Notice: Undefined index: options in /home/nagendra/public_html/content/plugins/elementor-pro/modules/theme-builder/widgets/site-logo.php on line 124

ವಿಜಯೇಂದ್ರ ಅಕ್ರಮದ ಬಗ್ಗೆ ಯತ್ನಾಳ್ ವಿಡಿಯೋ ತೋರಿಸಿ ಬಾಂಬ್ ಸಿಡಿಸಿದ ಪ್ರಿಯಾಂಕ್ ಖರ್ಗೆ..!

Facebook
Twitter
Telegram
WhatsApp

 

ಬೆಂಗಳೂರು: ಮೂಡಾ ಹಗರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ನಾಯಕರು ಸಿಎಂ ಸಿದ್ದರಾಮಯ್ಯ ಅವರ ರಾಜೀನಾಮೆಗೆ ಒತ್ತಾಯಿಸುತ್ತಿದ್ದಾರೆ. ಹೀಗಾಗಿ ಸಚಿವ ಪ್ರಿಯಾಂಕ್ ಖರ್ಗೆ ಬಿಜೆಪಿ ನಾಯಕರ ಅಕ್ರಮಗಳನ್ನು ಬಯಲಿಗೆಳೆದಿದ್ದಾರೆ.

ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಪ್ರಿಯಾಂಕ್ ಖರ್ಗೆ, ಜೆಪಿ ನಡ್ಡಾ ಅವರು, ಆಟಕ್ಕುಂಟು ಲೆಕ್ಕಕ್ಕೆ ಇರಲಾರದಂತ ಬಿಜೆಪಿ ಮಾಜಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಅವರು ಮತ್ತು ಬಿವೈ ವಿಜಯೇಂದ್ರ ಅವರು ಇವರ ಮೇಲೆ ಎಫ್ಐಆರ್ ದಾಖಲಿಸಬಹುದು ಎಂದು ಕೋರ್ಟ್ ಹೇಳಿದೆ. ಬಹಳ ಸ್ಪಷ್ಟವಾಗಿ ಸುಪ್ರೀಂ ಕೋರ್ಟ್ ಉಲ್ಲೇಖ ಮಾಡಿದೆ. ಚುನಾವಣಾ ಬಾಂಡ್ ಗಳ ಮೇಲೆ ಯಾರೆಲ್ಲಾ ವಂಚನೆ ಮಾಡಿದ್ದಾರೆ, ಅವರೆಲ್ಲರ ಮೇಲೆ ಕೇಸ್ ದಾಖಲಿಸಬಹುದು ಎಂದು ಸ್ಪಷ್ಟವಾಗಿ ಹೇಳಿದೆ‌.

ಕಳೆದ ಕೆಲವು ದಿನಗಳಿಂದ ಬಿಜೆಪಿ ನಾಯಕರು ಹೇಳ್ತಾ ಇದಾರೆ ಸಿಎಂ ಸಿದ್ದರಾಮಯ್ಯ ಅವರು ರಾಜೀನಾಮೆ ಕೊಡಬೇಕು ಅಂತ. ಇವ್ರ ಸ್ಟೇಟ್ಮೆಂಟ್ ಪ್ರಕಾರವೇ ಎಫ್ಐಆರ್ ಆಗಿದೆಯಲ್ವಾ, ಇವ್ರು ರಾಜೀನಾಮೆ ಕೊಡಲಿ ಹಾಗಾದ್ರೆ. ರಾಜ್ಯಮಟ್ಟದಿಂದ ಹಿಡಿದು ರಾಷ್ಟ್ರಮಟ್ಟದವರೆಗೂ ಹೆಸರಿದೆ, ಬಿಜೆಪಿಯೇ ಖಾಲಿ ಆಗಬೇಕಲ್ವಾ ಹಾಗಾದ್ರೆ.

