ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್, ಚಿತ್ರದುರ್ಗ
2026-27ನೇ ಸಾಲಿನ ದಾಖಲಾತಿಗಳು ಪ್ರಾರಂಭ! (ಪ್ಲೇ ಗ್ರೂಪ್‌ನಿಂದ 12ನೇ ತರಗತಿವರೆಗೆ)
2026-27ನೇ ಸಾಲಿನ ದಾಖಲಾತಿಗಳು ಪ್ರಾರಂಭ! (ಪ್ಲೇ ಗ್ರೂಪ್‌ನಿಂದ 12ನೇ ತರಗತಿವರೆಗೆ)
ಬೆಂಗಳೂರು: ಸಿನಿಮಾ ಹಾಗೂ ಸೀರಿಯಲ್ ಮೂಲಕ ಪದ್ಮಜಾ ರಾವ್ ಪ್ರೇಕ್ಷಕರ ಮನಸೆಳೆದವರು. ಅದರಲ್ಲೂ ಭಾಗ್ಯಲಕ್ಷ್ಮೀ ಧಾರಾವಾಹಿಯಲ್ಲಿ ನೆಚ್ಚಿನ ಅತ್ತೆಯಾದವರು. ಇದ್ದರೆ ಈ ರೀತಿಯ ಅತ್ತೆ ಇರಬೇಕು ಎಂದು ಅದೆಷ್ಟೋ ಸೊಸೆಯಂದಿರು ದೇವರಬಳಿ ಮನವಿ ಮಾಡಿಕೊಳ್ಳುವಂತ ಗುಣವಂತೆ. ಮಾತಿನಲ್ಲಂತು ಕೇಳೋದೆ ಬೇಡ. ಗುಂಡು ಹೊಡೆದಂತ ಮಾತುಗಳು. ತೂಕವಿರುವ ಡೈಲಾಗ್ ಗಳು. ಹೀಗೆ ಕಿರುತೆರೆ ಸೊಸೆಯಂದಿರ, ಹೆಣ್ಣು ಮಕ್ಕಳ ಮನಸ್ಸು ಗೆದ್ದಿರುವ ಪದ್ಮಜಾ ರಾವ್ ಅವರಿಗೆ ಸಂಕಷ್ಟ ಎದುರಾಗಿದೆ.
ಚೆಕ್ ಬೌನ್ಸ್ ಕೇಸಲ್ಲಿ ಪದ್ಮಜಾ ರಾವ್ ಗೆ ಸಂಕಷ್ಟ ಎದುರಾಗಿದೆ. ಪದ್ಮಜಾ ರಾವ್ ಅವರು ನೀಡಿದ್ದ ಚೆಕ್ ಬೌನ್ಸ್ ಆಗಿದೆ. ಇದರಿಂದ ಕಾನೂನು ಸಂಕಷ್ಟವನ್ನು ಎದುರಿಸುವಂತ ಪರಿಸ್ಥಿತಿ ನಿರ್ಮಾಣವಾಗಿದೆ. ಚೆಕ್ ಬೌನ್ಸ್ ಆದರೆ ಆ ಸಂಬಂಧ ಪ್ರಕರಣ ದಾಖಲಿಸಬಹುದು. ಇದರಿಂದ ಚೆಕ್ ನೀಡಿದ ವ್ಯಕ್ತಿ ಜೈಲಿಗೆ ಹೋಗುವ ಸಾಧ್ಯತೆಯೂ ಇರುತ್ತದೆ. ಹೀಗಾಗಿ ಪದ್ಮಜಾ ರಾವ್ ಅವರು ಇದನ್ನು ಹೇಗೆ ನಿಭಾಯಿಸುತ್ತಾರೆ ಎಂಬುದನ್ನು ನೋಡಬೇಕಿದೆ.
ಇನ್ನು ಈ ಪ್ರಕರಣ ಸಂಬಂಧ ಪದ್ಮಜಾ ರಾವ್ ಖಾಸಗಿ ಚಾನೆಲ್ ಒಂದಕ್ಕೆ ಪ್ರತಿಕ್ರಿಯೆ ನೀಡಿದ್ದು, ಇದು ಮೂರು ವರ್ಷದ ಹಳೆಯ ಪ್ರಕರಣವಾಗಿದೆ. ನನ್ನ ವಿರುದ್ಧ ಸುಳ್ಳು ಆರೋಪವನ್ನು ಮಾಡಲಾಗುತ್ತಿದೆ. ಈ ಪ್ರಕರಣ ಸಂಬಂಧ ಸೆಷನ್ ಕೋರ್ಟ್ ನಲ್ಲಿ ಅಪೀಲು ಹಾಕಿದ್ದೇನೆ. ನ್ಯಾಯಾಂಗದ ಮೇಲೆ ನನಗೆ ನಂಬಿಕೆ ಇದೆ. ನನ್ನ ಮೇಲಿನ ಸುಳ್ಳು ಆರೋಪ ಎಂಬುದು ಗೊತ್ತಾಗಲಿದೆ. ನಾನು ಯಾರಿಗೂ ಮೋಸ ಮಾಡಿಲ್ಲ. ಇಷ್ಟರಲ್ಲಿಯೇ ಅದು ಸುಳ್ಳು ಆರೋಪ ಎಂಬುದು ಸಾಬೀತಾಗಲಿದೆ ಎಂದು ತಮ್ಮ ಮೇಲಿನ ಪ್ರಕರಣದ ಬಗ್ಗೆ ಪದ್ಮಜಾ ರಾವ್ ಸ್ಪಷ್ಟನೆ ನೀಡಿದ್ದಾರೆ.

ನಿಮ್ಮ ಊರಿನ ಅದ್ಧೂರಿ ಜಾತ್ರೆ, ವಿಶೇಷ ಆಚರಣೆಗಳು, ಅಥವಾ ನಿಮ್ಮ ಗಮನಕ್ಕೆ ಬಂದ ಸ್ಥಳೀಯ ಸಮಸ್ಯೆಗಳೇ? ಚಿತ್ರದುರ್ಗ ಹಾಗೂ ಸುತ್ತಮುತ್ತಲಿನ ಯಾವುದೇ ಸುದ್ದಿಯಾದರೂ ನಮಗೆ ತಿಳಿಸಿ. ನಿಮ್ಮ ಧ್ವನಿಯಾಗಿ ನಾವು ನಾಡಿಗೆ ತಲುಪಿಸುತ್ತೇವೆ. ಛಾಯಾಚಿತ್ರ ಮತ್ತು ವಿವರಗಳೊಂದಿಗೆ ನಮಗೆ ಇಮೇಲ್ ಮಾಡಿ.
✉️ suddionenews@gmail.com🛡️ ನಿಮ್ಮ ಮಾಹಿತಿಯನ್ನು ಗೌಪ್ಯವಾಗಿಡಲಾಗುವುದು.






ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್