Notice: Undefined index: options in /home/nagendra/public_html/content/plugins/elementor-pro/modules/theme-builder/widgets/site-logo.php on line 124

ವಾಣಿಜ್ಯ ವಿಭಾಗದಲ್ಲಿ ತುಮಕೂರಿನ ಗಾನವಿ ಟಾಪರ್ : ಉಳಿದ ಮಾಹಿತಿ ಇಲ್ಲಿದೆ

Facebook
Twitter
Telegram
WhatsApp

 

ಬೆಂಗಳೂರು: ಇಂದು ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟವಾಗಿದ್ದು, ಹುಡುಗಿಯರೇ ಮೇಲುಗೈ ಸಾಧಿಸಿದ್ದಾರೆ. ಮೊದಲ ಸ್ಥಾನವನ್ನು ದಕ್ಷಿಣ ಕನ್ನಡ ಭದ್ರವಾಗಿ ಉಳಿಸಿಕೊಂಡಿದೆ. ಉಡುಪಿ ಎರಡನೇ ಸ್ಥಾನ ಪಡೆದರೆ ವಿಜಯಪುರ ಮೂರನೇ ಸ್ಥಾನ ಪಡೆದುಕೊಂಡಿದೆ. ಉಳಿದಂತೆ ಟಾಪರ್ ಗಳ ಲೀಸ್ಟ್ ಇಲ್ಲಿದೆ. ಯಾವೆಲ್ಲಾ ಜಿಲ್ಲೆಯಲ್ಲಿ, ಯಾವೆಲ್ಲಾ ವಿಭಾಗದಲ್ಲಿ ಟಾಪರ್ ಆಗಿದ್ದಾರೆ ಎಂಬ ಕಂಪ್ಲೀಟ್ ಡಿಟೈಲ್ ಇಲ್ಲಿದೆ.

 

ಕಲಾ ವಿಭಾಗದಲ್ಲಿ ಬೆಂಗಳೂರಿನ ಜಯನಗರದ NMKRV ಕಾಲೇಜಿನ ಮೇಧಾ 596 ಅಂಕಗಳನ್ನು ಪಡೆಯುವ ಮೂಲಜ ಪ್ರಥಮ ಸ್ಥಾನ, ವಿಜಯಪುರದ ಎಸ್ ಎಸ್ ಕಾಲೇಜಿನ ವೇದಾಂತ್ 596, ಬಳ್ಳಾರಿಯ ಇಂದು ಕಾಲೇಜಿನ ಕವಿತಾ ಬಿವಿ 596, ಧಾರವಾಡದ ಕೆಇಬಿ ಕಾಲೇಜಿನ ರವೀನಾ ಸೋಮಪ್ಪ ಲಮಾಣಿ 595 ಅಂಕ ಪಡೆಯುವ ಮೂಲಕ ದ್ವಿತೀಯ ಸ್ಥಾನ ಪಡೆದಿದ್ದಾರೆ.

ಇನ್ನು ವಾಣಿಜ್ಯ ವಿಭಾಗದಲ್ಲಿ ರಾಜ್ಯದಲ್ಲಿಯೇ ಒಂದು ಹುಡುಗಿ ಮಾತ್ರ ಫಸ್ಟ್ ರ್ಯಾಂಕ್ ಪಡೆದಿದ್ದಾರೆ. ತುಮಕೂರಿನ ವಿದ್ಯಾನಿಧಿ ಕಾಲೇಜಿನ ಗಾನವಿ 597 ಅಂಕ ಪಡೆಯುವ ಮೂಲಕ ರಾಜ್ಯಕ್ಕೆ ಫಸ್ಟ್ ಬಂದಿದ್ದಾರೆ.

ವಿಜ್ಞಾನ ವಿಭಾಗದಲ್ಲಿ ಮೂಡುಬಿದಿರೆಯ ಆಳ್ವಾಸ್ ಕಾಲೇಜಿನ ನೂತನ್ ಆರ್ ಗೌಡ – 595, ಉಡುಪಿಯ ಕಾರ್ಕಳ ಜ್ಞಾನ ಸುಧಾ ಕಾಲೇಜಿನ ಸಮ್ಯಕ್ ಆರ್ ಪ್ರಭು -595 ಅಂಕ, ಬೆಂಗಳೂರಿನ ಅಶೋಕ್ ಪಿಯು ಕಾಲೇಜಿನ ಅಮೋದ್ ನಾಯ್ಕ್ -595 ಅಂಕ, ಶಿವಮೊಗ್ಗದ ಕುಮದ್ವತಿ ಕಾಲೇಜಿನ ಪವನ್ 596 ಅಂಕ, ಉಡುಪಿಯ ಪೂರ್ಣಪ್ರಜ್ಞಾ ಕಾಲೀಜಿನ ಹರ್ಷಿತ್ 596 ಅಂಕ ಪಡೆಯುವ ಮೂಲಕ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದ್ದಾರೆ.

ಇನ್ನು ಚಿತ್ರದುರ್ಗ 72.92 ಶೇಕಡವಾರು ಪಡೆಯುವ ಮೂಲಕ 31ನೇ ಸ್ಥಾನ ಪಡೆದಿದೆ.

Facebook
Twitter
Telegram
WhatsApp
suddionenews

suddionenews

Leave a Comment

Top Stories

ರಾಶಿಯವರ ಹಣಕಾಸಿನ ಸಮಸ್ಯೆಯಿಂದಾಗಿ ನೆಮ್ಮದಿಗೆ ಭಂಗ

ರಾಶಿಯವರ ಹಣಕಾಸಿನ ಸಮಸ್ಯೆಯಿಂದಾಗಿ ನೆಮ್ಮದಿಗೆ ಭಂಗ : ಈ ರಾಶಿಯವರ ಕುಟುಂಬದಲ್ಲಿ ಒಬ್ಬರಿಂದ ಅಶಾಂತಿಯ ವಾತಾವರಣ: ಸೋಮವಾರ ರಾಶಿ ಭವಿಷ್ಯ -ನವೆಂಬರ್-25,2024 ಸೂರ್ಯೋದಯ: 06:30, ಸೂರ್ಯಾಸ್ತ : 05:35 ಶಾಲಿವಾಹನ ಶಕೆ -1946 ಸಂವತ್-2080

ಚಿತ್ರದುರ್ಗ | ಬಾಪೂಜಿ ವಿದ್ಯಾಸಂಸ್ಥೆಯಲ್ಲಿ ಕನ್ನಡ ರಾಜ್ಯೋತ್ಸವ : ವಕೀಲರಿಗೆ ಸನ್ಮಾನ

ಸುದ್ದಿಒನ್, ಚಿತ್ರದುರ್ಗ, ನವೆಂಬರ್. 24 : ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು, ಕದಳಿ ಮಹಿಳಾ ವೇದಿಕೆ, ಬಾಪೂಜಿ ಸಮೂಹ ಸಂಸ್ಥೆಗಳು, ರಂಗಸೌರಭ ಕಲಾ ಸಂಘ ಹಾಗೂ ಶ್ರೀ ಶಿವಕುಮಾರ ಕಲಾ ಸಂಘ ಇವರ ಸಂಯುಕ್ತ

ಮಹಾರಾಷ್ಟ್ರದಲ್ಲಿ ಕಾಂಗ್ರೆಸ್ ಸೋಲಿಗೆ ಆ ಐವರು ಕಾರಣವೇ ?

ಸುದ್ದಿಒನ್ | ಮಹಾರಾಷ್ಟ್ರ ಚುನಾವಣೆಯ ಇತಿಹಾಸದಲ್ಲಿ ಮೊದಲ ಬಾರಿಗೆ ಕಾಂಗ್ರೆಸ್ ಪಕ್ಷ ಕೇವಲ 16 ಸ್ಥಾನಗಳನ್ನು ಗೆದ್ದಿದೆ. ಭಾರೀ ಸೋಲಿನ ನಂತರ ಪಕ್ಷವು ಇವಿಎಂಗಳಿಂದ ನಮಗೆ ಸೋಲಾಗಿದೆ ಎಂದು ದೂರಿದೆ. ಇವಿಎಂಗಳ ದತ್ತಾಂಶದಿಂದಾಗಿ ಚುನಾವಣೆ

error: Content is protected !!