 

ಮಿಸ್ಟರ್ ವಿಜಯೇಂದ್ರ ಶೆಲ್ ಕಂಪನಿ ಮುಖಾಂತರ ಮನಿ ಲ್ಯಾಂಡ್ರಿಂಗ್ ಮಾಡಿದ್ದಾರೆ ಎಂಬ ಕೇಸ್ ಇಡಿ ನಲ್ಲಿ ಇರುವುದನ್ನು ಮರೆತು ಹೋಗಿಬಿಟ್ರಾ. ‘ಅವನ ಮನೆಗೆ ಹತ್ತಾರು ಸಾವಿರ ಕೋಟಿ ಹಣ ಸಿಕ್ತಲ್ಲ ಅದು ಯಾರದ್ದು. ವಿಜಯೇಂದ್ರದ್ದೆ’ ಎಂಬ ವಿಡಿಯೋ ತೋರಿಸಿದ್ದಾರೆ. ಅದು ಯತ್ನಾಳ್ ಮಾತನಾಡಿರುವ ಬೈಟ್. ಬಳಿಕ ಮಾತನಾಡಿದ ಪ್ರಿಯಾಂಕ್ ಖರ್ಗೆ, ಯಾರು ಜೈಲಿಗೆ ಹೋಗಬೇಕು..? ವಿಜಯೇಂದ್ರ, ಯಡಿಯೂರಪ್ಪ ಅವರ ಬಗ್ಗೆ ಹೇಳಿದ್ದು. ಯಾರು ಹೇಳ್ತಾ ಇರೋದು..? ಬಿಜೆಪಿ ನಾಯಕರೇ ಹೇಳ್ತಾ ಇದಾರೆ ಎಂದು ಬಿಜೆಪಿ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

Facebook
Twitter
Telegram
WhatsApp
suddionenews

suddionenews

Leave a Comment

Top Stories

ನೋಡುವಷ್ಟು ನೋಡಿದ್ದೇನೆ.. ಸಹಿಸುವಷ್ಟು ಸಹಿಸಿದ್ದೇನೆ : ಬಿಗ್ ಬಾಸ್ ಸ್ಪರ್ಧಿ ಚೈತ್ರಾ ಹೇಳಿದ್ದೇನು..?

ಚೈತ್ರಾ ಹೆಸರು ಎಲ್ಲರೂ ಕೇಳಿಯೇ ಇರುತ್ತೀರಿ. ಒಳ್ಳೆಯ ವಾಗ್ಮೀಯಾಗಿ ಗುರುತಿಸಿಕೊಂಡವರು. ಹಿಂದುತ್ವದ ಬಗ್ಗೆ ಹೆಚ್ಚು ಭಾಷಣ ಮಾಡಿದ್ದವರು. ಬಿಜೆಪಿ ನಾಯಕರ ಜೊತೆಗೆ ಗುರುತಿಸಿಕೊಂಡಿದ್ದವರು. ಆ ಬಳಿಕ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಉದ್ಯಮಿಯೊಬ್ಬರಿಗೆ ಬಿಜೆಪಿ ಟಿಕೆಟ್

ಜಾತಿ ಧರ್ಮ ಮೀರಿ ಎಲ್ಲರೂ ಸಾಹಿತ್ಯದ ಕೆಲಸ ಮಾಡಬೇಕು : ಬಿ.ಕೆ.ರಹಮತ್‍ವುಲ್ಲಾ

  ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್ ಮೊ : 78998 64552 ಸುದ್ದಿಒನ್, ಚಿತ್ರದುರ್ಗ, ಸೆಪ್ಟೆಂಬರ್. 29 : ಸಾಹಿತ್ಯಕ್ಕೂ ಜಾತಿ ಧರ್ಮಕ್ಕೂ ಒಂದಕ್ಕೊಂದು ಸಂಬಂಧವಿಲ್ಲ. ಜಾತಿ ಧರ್ಮ ಮೀರಿ ಎಲ್ಲರೂ

ಹಿಂದೂ ಮಹಾಗಣಪತಿ ಶೋಭಾಯಾತ್ರೆ : ಪೌರ ಕಾರ್ಮಿಕರನ್ನು ಸನ್ಮಾನಿಸಿ ಗೌರವ ಧನ ನೀಡಿ : ವಿಜಯಸೇನೆಯಿಂದ ಮನವಿ

  ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್ ಮೊ : 78998 64552 ಸುದ್ದಿಒನ್, ಚಿತ್ರದುರ್ಗ, ಸೆಪ್ಟೆಂಬರ್. 29 : ವಿಶ್ವಹಿಂದೂ ಪರಿಷತ್ ಹಾಗೂ ಬಜರಂಗದಳದ ವತಿಯಿಂದ ಪ್ರತಿ ವರ್ಷವೂ ಚಿತ್ರದುರ್ಗದಲ್ಲಿ ಹಿಂದೂ

error: Content is protected !!