ಶಿವಮೊಗ್ಗ: ಇಂದು ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ. ಎಲ್ಲಾ ಕಡೆಯೂ ಈ ದಿನವನ್ನು ಮಾನವ ಸರಪಳಿ ನಿರ್ಮಿಸುವ ಮೂಲಕ ಆಚರಣೆ ಮಾಡಲಾಗಿತ್ತಿದೆ. ಶಿವಮೊಗ್ಗದಲ್ಲೂ ಮಾನವ ಸರಪಳಿಯನ್ನು ನಿರ್ಮಾಣ ಮಾಡಲಾಗಿದೆ. ರಾಜ್ಯಾದ್ಯಂತ ಸುಮಾರು 2,500 ಉದ್ಧದ ಮಾನವ ಸರಪಳಿ ನಿರ್ಮಾಣ ಮಾಡಲಾಗಿದೆ. ಇದರಲ್ಲಿ ನವದಂಪತಿಯೂ ಭಾಗವಹಿಸಿದ್ದು, ಅದಾಗಲೇ ಸರಪಳಿ ನಿರ್ಮಿಸಿದ್ದವರಿಗೆ ಖುಷಿ ನೀಡಿದೆ.
ಶಿವಮೊಗ್ಗ ಜಿಲ್ಲೆ ಭದ್ರಾವತಿ ತಾಲೂಕಿನ ಕಾರೇಹಳ್ಳಿಯಿಂದ ಶಿವಮೊಗ್ಗ ತಾಲೂಕಿನ ಮಡಕೆ ಚೇಲೂರುವರೆಗೂ ಸರಪಳಿಯನ್ನು ನಿರ್ಮಾಣ ಮಾಡಲಾಗಿತ್ತು. ಸುಮಾರು 60 ಕಿಲೋ ಮೀಟರ್ ಮಾನವ ಸರಪಳಿ ನಿರ್ಮಾಣ ಮಾಡಲಾಗಿತ್ತು. ಈ ಮಾನವ ಸರಪಳಿಯಲ್ಲಿ ಸರ್ಕಾರಿ ಶಾಲೆ ಮಕ್ಕಳು, ಖಾಸಗಿ ಶಾಲೆ ಮಕ್ಕಳು, ಸರ್ಕಾರಿ ನೌಕರರು ಸೇರಿದಂತೆ ಆಸಕ್ತರೆಲ್ಲರೂ ಈ ಸರಪಳಿಯನ್ನು ನಿರ್ಮಿಸಿದ್ದರು.
ತುಮಕೂರು ಜಿಲ್ಲೆಯಲ್ಲೂ ಮಾನವ ಸರಪಳಿಯನ್ನು ನಿರ್ಮಾಣ ಮಾಡಲಾಗಿತ್ತು. ಸಚಿವ ಜಿ ಪರಮೇಶ್ವರ್ ತುಮಕೂರಿಗೆ ಭೇಟಿ ನೀಡ, ಅವರು ಕೂಡ ಮಾನವ ಸರಪಳಿಗೆ ಕೈ ಜೋಡಿಸಿದ್ದರು. ಬಳಿಕ ಮಾತನಾಡಿ, ಇಂದು ಅಂತರಾಷ್ಟ್ರೀಯ ಪ್ರಜಾಪ್ರಭುತ್ವದ ದಿನ. ನಮಗೆಲ್ಲಾ ಬದುಕುವ ಹಕ್ಕು ನೀಡಿರುವುದು ಪ್ರಜಾಪ್ರಭುತ್ವ. ಹೀಗಾಗಿ ಎಲ್ಲರೂ ಕೈಜೋಡಿಸಿದ್ದಾರೆ. ಹಾಗೆ ಇದು ವಿಶ್ವದಲ್ಲಿಯೇ ದಾಕಳೆ ಬರೆಯಲಿದೆ ಎಂದರು. ಎಲ್ಲೆಡೆ ಪ್ರಜಾಪ್ರಭುತ್ವದ ದಿನವನ್ನು ಅದ್ಭುತವಾಗಿ ಆಚರಣೆ ಮಾಡಲಾಗಿದೆ. ಮಾನವ ಸರಪಳಿಯನ್ನು ನಿರ್ಮಾಣ ಮಾಡುವ ಮೂಲಕ ಅಂತರಾಷ್ಟ್ರೀಯ ಪ್ರಜಾಪ್ರಭುತ್ವದ ದಿನವನ್ನು ಆಚರಣೆ ಮಾಡಲಾಗಿದೆ. ಸುಮಾರು 2,500 ಕಿಲೋ ಮೀಟರ್ ತನಕ ಈ ಸರಪಳಿಯನ್ನು ನಿರ್ಮಾಣ ಮಾಡಲಾಗಿತ್ತು. ಇದು ಜನರು ಮಾಡಿದ ದಾಖಲೆಯೆ ಸರಿ. ಎಲ್ಲರೂ ಮಾಮವ ಸರಪಳಿಯನ್ನು ನಿರ್ಮಿಸಿ ಸಂತಸ ಪಟ್ಟರು.
ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ
ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.
ವರದಿ ಮಾಡುವುದು ಹೇಗೆ?
- ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ನಾವು ಏನು ಮಾಡುತ್ತೇವೆ?
- ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
- ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
- ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.











