ಕೋಲ್ಕತ್ತಾಗೆ ತೆರಳುತ್ತಿದ್ದರು. ಗುಂಡಿನ ಶಬ್ದ ವರದಿಯಾದ ಬೆನ್ನಲ್ಲೇ ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ. ಗೋವಿಂದ ಅವರು ಬೇಗ ಚೇತರಿಸಿಕೊಳ್ಳಲಿ ಎಂದು ಫ್ಯಾನ್ಸ್ ಕೂಡ ಪ್ರಾರ್ಥನೆ ಮಾಡಿದ್ದಾರೆ. ಅವರ ಪ್ರಾಣಕ್ಕೆ ಯಾವುದೇ ತೊಂದರೆ ಇಲ್ಲ ಎನ್ನುವ ವಿಚಾರ ತಿಳಿದು ಫ್ಯಾನ್ಸ್ ಸಮಾಧಾನಗೊಂಡಿದ್ದಾರೆ. ಅಷ್ಟೇ ಅಲ್ಲ ಅನೇಕ ಸೆಲೆಬ್ರೆಟಿಗಳು ಗೋವಿಂದ ಅವರಿಗೆ ಕರೆ ಮಾಡಿ ಆರೋಗ್ಯ ವಿಚಾರಿಸಿದ್ದಾರೆ‌.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment