ಸುದ್ದಿಒನ್, ಚಿತ್ರದುರ್ಗ, ಏಪ್ರಿಲ್, 19 : ನಗರದ ತಿರುಮಲ ಡಾಬ ಚೆಕ್ ಪೋಸ್ಟ್ ಬಳಿಯಲ್ಲಿ ಮಧ್ಯಾಹ್ನ ಸುಮಾರು 3.00 ಗಂಟೆ ಸಮಯದಲ್ಲಿ ಯಾವುದೇ ಸೂಕ್ತ ದಾಖಲಾತಿ ಇಲ್ಲದೆ ಸಾಗಿಸುತ್ತಿದ್ದ ರೂ.20,93,928 ರ ಮೊತ್ತವನ್ನು ಸಂಬಂಧಿಸಿದ ಎಫ್.ಎಸ್.ಟಿ ತಂಡದವರು ಜಪ್ತಿ ಮಾಡಲಾಗಿದೆ.
ಸದರಿ ಮೊತ್ತವನ್ನು ಶ್ರೀ ಎಂ ಕಾರ್ತಿಕ್, ಉಪವಿಭಾಗಾಧಿಕಾರಿಗಳು ಚಿತ್ರದುರ್ಗ ಹಾಗೂ ಡಾ|| ನಾಗವೇಣಿ, ತಹಶೀಲ್ದಾರ್ ಚಿತ್ರದುರ್ಗ ಇವರ ಸಮಾಕ್ಷಮದಲ್ಲಿ Income Tax ಇಲಾಖೆಯವರಿಗೆ ಹಸ್ತಾಂತರ ಮಾಡಲಾಯಿತು.