ವರದಿ ಮತ್ತು ಫೋಟೋ ಕೃಪೆ
ಸುರೇಶ್ ಪಟ್ಟಣ್,
ಮೊ : 98862 95817
ಸುದ್ದಿಒನ್, ಚಿತ್ರದುರ್ಗ ಏ. 21: ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಗೋವಿಂದ ಕಾರಜೋಳ ಪರವಾಗಿ ಸವಿತಾ ಸಮಾಜದ ಕಾರ್ಯಾದ್ಯಕ್ಷ ಲಿಂಗರಾಜ್ ಹಾಗೂ ಬಿಜೆಪಿ ಪಕ್ಷದ ಪಧಾದಿಕಾರಿಗಳು ನಗರದ ದೊಡ್ಡಪೇಟೆ 5 ನೇ ವಾರ್ಡ ಸವಿತಾ ಕಾಲೋನಿಯಲ್ಲಿ ಮನೆ ಮನೆ ಸಂಪರ್ಕ ಮಾಡಿ ಕರ ಪತ್ರ ನೀಡಿ ಬಿಜೆಪಿ ಅಭ್ಯರ್ಥಿ ಪರವಾಗಿ ಮತಯಾಚನೆ ಮಾಡಿ ಪ್ರಚಾರ ಕೈಗೊಂಡರು.
ಈ ಸಂದರ್ಭದಲ್ಲಿ ಮಾತನಾಡಿದ ಲಿಂಗರಾಜ್ ನರೇಂದ್ರ ಮೋದಿ ಮೂರನೇ ಬಾರಿಗೆ ದೇಶದ ಪ್ರಧಾನಿಯಾಗ ಬೇಕಾಗಿರುವುದರಿಂದ ಈ ಬಾರಿ ಚುನಾವಣೆ ಅತ್ಯಂತ ಮಹತ್ವದ್ದಾಗಿದ್ದು ಕ್ಷೇತ್ರದ ಅಭ್ಯರ್ಥಿ ಗೋವಿಂದ ಕಾರಜೋಳರನ್ನು, ಬಹುಮತದಿಂದ ಗೆಲ್ಲಿಸಿ ಪಾರ್ಲಿಮೆಂಟ್‍ಗೆ ಕಳಿಸಿಕೊಡಿ ಎಂದು ಮತದಾರರಲ್ಲಿ ಮನವಿ ಮಾಡಿದರು.
ಮೋದಿಜಿಯವರು ಅಡಳಿತ ಅವದಿಯಲ್ಲಿ ನಮ್ಮಂತಹ ಸಣ್ಣ ಸಣ್ಣ ಸಮುಧಾಯಗಳಿಗೆ ಅನೇಕ ಜನಪರ ಯೊಜನೆಗಳಾದ ವಿಶ್ವಕರ್ಮ ಯೋಜನೆಯಿಂದ ಯಾವುದೇ ಸೇಕ್ಯೂರಿಟಿ ಇಲ್ಲದೇ ಬ್ಯಾಂಕ್ ಲೋನ್ ಸಿಗುವಂತೆ ಆಗಿದೆ.
ಈ ಶ್ರಮ್ ಯೋಜನೆಯಿಂದ ನಮ್ಮಂತವರಿಗೆಲ್ಲ ಕಾರ್ಮಿಕರ ಕಾರ್ಡ್ ಸಿಕ್ಕಿದೆ. ಅಯುಷ್ಮಾನ್ ಕಾರ್ಡ್ ನಮ್ಮಲ್ಲರಿಗೂ ಅನೂಕೂಲವಾಗಿದೆ ನಮ್ಮ ಸಮಾಜದ ಬಂಧುಗಳು ತಮ್ಮ ಹಿತೈಷಿಗಳಿಗೆ ಸಂಬಂಧಿಕರಿಗೆ ಮನವರಿಕೆ ಮಾಡಿ ಮೋದಿಜಿಯವರ ದೇಶಕ್ಕೆ ಕೊಟ್ಟಂತಹ ಕೊಡುಗೆಗಳನ್ನು ನಾವುಗಳು ಸ್ಮರಿಸಬೇಕಾಗಿದೆ ಪ್ರಧಾನಿ ಮೋದಿಜಿಯಿಂದ ಮಾತ್ರ ದೇಶದ ರಕ್ಷಣೆ ಸಾದ್ಯ ಎಂಬುದನ್ನು ನೆನಪಿಸಿ ಗೋವಿಂದ ಕಾರಜೋಳ ಪರವಾಗಿ ಮತ ಚಲಾಯಿಸುವಂತೆ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಬಿಜೆಪಿ ಮಾದ್ಯಮ ವಕ್ತಾರ ದಗ್ಗೆ ಶಿವಪ್ರಕಾಶ್, ವಕ್ತಾರ ನಾಗರಾಜ್ ಬೇದ್ರೆ, ನಗರ ಸಭಾ ಸದಸ್ಯ ಹರೀಶ್, ಸಮಾಜಿಕ ಜಾಲತಾಣದ ಸಂಚಾಲಕ ಸತ್ಯನಾರಾಯಣ, ಬಿಜೆಪಿ ಹಿರಿಯ ಮುಖಂಡ ರಾಘಣ್ಣ, ಜಿ ಆರ್ ವೆಂಕಟೇಶ್, ಅರ್. ಕೆ. ಮಂಜುನಾಥ, ಅನಿಲ್‍ನಾಗ್, ಗೋಪಿ, ಶ್ರೀನಿವಾಸ, ಕುಬೇರಪ್ಪ, ಭೀಮಪ್ಪ ನಾಯಕ, ಗಿರೀಶ್ ಸೇರಿದಂತೆ ಇತರರು ಮತಯಾಚನೆ ಸಂದರ್ಭದಲ್ಲಿ ಉಪಸ್ಥಿತರಿದ್ದರು.