ರೇಣುಕಾ ಸ್ವಾಮಿ ಸಾವಿನಿಂದ ತಾಯಿ ಕಣ್ಣೀರು : ದರ್ಶನ್, ಪವಿತ್ರಾಗೆ ಆಕ್ರೋಶದ ಬೈಗುಳ..!

1 Min Read

 

ಸುದ್ದಿಒನ್, ಚಿತ್ರದುರ್ಗ, ಜೂ. 12 : ಅಶ್ಲೀಲ ಮೆಸೇಜ್ ಮಾಡಿದ ಎಂಬ ಕಾರಣಕ್ಕೆ ಕೊಲೆಯಾದ ರೇಣುಕಾಸ್ವಾಮಿ ತಾಯಿ ಮಗನನ್ನು ಕಳೆದುಕೊಂಡು ದುಃಖದಲ್ಲಿದ್ದಾರೆ. ಈ ನೋವಿನಲ್ಲಿ ದರ್ಶನ್ ಹಾಗೂ ಪವಿತ್ರಾ ಗೌಡಗೆ ಹಿಡಿ ಶಾಪ ಹಾಕಿದ್ದಾರೆ. ಮನೆಗೆ ಮಗನೇ ಆಧಾರ ಸ್ತಂಭವಾಗಿದ್ದ. ಅವನೇ ಇಲ್ಲವೆಂದರೆ ನಾವೂ ಈಗ ಏನು ಮಾಡುವುದು. ಅವನು ಮಗುವನ್ನು ನೋಡುವುದಕ್ಕೆ ಆಗಲಿಲ್ಲ. ಈಗ ಸೊಸೆಯ ಮುಂದಿನ ಜೀವನ ಹೇಗೆ ಎಂದು ಪ್ರಶ್ನಿಸಿದ್ದಾರೆ.

ದರ್ಶನ್ ಒಬ್ಬ ಕಟುಕನಾಗಿ ಈ ರೀತಿ ಮಾಡಿದ್ದಾನೆ. ಆ ಸಮಯದಲ್ಲಿ ನನ್ನ ಮಗ ರಿಕ್ವೆಸ್ಟ್ ಮಾಡಿಕೊಂಡಿದ್ದನಂತೆ. ತಪ್ಪು ಮಾಡಿದ್ದೀನಿ. ಬಿಟ್ಟು ಬಿಡಿ. ನನ್ನ ಹೆಂಡತಿ ಬಸುರಿ ಇದ್ದಾಳೆ ಅಣ್ಣ ಅಂತ ರೇಣುಕಾ ಬೇಡಿಕೊಂಡಿದ್ದನಂತೆ. ಮಗ ಅಷ್ಟೆಲ್ಲಾ ಕೇಳಿಕೊಂಡರು ಬಿಡದೆ ಈ ರೀತಿ ಕೊಲೆ ಮಾಡಿದ್ದಾರಲ್ಲ, ದರ್ಶನ್ ಇನ್ನೆಂಥಾ ನೀಚ ಇರಬಹುದು. ದರ್ಶನ್ ನಾಯಕ ಅಲ್ಲ, ಖಳನಾಯಕ. ಅವನಿಗೆ ಮೆಟ್ಟು ತೆಗೆದುಕೊಂಡು ಹೊಡೆಯಬೇಕು. ದರ್ಶನ್ ಕಂಡಲ್ಲೇ ಶೂಟ್ ಮಾಡಬೇಕು. ಈ ಸಾವಿಗೆ ಮುಖ್ಯ‌ ಕಾರಣ ದರ್ಶನ್ ಹಾಗೂ ಪವಿತ್ರಾ ಗೌಡ.

ಪವಿತ್ರಾ ಗೌಡಗೆ ಬೇರೆ ಬೇರೆಯವರು ಕೂಡ ಕೆಟ್ಟದಾಗಿ ಮೆಸೇಜ್ ಮಾಡುತ್ತಾರೆ. ಅವರನ್ನೆಲ್ಲಾ ಬಿಟ್ಟು ನನ್ನ ಮಗನನ್ನು ಮಾತ್ರ ಹೊಡರದು ಸಾಯಿಸಿದ್ದಾನಲ್ಲ. ಅವಳು ಒಂದು ಹೆಣ್ಣಾಗಿ ಇನ್ನೊಂದು ಹೆಣ್ಣಿನ ಜೀವನವನ್ನು ಹಾಳು ಮಾಡಿದ್ದಾಳೆ. ಅವಳು ಮನುಷ್ಯಳಾ..? ಇಟ್ಟುಕೊಂಡವಳು ಇರುವ ತನಕ ಕಟ್ಟುಕೊಂಎವಳು ಕಡೆಯ ತನಕ. ಇಟ್ಟುಕೊಂಡವಳೇ ಇಷ್ಟೊಂದು ಸೊಕ್ಕಿನಿಂದ ಇದ್ದಾಳೆ. ನನ್ನ ಮಗನನ್ನು ಸಾಯಿಸಿದ್ದಾರಲ್ಲ, ವಾಪಸ್ ತಂದು ಕೊಡುವುದಕ್ಕೆ ಸಾಧ್ಯವಾಗುತ್ತದಾ..? ಅವನು ಅಶ್ಲೀಲವಾಗಿ ಮೆಸೇಜ್ ಮಾಡಿದ್ದಾನೋ ಬಿಟ್ಟಿದ್ದಾನೋ, ಮಗನನ್ನು ಕರೆದು ಎಚ್ವರಿಕೆ ಕೊಟ್ಟು ಬಿಡಬಹುದಿತ್ತು. ಬೇಡಿಕೊಂಡರು ಬಿಟ್ಟಿಲ್ಲ ಅಂದ್ಋ ಎಂಥಹ ಕಟುಕರಿರಬಹುದು ಎಂದು ಕಣ್ಣೀರು ಹಾಕಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *