ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್, ಚಿತ್ರದುರ್ಗ
2026-27ನೇ ಸಾಲಿನ ದಾಖಲಾತಿಗಳು ಪ್ರಾರಂಭ! (ಪ್ಲೇ ಗ್ರೂಪ್‌ನಿಂದ 12ನೇ ತರಗತಿವರೆಗೆ)
2026-27ನೇ ಸಾಲಿನ ದಾಖಲಾತಿಗಳು ಪ್ರಾರಂಭ! (ಪ್ಲೇ ಗ್ರೂಪ್‌ನಿಂದ 12ನೇ ತರಗತಿವರೆಗೆ)
ಅರ್ಜುನ ಆನೆಯ ಸಮಾಧಿ ವಿಚಾರದಲ್ಲಿ ಹಣ ವಿಷಯ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ಅರ್ಜುನನ ಸಮಾಧಿ ಕಟ್ಟಬೇಕುಬೆಂದು ದರ್ಶನ್ ಯೋಚನೆಯಾಗಿತ್ತು. ಅದನ್ನು ಸೋಷಿಮೀಡಿಯಾದಲ್ಲಿ ಹಾಕಿದ್ದೆ ತಡ, ನವೀನ್ ಎಂಬುವವರು ಗ್ರೂಪ್ ಕ್ರಿಯೇಟ್ ಮಾಡಿ, ಅದರಿಂದಾನೂ ಹಣ ಕಲೆಕ್ಟ್ ಮಾಡಿದ್ದಾರೆ. ಆದರೆ ದರ್ಶನ್ ಅವರು ಹಣ ಕಲೆಕ್ಟ್ ಮಾಡುವುದು ಬೇಡ. ಅದರ ಜವಬ್ದಾರಿಯನ್ನು ನಾನೇ ತೆಗೆದುಕೊಳ್ಳುತ್ತೇನೆ ಎಂದು, ಕಲ್ಲುಗಳನ್ನು ಕಳುಹಿಸಿಕೊಟ್ಟಿದ್ದರು. ಆದರೆ ಅರಣ್ಯ ಇಲಾಖೆ ನಾವೇ ಕೆಲಸ ಮಾಡುತ್ತೇವೆ. ಹೊರಗಿನವರು ಕೆಲಸ ಮಾಡುವಂತೆ ಇಲ್ಲ ಎಂದು ಸಮಾಧಿಯನ್ನು ಕಟ್ಟಿ, ಹಣವನ್ನು ವಾಪಾಸ್ ನೀಡಿ, ಅದನ್ನು ಪ್ರೂಫ್ ಸಮೇತ ಸೋಷಿಯಲ್ ಮೀಡಿಯಾದಲ್ಲಿ ಹಾಕಿದ್ದರು. ಆದರೆ ಆ ಹಣ ನಮಗೆ ತಲುಪಿಲ್ಲ ಎಂದು ದರ್ಶನ್ ಕಡೆಯವರು ಹೇಳಿದಾಗ, ಎಲ್ಲರ ಚಿತ್ತ ಹೋಗಿದ್ದು ನವೀನ್ ಕಡೆಗೆ. ಅವರೇ ಗ್ರೂಪ್ ಮಾಡಿದ್ದು, ಅವರದ್ದೇ ಅಕೌಂಟ್ ಗೆ ಅರಣ್ಯ ಇಲಾಖೆ ಅಧಿಕಾರಿಗಳು ಹಣ ಹಾಕಿದ್ದಾರೆ ಎಂದು ಸುದ್ದಿಹಬ್ಬಿತ್ತು. ಇದೀಗ ನವೀನ್ ಮಾಧ್ಯಮದವರ ಮುಂದೆ ಬಂದು ಈ ಬಗ್ಗೆ ಮಾತನಾಡಿದ್ದಾರೆ.
‘ಈ ತಿಂಗಳು ಒಂದನೇ ತಾರೀಕು ಅರ್ಜುನ ಪಡೆ ಅಂತ ಒಂದು ಗ್ರೂಪ್ ಅನ್ನು ಕ್ರಿಯೇಟ್ ಮಾಡುತ್ತೇವೆ. ಸಾರ್ವಜನಿಕರ ಒತ್ತಾಯದ ಮೇರೆಗೆ ಗ್ರೂಪ್ ಕ್ರಿಯೇಟ್ ಮಾಡೋದು. ಇದನ್ನು ಕ್ರಿಯೇಟ್ ಮಾಡಿದ ಬಳಿಕ ಒಂದು ವಾರ ಚರ್ಚೆ ನಡೆಯಿತ್ತೆ. ಗ್ರೂಪ್ ಮಾಡಿದ ಬಳಿಕ ಆರ್ ಎಫ್ ಓ ಬಳಿ ಹೋಗುತ್ತೇವೆ. ಅವರಿಂದ ಪರ್ಮಿಷನ್ ಕೂಡ ಸಿಗುತ್ತದೆ. ನಾವೂ ಅಲ್ಲಿಗೆ ಹೋದಾಗ ಡಿ ಬಾಸ್ ಕಡೆಯವರು ಕಲ್ಲನ್ನು ತಂದು ಕೊಡುತ್ತೇವೆ ಅಂತ ಸಹಾಯ ಮಾಡಿದರು. ತರಾತುರಿಯಲ್ಲಿ ಕೆಲಸ ಮುಗಿಸಿ ಸೋಷಿಯಲ್ ಮೀಡಿಯಾದಲ್ಲಿ ತೋರಿಸಿಕೊಳ್ಳುವ ಸಲುವಾಗಿ ನನ್ನ ಅಕೌಂಟ್ ಗೆ ಹಣ ಹಾಕಿದ್ದಾರೆ.
ಈ ಹಣ ಏನಕ್ಕೆ ನನ್ನ ಅಕೌಂಟ್ ಗೆ ಬಂತು ಎನ್ನುವಾಗಲೇ ಈ ವಿಚಾರ ವೈರಲ್ ಆಗಿತ್ತು. ದರ್ಶನ್ ಅವರ ಆಪ್ತ ನವೀನ್ ಎನ್ನುತ್ತಿದ್ದರು. ದರ್ಶನ್ ಸರ್ ಆಗಲಿ, ಅವರ ಆಪ್ತರಾಗಲು ನನ್ನ ಕಾಂಟ್ಯಾಕ್ಟ್ ನಲ್ಲಿ ಇಲ್ಲ. ಗ್ರೂಪ್ ಕ್ರಿಯೇಟ್ ಮಾಡಿದ ಬಳಿಕ 45-50 ಸಾವಿರ ಹಣ ಕಲೆಕ್ಟ್ ಆಗಿದೆ. ಅರಣ್ಯ ಇಲಾಖೆ ಹಾಕಿರುವ ಹಣ ಇನ್ನು ಪೆಂಡಿಂಗ್ ತೋರಿಸುತ್ತಿದೆ. ಹಣವನ್ನು ವಾಪಾಸ್ ಕಳುಬಿಸಿ ಸಿಕ್ಕಿಹಾಕಿಕೊಳ್ಳುವುದು ಅಲ್ಲ. ಏನು ಮಾಡುವುದು ಅಂತ ಕೇಳಲು ನನ್ನ ಹತ್ತಿರವೇ ಇಟ್ಟುಕೊಂಡಿದ್ದೀನಿ’ ಎಂದಿದ್ದಾರೆ

ನಿಮ್ಮ ಊರಿನ ಅದ್ಧೂರಿ ಜಾತ್ರೆ, ವಿಶೇಷ ಆಚರಣೆಗಳು, ಅಥವಾ ನಿಮ್ಮ ಗಮನಕ್ಕೆ ಬಂದ ಸ್ಥಳೀಯ ಸಮಸ್ಯೆಗಳೇ? ಚಿತ್ರದುರ್ಗ ಹಾಗೂ ಸುತ್ತಮುತ್ತಲಿನ ಯಾವುದೇ ಸುದ್ದಿಯಾದರೂ ನಮಗೆ ತಿಳಿಸಿ. ನಿಮ್ಮ ಧ್ವನಿಯಾಗಿ ನಾವು ನಾಡಿಗೆ ತಲುಪಿಸುತ್ತೇವೆ. ಛಾಯಾಚಿತ್ರ ಮತ್ತು ವಿವರಗಳೊಂದಿಗೆ ನಮಗೆ ಇಮೇಲ್ ಮಾಡಿ.
✉️ suddionenews@gmail.com🛡️ ನಿಮ್ಮ ಮಾಹಿತಿಯನ್ನು ಗೌಪ್ಯವಾಗಿಡಲಾಗುವುದು.






ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್