Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಬರ್ತ್ ಡೇ ಮುಗಿದು ವಾರವಾದರೂ ಬರ್ತಿವೆ ಗಿಫ್ಟ್ : ಅಷ್ಟೊಂದು ಸೀರೆಗಳನ್ನು ಸಂಗೀತಾಗೆ ಗಿಫ್ಟ್ ಮಾಡಿದ್ದು ಯಾರು..?

---Advertisement---

ಸಂಗೀತಾ ಶೃಂಗೇರಿ ಈಗ ಯಾರನ್ನೇ ಕೇಳಿದರೂ ಹೇಳುತ್ತಾರೆ. ಬಿಗ್ ಬಾಸ್ ನಲ್ಲಿ ತಮ್ಮದೇ ಆದ ವ್ಯಕ್ತಿತ್ವದಿಂದ ಗುರುತಿಸಿಕೊಂಡವರು. ಎದುರಾಳಿಗಳಿಗೆ ತಿರುಗೇಟು ಕೊಟ್ಟವರು. ಗೆದ್ದೆ ಗೆಲ್ಲುತ್ತಾರೆ ಎಂದುಕೊಂಡಿದ್ದಾಗಲೇ ಕೊನೆಯ ಮೆಟ್ಟಿಲಿನ ತನಕ ಹೋಗಿ ವಾಪಾಸ್ ಬಂದವರು. ಬಿಗ್ ಬಾಸ್ ನಿಂದ ಬಂದ ಮೇಲೆ ಸಂಗೀತಾ ಶೃಂಗೇರಿ ಖ್ಯಾತಿ ಇನ್ನಷ್ಟು ಜಾಸ್ತಿಯಾಗಿದೆ. ಸಿನಿಮಾಗಳನ್ನು ಮಾಡುತ್ತಿದ್ದಾಗ ಗುರುತಿಸುವುದಕ್ಕಿಂತ ಕೊಂಚ ಹೆಚ್ಚೇ ಆಗಿದೆ. ಇದೇ ಖ್ಯಾತಿ ಅವರ ಹುಟ್ಟು ಹಬ್ಬಕ್ಕೆ ಅತಿಯಾದ ಉಡುಗೊರೆಗಳನ್ನು ನೀಡುವಂತೆ ಮಾಡಿದೆ.

ಇತ್ತಿಚೆಗಷ್ಟೇ ಅವರ ಹುಟ್ಟುಹಬ್ಬವನ್ನು ಮನೆಯವರು ಸರ್ಪೈಸ್ ಆಗಿ ಮಾಡಿದ್ದರು. ಬಿಗ್ ಬಾಸ್ ಸ್ನೇಹಿತರು, ಕುಟುಂಬಸ್ಥರೆಲ್ಲಾ ಸೇರಿಕೊಂಡು ಎಂಜಾಯ್ ಮಾಡಿದ್ದರು. ಹುಟ್ಟುಹಬ್ಬದ ಸೆಲೆಬ್ರೇಷನ್ ದಿನವೇ ಅಪಾರವಾದ ಉಡುಗೊರೆಗಳನ್ನು ಸ್ನೇಹಿತರು ನೀಡಿದ್ದರು. ಆದರೆ ಸಂಗೀತಾಗೆ ಕೊರಿಯರ್ ಮೂಲಕವೂ ಗಿಫ್ಟ್ ಗಳು ಸಿಗುತ್ತಿರುವುದು ಬಹಳ ಕುತೂಹಲಕಾರಿಯಾಗಿದೆ.

ವಾರಾನುಗಟ್ಟಲೇ ಯಾವ ಸ್ಟಾರ್ ಗಳ ಹುಟ್ಟುಹಬ್ಬವನ್ನು ಇಷ್ಟು ಕ್ರೇಜ್ ನಿಂದ ಆಚರಿಸುವುದಿಲ್ಲ. ಆದರೆ ಸಂಗೀತಾಗಿರುವ ಅಭಿಮಾನಿ ಬಳಗ ವಿಭಿನ್ನವಾಗಿಯೇ ಯೋಚನೆ ಮಾಡುತ್ತಿದೆ. ಬರ್ತ್ ಡೇ ಮುಗಿದು ಒಂದು ವಾರವಾದರೂ ಗಿಫ್ಟ್ ಗಳ ಸುರಿಮಳೆ ಸುರಿಯುತ್ತಿದೆ. ಬಳೆ, ಕಾಲು ಚೈನು, ಸರ, ಸೀರೆಗಳನ್ನೇ ಹೆಚ್ಚು ಜನ ಉಡುಗೊರೆಯಾಗಿ ನೀಡುತ್ತಿದ್ದಾರೆ. ಕೊರಿಯರ್ ಮೂಲಕ ಸೀರೆಗಳನ್ನು ಕಳುಹಿಸುತ್ತಿದ್ದಾರೆ. ಅಭಿಮಾನಿಗಳು ಪ್ರೀತಿಯಿಂದ ಸಿಂಹಿಣಿ ಎಂದೇ ಕರೆಯುತ್ತಾರೆ. ಇದೀಗ ಅಭಿಮಾನಿಗಳ ಅಪಾರವಾದ ಪ್ರೀತಿ, ಕಾಳಜಿಗೆ ಸಂಗೀತಾ ಕಣ್ಣು, ಮನಸ್ಸು ತುಂಬಿದೆ. ಉಡುಗೊರೆಯನ್ನೆಲ್ಲಾ ಸೋಷಿಯಲ್ ಮೀಡಿಯಾದಲ್ಲಿ ಹಾಕಿ, ಧನ್ಯವಾದ ತಿಳಿಸಿದ್ದಾರೆ.

ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ

ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.

ವರದಿ ಮಾಡುವುದು ಹೇಗೆ?

  • ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ವಾಟ್ಸಪ್ ಮಾಡಿ: 90369 74702

ನಾವು ಏನು ಮಾಡುತ್ತೇವೆ?

  • ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
  • ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
  • ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment