ಬೆಂಗಳೂರು: ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ಪ್ರಕರಣಕ್ಕೆ ಸಂಬಂಧಿಸಿದಂತೆ ಕಳೆದ ತಿಂಗಳು ಎಸ್ಕೇಪ್ ಆಗಿದ್ದರು. ಎಸ್ಐಟಿ ತನಿಖೆ ನಡೆಸಲು ಎಷ್ಟು ಸಲ ನೋಟೀಸ್ ನೀಡಿದರು ಅದಕ್ಕೆ ಜಪ್ಪಯ್ಯ ಎಂದಿರಲಿಲ್ಲ. ಇದೀಗ ಮೇ 30 ಅಂದರೆ ನಾಳೆ ರಾಜ್ಯಕ್ಕೆ ಬಂದು ಎಸ್ಐಟಿ ಮುಂದೆ ಹಾಜರಾಗುತ್ತೇನೆ ಎಂದು ಹೇಳಿದ್ದಾರೆ. ಇದೀಗ ವಿಡಿಯೋ ಬಿಟ್ಟ ಬೆನ್ನಲ್ಲೇ ಎಸ್ಐಟಿ ಅಲರ್ಟ್ ಆಗಿದೆ.
ಪ್ರಜ್ವಲ್ ರೇವಣ್ಣ ಇಷ್ಟು ದಿನ ತಲೆಮರೆಸಿಕೊಂಡಿದ್ದಾರೆ. ಈಗ ಬಂದು ದೇಶದ ಒಳಗೆ ತಲೆಮರೆಸಿಕೊಂಡರೆ ಎಂಬ ಪ್ರಶ್ನೆ ಎಸ್ಐಟಿ ಅಧಿಕಾರಿಗಳದ್ದು. ಸದ್ಯ ಅಲರ್ಟ್ ಆಗಿರುವ ಎಸ್ಐಟಿ ಅಧಿಕಾರಿಗಳು ಏರ್ಪೋರ್ಟ್ ನಲ್ಲಿಯೇ ಕಾಯುತ್ತಿದ್ದಾರೆ. ಲುಫ್ತಾನ್ಸಾ ಏರ್ಲೈನ್ಸ್ ನಲ್ಲಿ ಪ್ರಜ್ವಲ್ ರೇವಣ್ಣ ಟಿಕೆಟ್ ಕಾಯ್ದಿರಿಸಿದ್ದಾರೆ. ಈಗಾಗಲೇ ಎರಡು ಬಾರಿ ಟಿಕೆಟ್ ಬುಕ್ ಮಾಡಿ ಪ್ರಜ್ವಲ್ ರೇವಣ್ಣ ಕ್ಯಾನ್ಸಲ್ ಮಾಡಿದ್ದರು. ಹೀಗಾಗಿಯೇ ಎಸ್ಐಟಿ ಅಧಿಕಾರಿಗಳು ಏರ್ಪೋರ್ಟ್ ನಲ್ಲಿಯೇ ಬೀಡು ಬಿಟ್ಟಿದ್ದಾರೆ.
ಪ್ರಜ್ವಲ್ ರೇವಣ್ಣ ಬಂದ ಕೂಡಲೇ ಎಸ್ಐಟಿ ತನ್ನ ವಶಕ್ಜೆ ಪಡೆದುಕೊಳ್ಳಲಿದೆ. ಬಳಿಕ ಮೆಡಿಕಲ್ ಟೆಸ್ಟ್ ಮಾಡಿಸಿ, ವಿಚಾರಣೆ ನಡೆಸಲಿದೆ. ಈಗಾಗಲೇ ಸಾಕಷ್ಟು ಹೆಣ್ಣು ಮಕ್ಕಳು ದೂರು ದಾಖಲಿಸಿದ್ದಾರೆ. ಪ್ರಜ್ವಲ್ ಅರೆಸ್ಟ್ ಆದ ಮೇಲೆ ಅವರೆಲ್ಲರ ಹೇಳಿಕೆಯನ್ನು ಮತ್ತೆ ಪಡೆಯಲಿದೆ. ಇಷ್ಟು ದಿನ ಎಸ್ಐಟಿ ಅಧಿಕಾರಿಗಳಿಗೂ ಸಿಗದೆ ತಲೆಮರೆಸಿಕೊಂಡಿದ್ದ ಪ್ರಜ್ವಲ್ ರೇವಣ್ಣ ಅವರ ಲೈಂಗಿಕ ದೌರ್ಜನ್ಯದ ವಿಡಿಯೋ ಕೇಸಿನ ತನಿಖೆ ಇನ್ಮುಂದೆ ಚುರುಕುಗೊಳ್ಳಲಿದೆ. ಈ ಪ್ರಕರಣದಲ್ಲಿ ಪ್ರಜ್ವಲ್ ರೇವಣ್ಣ ಜೈಲು ಪಾಲಾಗ್ತಾರಾ ಅಥವಾ ಜಾಮೀನು ತೆಗೆದುಕೊಂಡು ಹೊರಗೆ ಇರುತ್ತರಾ ನೋಡಬೇಕಿದೆ.