ದಾವಣಗೆರೆಯಲ್ಲಿ ಬಸವೇಶ್ವರ ಕಾರ್ಣಿಕ : ಮಹಿಳೆಯರ ಏಳಿಗೆ.. ಸೋಷಿಯಲ್‌ಮೀಡಿಯಾ ಹುಚ್ಚಿನ ಬಗ್ಗೆ ಎಚ್ಚರಿಕೆ..!

1 Min Read

ಸುದ್ದಿಒನ್, ದಾವಣಗೆರೆ: ಕೆಲವೊಂದು ಪ್ರದೇಶದಲ್ಲಿ ಕಾರ್ಣಿಕ ಭವಿಷ್ಯ ತುಂಬಾ ಮಹತ್ತರ ಸ್ಥಾನ ಹೊಂದಿದೆ. ಅದರಂತೆ ದಾವಣಗೆರೆಯ ಕಾರ್ಣಿಕಾ ಕೂಡ. ಕಡೆಯ ಶ್ರಾವಣದಂದು ನುಡಿಯುವ ಈ ಕಾರ್ಣಿಕಾಕ್ಕಾಗಿ ಬಹಳಷ್ಟು ಮಂದಿ ಕಾಯುತ್ತಿರುತ್ತಾರೆ. ಇದೀಗ ದಾವಣಗೆರೆಯ ಬಸವೇಶ್ವರ ಸ್ವಾಮಿಯೂ ಕಾರ್ಣಿಕಾ ನುಡಿದಿದೆ. ಈ ಕಾರ್ಣಿಕಾದಿಂದ ಮಹಿಳೆಯರ ಅಭಿವೃದ್ಧಿಯ ಬಗ್ಗೆ ತಿಳಿಸಿದೆ.

ದಾವಣಗೆರೆಯಲ್ಲಿ ಇತಿಹಾಸ ಪ್ರಸಿದ್ಧ ಆನೆಕೊಂಡ ಗ್ರಾಮದಲ್ಲಿ ಶ್ರೀ ಬಸವೇಶ್ವರ ಸ್ವಾಮಿ ಇದೆ. ಪ್ರತಿ ವರ್ಷ ಕಡೆಯ ಶ್ರಾವಣ ಇಲ್ಲಿ ಕಾರ್ಣಿಕಾ ಭವಿಷ್ಯವನ್ನು ನುಡಿಯುತ್ತಾರೆ. ಈ ಬಾರಿಯೂ ಭವಿಷ್ಯವನ್ನು ನುಡಿಯಲಾಗಿದೆ. ನೀಲಾನಹಳ್ಳಿ ಶ್ರೀಆಂಜನೇಯ ಸ್ವಾಮಿ, ಆನೆಕೊಂಡದ ಶ್ರೀ ಬಸವೇಶ್ವರ, ನಿಟುವಳ್ಳಿ ಶ್ರೀದುರ್ಗಾಂಬಿಕಾ ಸೇರಿದಂತೆ ಏಳು ಹಳ್ಳಿಗಳ ದೇವರ ಮೆರವಣಿಗೆ ಮಾಡಲಾಗುತ್ತದೆ. ಬಳಿಕ ಕಾರ್ಣಿಕಾ ಭವಿಷ್ಯವನ್ನು ನುಡಿಯಲಾಗುತ್ತದೆ.

ಅನಾದಿ ಕಾಲದಿಂದಲೂ ಇಲ್ಲಿ ಭವಿಷ್ಯವನ್ನು ನುಡಿಯಲಾಗುತ್ತದೆ. ಸ್ವಾಮಿಯ ದರ್ಶನಕ್ಕಾಗಿ ಸಹಸ್ರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ್ದರು.ಪದ್ಧತಿಯಂತೆ ಆಚರಣೆಗಳ ಜೊತೆಗೆ ನೀಲಾನಹಳ್ಳಿಯ ಅರ್ಚಕ ದಾಸಯ್ಯ ಕಾರ್ಣಿಕ ನುಡಿದಿದ್ದಾರೆ. ನರಲೋಕದ ಜನಕೆ ಆನೆ ತಣ್ಣೀರ ಉಗೀತಲೆಎಂದರೆ ಉತ್ತಮ ಮಳೆಯಾಗಲಿದೆ, ಮುತ್ತೈದೆಯರ ಭೂತಾಯಿ ಉಡಿತುಂಬಿತಲೇ ಎಂದು ಕಾರ್ಣಿಕಾ ನುಡಿದಿದೆ.

ನರಲೋಕದ ಜನರ ದೃಷ್ಟಿ ಹುಚ್ಚಾದೀ ತಲೆ ಅಂದರೆ ಈಗಿನ ಕಾಲದ ಸೋಷಿಯಲ್ ಮೀಡಿಯಾಗಳ ಅತಿಯಾದ ಬಳಕೆ, ಅದರಿಂದ ಆಗುವ ಕೆಡುಕು, ಅಪಾಯಗಳನ್ನು ಸೂಚ್ಯವಾಗಿ ಹೇಳಿದಂತಿದೆ ಈ ಸಲದ ಕಾರ್ಣಿಕ ಎಂದು ಸ್ಥಳದಲ್ಲಿದ್ದ ಹಿರಿಯರು ತಮ್ಮದೇ ಶೈಲಿಯಲ್ಲಿ ವ್ಯಾಖ್ಯಾನಿಸಿದರು. ಈ ಬಾರಿ ಮಹಿಳೆಯರಿಗೂ ಒಳಿತಾಗುತ್ತದೆ ಎಂದೇ ಭವಿಷ್ಯದಲ್ಲಿ ಸೂಚನೆ ನೀಡಲಾಗಿದೆ. ಈ ಮೂಲಕ ಕಾರ್ಣಿಕಾ ಕೇಳಲು ಸಹಸ್ರಾರು ಸಂಖ್ಯೆಯಲ್ಲಿ ಬಂದಿದ್ದ ಜನ ಸಂತೃಪ್ತರಾದರು.

Share This Article
Leave a Comment

Leave a Reply

Your email address will not be published. Required fields are marked *