Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಚಳ್ಳಕೆರೆ | ನೂತನ ಐದು ಅಶ್ವಮೇಧ ಸಾರಿಗೆ ಬಸ್ಸುಗಳಿಗೆ ಶಾಸಕ ಟಿ. ರಘುಮೂರ್ತಿ ಚಾಲನೆ

---Advertisement---

ವರದಿ ಮತ್ತು ಫೋಟೋ ಕೃಪೆ
ಸುರೇಶ್ ಬೆಳಗೆರೆ
ಮೊ : 97398 75729

ಚಳ್ಳಕೆರೆ, ಸೆಪ್ಟೆಂಬರ್ 01 : ನಗರ ಹೊರಭಾಗದಲ್ಲಿ ವಿದ್ಯಾರ್ಥಿ ಗಳ ನಿಲಯಗಳು ಇರುವುದರಿಂದ ಅಲ್ಲಿಂದ ಶಾಲಾ ಕಾಲೇಜುಗಳಿಗೆ ನಗರಕ್ಕೆ ಬರುವ ವಿದ್ಯಾರ್ಥಿಗಳಿಗೆ ತೊಂದರೆಯಾಗದಂತೆ ವಿದ್ಯಾರ್ಥಿಗಳನ್ನು ಸರಿಯಾದ ಸಮಯಕ್ಕೆ ಶಾಲೆಗೆ ತಲುಪಿಸುವಂತಹ ಕಾರ್ಯವಾಗಬೇಕು. ಜತೆಗೆ ನಗರದ ಒಳಗೆ ಬರುವಂತಹ ಎಲ್ಲಾ ಕೆ ಎಸ್ ಆರ್ ಟಿ ಸಿ ಬಸ್ಸುಗಳು ಕಡ್ಡಾಯವಾಗಿ ಬಸ್ ನಿಲ್ದಾಣಕ್ಕೆ ಬಂದು ಹೋಗುವಂತೆ ನೋಡಿಕೊಳ್ಳಬೇಕು ಎಂದು

ಶಾಸಕ ಟಿ .ರಘುಮೂರ್ತಿ ಹೇಳಿದರು.

ನಗರದ ಸಾರಿಗೆ ಬಸ್ ನಿಲ್ದಾಣದಿಂದ ವಿವಿಧ ಗ್ರಾಮಗಳಿಂದ ಬೆಂಗಳೂರಿಗೆ ನೂತನ ಐದು ಅಶ್ವಮೇಧ ಸಾರಿಗೆ ಬಸ್ ಗಳಿಗೆ ಚಾಲನೆ ನೀಡಿ ಮಾತನಾಡಿದರು. ಗ್ರಾಮೀಣ ಭಾಗದಿಂದ ನಗರಕ್ಕೆ ಬರುವಂತಹ ಪ್ರಯಾಣಿಕರಿಗೆ ಕೆ ಎಸ್ ಆರ್ ಟಿ ಸಿ ಬಸ್ಸು ನಿಂದ ಅನುಕೂಲವಾಗಬೇಕು.

ಜೊತೆಗೆ ವಿದ್ಯಾರ್ಥಿಗಳಿಗೂ ಸಹ ಇದರಿಂದ ಅನುಕೂಲವಾಗುತ್ತದೆ. ಬಸ್ ನಿಲ್ದಾಣದಲ್ಲಿ ಸ್ವಚ್ಛತೆಗೆ ಆದ್ಯತೆ ನೀಡಬೇಕು . ಪ್ರಯಾಣಿಕರಿಗೆ ಯಾವುದೇ ರೀತಿಯ ತೊಂದರೆ ಆಗಬಾರದು. ನಗರದಿಂದ ಹಾದು ಹೋಗುವ ಎಲ್ಲಾ ಕೆಎಸ್ಆರ್ಟಿಸಿ ಬಸ್ ಗಳು ಬಸ್ ನಿಲ್ದಾಣಕ್ಕೆ ಕಡ್ಡಾಯವಾಗಿ ಬರಬೇಕು. ಶಕ್ತಿ ಯೋಜನೆ ಸಮರ್ಪಕವಾಗಿ ಬಳಕೆಯಾಗಲಿ. ಓಬಳಾಪುರ, ನಾಯಕನಹಟ್ಟಿ ಈ ಮಾರ್ಗಗಳಿಗೆ ಹಲವು
ವರ್ಷಗಳಿಂದ ಬೆಂಗಳೂರಿಗೆ ಸರ್ಕಾರಿ ಬಸ್ಸಿನ
ಬೇಡಿಕೆ ಇತ್ತು ಅದೇರೀತಿ ಗಡಿ ಭಾಗದ . ವಿದ್ಯಾರ್ಥಿಗಳು, ರೈತರು,
ಗ್ರಾಮಸ್ಥರು , ನಗರಗಳಿಗೆ ತೆರಳಲು
ಪರದಾಡುವುದನ್ನು ತಪ್ಪಿಸಲು ನಿತ್ಯವೂ ನಿಗದಿತ ಸಮಯಕ್ಕೆ ಬಸ್ ವ್ಯವಸ್ಥೆ ಮಾಡುವಂತೆ ತಿಳಿಸಿದರು.

ಕೆ ಎಸ್ ಆರ್ ಟಿ ಸಿ ಇಲಾಖೆ ಡಿಸಿ ಅಶ್ವಮೇಧ ನೂತನ ಐದು ಬಸ್ಸಿಗಳಿಗೆ ಇಂದು ಶಾಸಕರು ಚಾಲನೆ ನೀಡಿದ್ದು ಶ್ರೀನಿವಾಸ್ ಮೂರ್ತಿ ಮಾತನಾಡಿ. ಚಳ್ಳಕೆರೆ ಹೋಬಳಾಪುರ ಹಾಗೂ ಬೆಂಗಳೂರು ಈ ಮಾರ್ಗವಾಗಿ ಒಂದು ಬಸ್ ಚಲಿಸುತ್ತೆ.

ಚಳ್ಳಕೆರೆ ನಾಯಕನಹಟ್ಟಿ ಬೆಂಗಳೂರು ಹಾಗೂ ಚಳ್ಳಕೆರೆ ತಪ್ಪಾಗೊಂಡನಹಳ್ಳಿ ಬೆಂಗಳೂರು, ಮತ್ತು ಚಳ್ಳಕೆರೆ ಚಿತ್ರದುರ್ಗ ಚಳ್ಳಕೆರೆ ಬೆಂಗಳೂರು, ಚಳ್ಳಕೆರೆ ಚಿತ್ರದುರ್ಗ ಚಳ್ಳಕೆರೆ ಬೆಂಗಳೂರಿಗೆ ಈ ಬಸ್ಸುಗಳು ಹೋಗಲಿವೆ. ನಿಲ್ದಾಣದಲ್ಲಿ ಸಿಬ್ಬಂದಿಗಳ ಕೊರತೆ ಇದ್ದು ಹೆಚ್ಚಿನ ಸಿಬ್ಬಂದಿಗಳ ವ್ಯವಸ್ಥೆ ಮಾಡಲಾಗುತ್ತದೆ. ನಿಲ್ದಾಣದ ಒಳಗೆ ಖಾಸಗಿ ವಾಹನಗಳು ಬರುತ್ತಿದ್ದು. ವಾಹನ ಕಡೆಗೆ ಕಡಿವಾಣ ಹಾಕಲಾಗುತ್ತದೆ ಎಂದರು.

ಈ ಸಂದರ್ಭದಲ್ಲಿ ನಗರಸಭೆ ಅಧ್ಯಕ್ಷೆ ಜೈತುನ್ಬಿ ಬಿ.ಉಪಾಧ್ಯಕ್ಷೆ ಓ.ಸುಜಾತ, ಸದಸ್ಯರಾದ ಮಂಜುಳ, ಆರ್ ಪ್ರಸನ್ನ ಕುಮಾರ್,ಎಂ.ಜೆ. ರಾಘವೇಂದ್ರ, ವೀರಭದ್ರಪ್ಪ, ಪರಶುರಾಮಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಿ. ಟಿ. ಶಶಿಧರ್, ಭದ್ರಪ್ಪ, ಚಳ್ಳಕೆರೆ ಕೆ ಎಸ್ ಆರ್ ಟಿ ಸಿ ಡಿಪೋ ವ್ಯವಸ್ಥಾಪಕರಾದ ಎಸ್ ಪ್ರಭು, ತಿಪ್ಪೇಸ್ವಾಮಿ, ಸೂರಪ್ಪನಾಯಕ ,ಧನಂಜಯ, ರೇಖಾ ,ವೀರೇಶ್, ಮುತ್ತಣ್ಣ ,ಚಂದ್ರೇಶ ಶಿವಕುಮಾರ್, ಮುತ್ತುರಾಜ್,ಟಿ.ಸಿ. ಪ್ರದೀಪ್, ಸೇರಿದಂತೆ ನಾಗರಿಕರು ಇದ್ದರು.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment

🏫 ಅಡ್ಮಿಷನ್ ಓಪನ್
🔒

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್

ಸ್ವಾಗತ...