Notice: Undefined index: options in /home/nagendra/public_html/content/plugins/elementor-pro/modules/theme-builder/widgets/site-logo.php on line 124

ತಂತ್ರಜ್ಞಾನದಿಂದಾಗಿ ಸಂವೇದನಾಶೀಲತೆಯನ್ನು ಕಳೆದುಕೊಳ್ಳುತ್ತಿದ್ದೇವೆ : ಉಪನ್ಯಾಸಕ ಬಸವರಾಜು ಕಳವಳ

Facebook
Twitter
Telegram
WhatsApp

ಸುದ್ದಿಒನ್, ಚಿತ್ರದುರ್ಗ,ಆಗಸ್ಟ್. 24 : ಮನುಷ್ಯ ತಂತ್ರಜ್ಞಾನ ಬೆಳದಂತೆ ತನ್ನ ಸಂವೇದಶೀಲತೆಯನ್ನು ಕಳೆದುಕೊಳ್ಳುತ್ತಿದ್ದಾನೆ ಪ್ರಸ್ತುತ ದಿನಮಾನಗಳಲ್ಲಿ ತನ್ನ ಎಲ್ಲ ಅವಶ್ಯಕತೆಗಳಿಗಾಗಿ ಯಂತ್ರೋಪಕರಣಗಳ ಅವಲಂಬನೆ ಹೆಚ್ಚಾಗುತ್ತಿರುವ ಈ ದಿನಗಳಲ್ಲಿ ಮಕ್ಕಳ ವಿದ್ಯಾಭ್ಯಾಸದಲ್ಲಿ ಮೌಲ್ಯಯುತ ಶಿಕ್ಷಣ ನೀಡುವುದರ ಮೂಲಕ ಅವರನ್ನ ನಮ್ಮ ರಾಷ್ಟಕ್ಕೆ ಉತ್ಪಾದಕ ಶಕ್ತಿಯನ್ನಾಗಿಸುವತ್ತಾ ಎಲ್ಲರೂ ಗಮನಹರಿಸಬೇಕಾಗಿದೆ ಎಂದು ಡಯಟ್ ಉಪನ್ಯಾಸಕರಾದ ಬಸವರಾಜು ರವರು ವಿದ್ಯಾರ್ಥಿಗಳಿಗೆ ಹೇಳಿದರು.

ತಾಲ್ಲೂಕಿನ ಕಡ್ಲೆಗುದ್ದು ಗ್ರಾಮದಲ್ಲಿ ಶುಕ್ರವಾರ ಶ್ರೀಮತಿ ಇಂದಿರಾಗಾಂಧಿ ವಸತಿ ಶಾಲೆ ಹಾಗೂ ಆಂಜನೇಯ ಪ್ರೌಢ ಶಾಲೆ ಇವರ ಸಹಯೋಗದಲ್ಲಿ ಜರುಗಿದ ರಾಷ್ಟ್ರೀಯ ಬಾಹ್ಯಾಕಾಶ ದಿನಾಚರಣೆಯ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಭಾರತ ಇಂದು ಚಂದ್ರನಲ್ಲಿಗೆ ನೌಕೆಯನ್ನ ಕಳುಹಿಸಿದ ನಾಲ್ಕನೇ ರಾಷ್ಟ್ರ ಹಾಗೂ ದಕ್ಷಿಣ ದ್ರುವದ ಮೇಲೆ ಹೆಜ್ಜೆಯಿರಿಸಿದ ಜಗತ್ತಿನ ಮೊದಲ ರಾಷ್ಟ್ರವಾಗಿದೆ ಈ ವಿಷಯದಲ್ಲಿ ನಾವೆಲ್ಲ ಹೆಮ್ಮೆಪಡಬೇಕಾದ ದಿನವಾಗಿದೆ ಹಾಗಾಗಿ ಮಕ್ಕಳಲ್ಲಿ ಬಾಹ್ಯಾಕಾಶ ಕುರಿತಾದ ಹೆಚ್ಚಿನ ವಿಷಯಗಳನ್ನ ತಂತ್ರಜ್ಞಾನದ ಮೂಲಕ ನೀಡುವುದರೂಂದಿಗೆ ವಿಜ್ಞಾನ ದಲ್ಲಿ ಆಸಕ್ತಿ ಮೂಡಿಸುವಂತಹ ಕಾರ್ಯಕ್ರಮಗಳನ್ನು ಆಯೋಜಿಸಬೇಕಾಗಿದೆ ಹಾಗೂ ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಗಳು, ಸ್ಪರ್ದೆಗಳು ಇನ್ನಿತರ ಚಟಿವಟಿಕೆಗಳನ್ನು ಹಮ್ಮಿಕೊಳ್ಳುವುದರ ಮೂಲಕ ಮೌಲ್ಯಗಳನ್ನು ಬೆಳಸಬೇಕಾಗಿದೆ ಇದರಲ್ಲಿ‌ ಪೋಷಕರ ಪಾತ್ರವು ದೊಡ್ಡದಿದೆ ಎಂದು ವಿದ್ಯಾರ್ಥಿಗಳಿಗೆ ತಿಳಿಸಿದರು.

ಭಾರತ ಹೆಮ್ಮೆ ಪಡುವ ದಿನ, ಈ ದಿನವನ್ನು ಮನೆ ಮನೆಗಳಲ್ಲಿ ಹಬ್ಬದ ರೀತಿಯಲ್ಲಿ ಆಚರಿಸಬೇಕಾದ ದಿನವಾಗಿದೆ ಕಳೆದ ವರ್ಷ ಈ ದಿನದಂದು ನಮ್ಮ ಇಸ್ರೂ ವಿಜ್ಞಾನಿಗಳು ಚಂದ್ರನ ದಕ್ಷಿಣ ದ್ರುವಕ್ಕೆ ಚಂದ್ರಯಾನ _3 ಯು ಯಶಸ್ವಿಯಾದ ಸವಿನೆನಪಿಗಾಗಿ ಈ ದಿನವನ್ನು ಸಂಭ್ರಮದಿಂದ ಬಾಹ್ಯಾಕಾಶ ದಿನವನ್ನಾಗಿ ಆಚರಿಸುತ್ತಿದ್ದೇವೆ ಎಂದು ಹವ್ಯಾಸಿ ಖಗೋಳ ಶಾಸ್ತ್ರಜ್ಞ ರಾದ ಶ್ರೀಯುತ ಹೆಚ್. ಎಸ್. ಟಿ. ಸ್ವಾಮಿಯವರು ವಿದ್ಯಾರ್ಥಿಗಳಿಗೆ ಉಪನ್ಯಾಸ ನೀಡಿದರು.

ಅವರು ತಮ್ಮ ಉಪನ್ಯಾಸದಲ್ಲಿ ಚಂದ್ರನ ನೆಲವನ್ನು ತಲುಪಲು ಮೊದಲೆ ಚಂದ್ರಯಾನ 42 ದಿನಗಳು ಎರಡನೇಯದು 48 ಹಾಗೂ ಮೂರನೇಯದನ್ನು 58 ದಿನಗಳಲ್ಲಿ ತೆಗೆದುಕೊಂಡಿತು ಮತ್ತೆ ಈಗ ಚಂದ್ರಯಾನ- 4 ನ್ನು ತಯಾರಿಸಲಾಗುತ್ತಿದ್ದು ಮುಂದಿನ ದಿನಗಳಲ್ಲಿ ಇದು ಕೂಡ ಯಶಸ್ವಿಯಾಗಲಿದೆ ಆದರೆ ಭಾರತ ಇಲ್ಲಿಯವರೆಗೆ ಯಾವ ಗಗನಯಾನಿಗಳನ್ನು ಕಳುಹಿಸಿಲ್ಲ ಇದು 2026 ರಲ್ಲಿ ನಮ್ಮ ದೇಶವು ಕೂಡ ಚಂದ್ರನ ಮೇಲೆ ಮಾನವಸಹಿತ ನೌಕೆಯನ್ನು ಕಳುಹಿಸಲು ತಯಾರಾಗುತ್ತಿದೆ‌.

ನಾವು ನಿತ್ಯ ನೋಡುತ್ತಿರುವುದುವುದು ಉತ್ತರ ದ್ರುವ ಆದರೆ ದಕ್ಷಿಣ ದ್ರುವ ಸಾದ್ಯವಾಗಿಲ್ಲ ಈಗ ನೌಕೆ ಲ್ಯಾಂಡ್ ಆಗಿದೆ ಮುಂದಿನ ದಿನಗಳಲ್ಲಿ ಅದು ಸಾದ್ಯವಾಗಲಿ ಆ ಜಾಗಕ್ಕೆ ನಮ್ಮ ಪ್ರಧಾನಿಗಳು ಶಿವ ಶಕ್ತಿ ಎಂದು ಹೆಸರಿಟ್ಟಿದಾರೆಂದು ಹೇಳಿದರು ಮುಂದುವರೆದು ಬಾಹ್ಯಾಕಾಶ ಕೈಗೆ ಸಿಗದ ವಸ್ತು ಚಂದ್ರ ಭೂಮಿಗೆ 3 ಲಕ್ಷ ಕೀ ಮೀ ದೂರದಲ್ಲಿದೆ ಹಾಗೂ ಭೂಮಿಗೆ ಸಮೀಪವಿರುವ ಆಕಾಶಕಾಯವಾಗಿದೆ. ಅಲ್ಲಿ ಗುರುತ್ವಾಕರ್ಷಣ ಕಡಿಮೆಯಿರುವುದರಿಂದ ನಾವು ನೀವೇಲ್ಲರು ಹೋಗಲು ಸಾದ್ಯವಿಲ್ಲ ಮುಂದಿನ ದಿನಗಳಲ್ಲಿ ನಾವೇಲ್ಲರು ಅತ್ತ ಕಡೆ ಗಮನಹರಿಸಿ ವೈಜ್ಞಾನಿಕ ಮನೋಭಾವ ಬೆಳಸಬೇಕಾಗಿದೆ ಹಾಗಾಗಿ ಇದರ ಕಡೆ ಚಿಂತನೆ ಮಾಡಿ ಅಭ್ಯಾಸದಲ್ಲಿ ತೂಡಗಿ ಎಂದು ಹೇಳಿದರು ಇಂದಿನ ಸಾಧನೆಯ ಹಿಂದೆ ಇಸ್ರೋ ವಿಜ್ಞಾನಿಗಳ ಶ್ರಮ ಶ್ಲಾಘನೀಯವಾಗಿದೆ.

ಈ ಸಂಸ್ಥೆಯನ್ನು 1969 ವಿಕ್ರಂ ಸಾರಭಾಯಿಯವರಿಂದ ಸ್ಥಾಪಿಸಲ್ಪಟ್ಟಿತ್ತು ಇಂದು ಅನೇಕೆ ಸಾಧನೆಗಳಿಗೆ ಕಾರಣವಾಗಿದೆ ಎಂದು ಹೇಳಿದರು. ಇದೇ ಸಂದರ್ಭದಲ್ಲಿ ಖಗೋಳ ಒಂದು ಸುಂದರಲೋಕ ಎಂತವರನ್ನು ಇದು ಆಕರ್ಷಿಸುತ್ತದೆ ಇಂದು ಇದರ ಮೇಲೆ ಅನೇಕ ಅದ್ಯಯನಗಳಾಗುತ್ತಿವೆ ಸೂರ್ಯ ತನ್ನ ಚಲನೆಯ ಮೂಲಕ ಕತ್ತಲು ಬೆಳಕಿನ ಆಟವನ್ನಷ್ಟೇ ಆಡುತ್ತಾನೆ. ಅದನ್ನೆ ನಾವು ಅಮವಾಸ್ಯೆ ಮತ್ತು ಹುಣ್ಣಿಮೆಗಳಾಗುತ್ತವೆ ಆದರೆ ಇವುಗಳಿಂದ ಕೆಟ್ಟದ್ದಾಗುತ್ತದೆ ಎಂಬ ಜನರ ಮೂಡನಂಬಿಕೆಯನ್ನ ಹೋಗಲಾಡಿಸಿ ವೈಚಾರಿಕ ಮನೋಭಾವ ಬೆಳಸಲು ಈಗಿನ ವಿದ್ಯಾರ್ಥಿಗಳ ಪಾತ್ರ ದೊಡ್ಡದಿದೆ ಆದರಿಂದ ನೀವು ಅತ್ತ ಕಡೆ ಗಮನ ಹರಿಸಿ ಚನ್ನಾಗಿ ಅಭ್ಯಸಿಸಿ ದೇಶ ಸೇವೆಗೆ ಸನ್ನದ್ದರಾಗಬೇಕೆಂದು ಉಪನ್ಯಾಸ ನೀಡಿದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಅಂಜನೇಯ ಪ್ರೌಢ ಶಾಲೆಯ ಮುಖ್ಯೋಪಾಧ್ಯಾಯರಾದ ಡಾ. ಮಹೇಶ್ ಕೆ ಇಸ್ರೂ ಕುರಿತು ಮಾತನಾಡಿದರು ವಸತಿ ಶಾಲೆಯ ಪ್ರಾಂಶುಪಾಲರಾದ ಶ್ರೀಯುತ ರಮೇಶರವರು ಮಾತನಾಡುತ್ತಾ ವಿದ್ಯಾರ್ಥಿಗಳು ವೈಜ್ಞಾನಿಕ ಹಾಗೂ ವೈಚಾರಿಕ ಮನೋಭಾವವನ್ನು ಬೆಳಸಿಕೊಂಡು ತಮ್ಮ ಭವಿಷ್ಯವನ್ನು ರೂಪಿಸಿಕೊಳ್ಳಬೇಕೆಂದು ಅಧ್ಯಕ್ಷೀಯ ನುಡಿಗಳನ್ನಾಡುತ್ತಾ ಸಲಹೆ ನೀಡಿದರು.

ಈ ಕಾರ್ಯಕ್ರಮದಲ್ಲಿ ಎರಡು ಶಾಲೆಯ ಭೋದಕ ಹಾಗೂ ಭೋದಕೇತರ ಸಿಬ್ಬಂದಿಯವರು ಹಾಜರಿದ್ದು ಕಾರ್ಯಕ್ರಮವನ್ನು ಸಿದ್ದಪ್ಪ ಟಿ ಸ್ವಾಗತಿಸಿ, ಜಯಪ್ಪ ಬಿ. ವಂದಿಸಿದರೆ ಪ್ರಕಾಶ ಬಿ. ನಿರೂಪಿಸಿದರು.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಸತತ ಏರಿಕೆಯತ್ತ ಸಾಗುತ್ತಿದೆ ಚಿನ್ನದ ಬೆಲೆ : ಇಂದಿನ ದರ ಹೀಗಿದೆ..!

ಚಿನ್ನದ ಬೆಲೆ ಇಳಿಕೆಯಾಯ್ತು ಎಂದು ಖುಷಿ ಪಡುತ್ತಿರುವಾಗಲೇ ಇದೇನಿದು ಒಂದೇ ಸಮನೇ ಏರುತ್ತಲೇ ಇದೆ. ಅದರಲ್ಲೂ 70-80 ರೂಪಾಯಿ ಏರುತ್ತಿದೆ. ಇಂದು ಕೂಡ ಚಿನ್ನದ ದರ ಏರಿಕೆಯಾಗಿದ್ದು, 70 ರೂಪಾಯಿ ಗ್ರಾಂಗೆ ಜಾಸ್ತಿಯಾಗಿದೆ. ಈ

ಚಿತ್ರದುರ್ಗ | ಯೋಗೀಶ್ ಸಹ್ಯಾದ್ರಿ ಬಿಜೆಪಿ ಸೇರ್ಪಡೆ

  ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817 ಸುದ್ದಿಒನ್, ಚಿತ್ರದುರ್ಗ ನ. 22 : ಉಪನ್ಯಾಸಕರು ಹಾಗೂ ಸಹ್ಯಾದ್ರಿ ಇಂಗ್ಲಿಷ್ ಅಕಾಡೆಮಿ, ಅಧ್ಯಕ್ಷರಾದ ಯೋಗೀಶ್ ಸಹ್ಯಾದ್ರಿಯವರು ಬಿಜೆಪಿ

ನವೆಂಬರ್ 26 ರಿಂದ 28 ರವರೆಗೆ ಭ್ರಷ್ಟಾಚಾರ ತಡೆಯಲು ಉಪವಾಸ ಸತ್ಯಾಗ್ರಹ : ಎಎಪಿ ಜಗದೀಶ್

ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817 ಸುದ್ದಿಒನ್, ಚಿತ್ರದುರ್ಗ ನ. 22 : ಇತ್ತೀಚಿನ ದಿನಮಾನದಲ್ಲಿ ಎಲ್ಲಡೆ ಭ್ರಷ್ಠಾಚಾರ ತುಂಬಿ ತುಳುಕಾಡುತ್ತಿದೆ, ಇದನ್ನು ತಡೆಯುವ ಸಲುವಾಗಿ ಭ್ರಷ್ಠಾಚಾರ

error: Content is protected !!