Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಈ ಬಾರಿಯ ಬಿಗ್ ಬಾಸ್ ಗೆ ಸ್ಪರ್ಧಿಗಳು ಇವರೇ ನೋಡಿ

---Advertisement---

ಬಿಗ್ ಬಾಸ್ ಎಲ್ಲರ ನೆಚ್ಚಿನ ಮನರಂಜನೆಯ ಶೋ ಅಂದ್ರೆ ತಪ್ಪಾಗುವುದಿಲ್ಲ. ಯಾಕಂದ್ರೆ ಪ್ರತಿ ಸೀಸನ್ ನಲ್ಲೂ ವಿಭಿನ್ನ ವ್ಯಕ್ತಿಗಳು ಬರುತ್ತಾರೆ. ನಗಿಸುತ್ತಾರೆ, ಅಳಿಸುತ್ತಾರೆ, ಜಗಳವಾಡುತ್ತಾರೆ, ಕೋಪ ಮಾಡಿಕೊಳ್ಳುತ್ತಾರೆ, ದ್ವೇಷಿಗಳಾಗುತ್ತಾರೆ, ಪ್ರೇಮಿಗಳಾಗುತ್ತಾರೆ, ಸ್ನೇಹಿತರಾಗುತ್ತಾರೆ.. ಅಬ್ಬಬ್ಬಾ‌ಬಿಗ್ ಬಾಸ್ ಎಂಬ ದೊಡ್ಮನೆಯಲ್ಲಿ ಒಂದಾ ಎರಡಾ.. ನಾನೇ ಗೆಲ್ಲಬೇಕು ಎಂಬ ಹುಮ್ಮಸ್ಸಿನಿಂದಾನೇ ಬರುತ್ತಾರೆ. ಜನರ ಪ್ರೀತಿ ಗೆಲ್ಲದೇ ಸೋಲುತ್ತಾರೆ. ಇದೀಗ ಮತ್ತೆ ಬಿಗ್ ಬಾಸ್ ಶೋಗೆ ದಿನಗಣನೆ ಶುರುವಾಗಿದೆ.

ಬಿಗ್ ಬಾಸ್ ಸೀಸನ್ 10ರಲ್ಲಿ ಕಾರ್ತಿಕ್ ಮಹೇಶ್ ವಿನ್ ಆಗಿದ್ರು. ಈಗ ಬಿಗ್ ಬಾಸ್ ಸೀಸನ್ 11 ಬರ್ತಾ ಇದೆ. ಮಾಹಿತಿಗಳ ಪ್ರಕಾರ ಈಗಾಗಲೇ ಶೋನ ಪ್ರೋಮೋ ಕೂಡ ಮುಗಿದಿದೆಯಂತೆ. ಇನ್ನು ಡೇಟ್ ಅನೌನ್ಸ್ ಮಾಡುವುದಷ್ಟೇ ಬಾಕಿ. ಶೋ ಶುರುವಾದ ದಿನವೇ ಅಧಿಕೃತವಾಗಿ ಯಾರೆಲ್ಲಾ ಭಾಗಿಯಾಗಿದ್ದಾರೆ ಎಂಬುದು ಗೊತ್ತಾಗುವುದು. ಅದಕ್ಕೂ ಮುನ್ನ ಸಂಭಾವ್ಯ ಪಟ್ಟಿಯನ್ನು ಸಿದ್ಧ ಮಾಡಿಕೊಳ್ಳುತ್ತಾರೆ. ಆ ಸಂಭಾವ್ಯ ಪಟ್ಟಿ ಈ ರೀತಿ ಇದೆ ನೋಡಿ.

 

ಜೀ ಕನ್ನಡದ ರಿಯಾಲಿಟಿ ಶೋ ಗೆ ಬಂದಿದ್ದ ಗಾಯಕಿ ಆಶಾ ಭಟ್, ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿದ್ದ ಪಾರು ಧಾರಾವಾಹಿಯ ನಟಿ ಮೋಕ್ಷಿತಾ ಪೈ, ಅಗ್ನಿಸಾಕ್ಷಿ ಧಾರಾವಾಹಿಯಲ್ಲಿ ಸಿಕ್ಕಾಪಟ್ಟೆ ಫೇಮಸ್ ಆಗಿದ್ದ ಅಂಜಲಿ ಅಲಿಯಾಸ್ ಸುಕೃತ ನಾಗ್, ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಅಂತರಪಟ ಧಾರಾವಾಹಿಯ ನಾಯಕಿ ತನ್ವಿ ಬಾಲರಾಜ್, ಸೋಷಿಯಲ್‌ಮೀಡಿಯಾದಲ್ಲಿ ಫೇಮಸ್ ಆಗಿರುವ ವರ್ಷಾ ಆಂಡ್ ವರುಣ್ ಆರಾಧ್ಯ, ನಟನಾಗಿ ಗುರುತಿಸಿಕೊಂಡು, ತಂದೆಯಂತೆ ನಿರ್ದೇಶನ ಮಾಡುತ್ತಿರುವ ಪಂಕಜ್ ನಾರಾಯಣ್ ಅವರು ಕೂಡ ಈ ಬಾರಿಯ ಬಿಗ್ ಬಾಸ್ ನಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆ ಇದೆ. ಜೀ ಕನ್ನಡದಲ್ಲಿ ಪ್ರಸಾರವಾಗಿದ್ದ ಸತ್ಯ ಸೀರಿಯಲ್ ಸಣ್ಣ ಮಕ್ಕಳಿಗೂ ಇಷ್ಟವಾಗುತ್ತಿತ್ತು. ಅದರಲ್ಲಿ ಸತ್ಯ ಪಾತ್ರ ಮಾಡಿದ್ದ ಗೌತಮಿ ಜಾದವ್ ಅವರಿಗೂ ಆಫರ್ ಹೋಗಿದೆ ಎನ್ನಲಾಗಿದೆ. ಗೀತಾ ಧಾರಾವಾಹಿಯಲ್ಲಿ ಖಳನಾಯಕಿಯಾಗಿ ಸೀರಿಯಲ್ ಪ್ರಿಯರ ನಿದ್ದೆ ಕೆಡಿಸಿದ್ದ ಭಾನುಮತಿ ಅಲಿಯಾಸ್ ಶರ್ಮಿತಾ ಗೌಡ ಕೂಡ ಈ ಬಾರಿಯ ಬಿಗ್ ಬಾಸ್ ಗೆ ಬರಲಿದ್ದಾರಂತೆ. ಗಿಚ್ಚಿಗಿಲಿಗಿಲಿ ಖ್ಯಾತಿಯ ರಾಘವೇಂದ್ರ, ಚಂದ್ರಪ್ರಭಾ, ಪದ್ಮಾವತಿ ಸೀರಿಯಲ್ ನ ತ್ರಿವಿಕ್ರಮ್, ನಟಿ ಅಮಿತಾ ಸದಾಶಿವ ಅವರಿಗೂ ಬಿಗ್ ಬಾಸ್ ನಿಂದ ಆಫರ್ ಹೋಗಿದೆಯಂತೆ. ಇದರಲ್ಲಿ ಯಾರೆಲ್ಲಾ ಬರಬಹುದು ಎಂಬುದು ಲಾಂಚ್ ದಿನ ಗೊತ್ತಾಗಲಿದೆ.

ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ

ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.

ವರದಿ ಮಾಡುವುದು ಹೇಗೆ?

  • ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ವಾಟ್ಸಪ್ ಮಾಡಿ: 90369 74702

ನಾವು ಏನು ಮಾಡುತ್ತೇವೆ?

  • ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
  • ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
  • ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment