ಕೆಲವೊಬ್ಬರಿಗೆ ಏನಾದರೂ ತಿಂದರೆ ಗಂಟಲು ನೋವಿರುತ್ತೆ. ಆಸ್ಪತ್ರೆಗೆ ತೋರಿಸಿದ್ರು, ವೈದ್ಯರು ಕೊಟ್ಟ ಔಷಧದಿಂದಲೂ ವಾಸಿಯಾಗದೆ ಇದ್ದರೆ ಮನೆ ಮದ್ದು ಟ್ರೈ ಮಾಡಿ.
ಒಂದು ಗ್ಲಾಸ್ ಬಿಸಿ ನೀರಿನಲ್ಲಿ ಸ್ವಲ್ಪ ಉಪ್ಪು ಮತ್ತು ಆಪಲ್ ಸಿಡರ್ ವಿನಿಗರ್ 2 ಸ್ಪೂನ್ ಮಿಕ್ಸ್ ಮಾಡಿ ದಿನಕ್ಕೆ ಎರಡು ಬಾರಿ ಮುಕ್ಕಳಿಸಿ.
ಬಿಳಿ ತುಂಬೆ ಎಲೆಗಳನ್ನು ಕೈಯಲ್ಲಿ ಹಿಡಿದು ಅಂಗೈ ನಲ್ಲಿ ಹಾಕಿಕೊಂಡು, ಎರಡೂ ಕೈಗಳಿಂದ ಒತ್ತಿ ರಸ ತೆಗೆದು ಅದಕ್ಕೆ ಸುಣ್ಣ ಮತ್ತು ಚೂರು ಬೆಲ್ಲ ಹಾಕಿ ಗಂಟಲಿನ ನೋವಿದ್ದಲ್ಲಿಗೆ ಹಚ್ಚಿದರೆ ನೋವು ಕಡಿಮೆ ಆಗುತ್ತದೆ.
ಬೆಳಿಗ್ಗೆ ಉಪ್ಪು ನೀರಿನಲ್ಲಿ ಬಾಯಿ ಮುಕ್ಕಳಿಸಿ ಉಗಿಯುವುದರಿಂದಲೂ ವಾಸಿಯಾಗುತ್ತೆ.
ಶುಂಠಿ ರಸ ತೆಗೆದು ಸ್ವಲ್ಪ ಬಿಸಿ ಮಾಡಿ ಒಂದು ಒಂದು ಡ್ರಾಪ್ಸ್ ಕುಡೀರಿ. ಖಂಡಿತ ಗುಣ ಆಗುತ್ತೆ.
ಒಂದು ಮುಷ್ಠಿ ಕರಿಮೆಣಸು, ಒಂದಿಂಚು ಉದ್ದದ ಒಣಶುಂಠಿ, ಅರ್ಧ ಇಂಚು ಉದ್ದದ ಅರಸಿನ, ಮೂರು ಬೆಳ್ಳುಳ್ಳಿ, ಐದು ವೀಳ್ಯದೆಲೆ, ಇಪ್ಪತ್ತು ತುಳಸಿ ಎಲೆ ಜಜ್ಜಿ ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ಎಂಟು ಲೋಟ ನೀರು ಕುದಿಸಿ ನಾಲ್ಕು ಲೋಟ ಆಗುವವರೆಗೆ ಕುದಿಸಿ ದಿನಕ್ಕೆ 3 ಹೊತ್ತು ಎರಡು ದಿನ ಕುಡಿಯಿರಿ.
ಸುಣ್ಣಕ್ಕೆ ಬೆಲ್ಲ ಸೇರಿಸಿ ಗಂಟಲಿನ ಹೊರಗಡೆ ಹಚ್ಚಿ.
ಉಗುರು ಬೆಚ್ಚಗಿನ ನೀರಿಗೆ ಉಪ್ಪು ಹಾಕಿ ದಿನಕ್ಕೆ 4 ಬಾರಿ ಗಾರ್ಗಲ್ ಮಾಡಿ, ಕೆಂಪು ಕಲ್ಲು ಸಕ್ಕರೆ ದಿನಕ್ಕೆ 4 ಬಾರಿ ಸೇವಿಸಿ , ಕಾಫಿ – ಟೀ ಕುಡಿಯೋದು ಬೇಡ, ಆಯಿಲ್ ಫುಡ್ ನಿಷೇಧಿಸಿ.
ಬೆಚ್ಚಗಿನ ಹಾಲಿನಲ್ಲಿ ಅರಿಷಿಣ ಮಿಶ್ರಣ ಮಾಡಿ ಕುಡಿಯಿರಿ.
ಒಂದು ತೆಳ್ಳಗಿನ ಕಾಟನ್ ಬಟ್ಟೆಯನ್ನು ತಣ್ಣೀರಲ್ಲಿ ಅದ್ದಿ ಹಿಂಡಿ ಕತ್ತಿನ ಸುತ್ತ ಪಟ್ಟಿ ಕಟ್ಟಿ.ಅದರ ಮೇಲೆ woolen muffler ಕಟ್ಟಿ. ಬಟ್ಟೆ ಬಿಸಿ ಆದ ಮೇಲೆ ತೆಗೆದು ಮತ್ತೆ ಒದ್ದೆ ಮಾಡಿ ಕಟ್ಟಿ. ಎರಡು ಮೂರು ದಿನದಲ್ಲಿ ಗುಣವಾಗುತ್ತೆ.
ನೀವು ಬೆಳಗ್ಗೆ ಮತ್ತು ಸಂಜೆ ತಪ್ಪದೆ ಸಗಣಿ ಮೇಲೆ ನಿಮ್ಮ ಎಂಜಲು ಉಗಿದು ಬಿಟ್ಟು ಬನ್ನಿ ನೋಡೋಣ ಕಡಿಮೆ ಆಗುತ್ತಿದೆ.