Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಎರಡನ್ನೂ ಸಮಾನವಾಗಿ ಸ್ವೀಕರಿಸಬೇಕು : ಗಜಪಡೆ ನೀಚತನಕ್ಕೆ ಅಶ್ವಿನಿ ಪುನೀತ್ ರಾಜ್‍ಕುಮಾರ್ ಸಾಫ್ಟ್ ಆನ್ಸರ್

---Advertisement---

ಬೆಂಗಳೂರು: ಕಳೆದ ಎರಡು ದಿನಗಳ ಹಿಂದೆ ಗಜಪಡೆ ಎಂಬ ಖಾತೆಯಿಂದ ಅಶ್ವಿನಿ ಪುನೀತ್ ರಾಜ್‍ಕುಮಾರ್ ಬಗ್ಗೆ ಅವಹೇಳನ ಮಾಡಲಾಗಿತ್ತು. RCB ಸೋಲಿಗೆ ಅವರೇ ಕಾರಣ ಎಂಬಂತೆ ಪೋಸ್ಟ್ ನಲ್ಲಿ ಹಾಕಲಾಗಿತ್ತು. ಅದಷ್ಟೇ ಆಗಿದ್ದರೆ ಇಗ್ನೋರ್ ಮಾಡಿ ಜನ ಬಿಡುತ್ತಿದ್ದರೇನೋ. ಆದರೆ ಆ ಖಾತೆಯನ್ನು ಮೆಂಟೈನ್ ಮಾಡುವವನ ಮನಸ್ಥಿತಿಯಂತೆಯೇ ಪದ ಬಳಕೆಯೂ ಆಗಿತ್ತು. ಅಶ್ವಿನಿ ಪುನೀತ್ ರಾಜ್‍ಕುಮಾರ್ ಬಗ್ಗೆ ಕೆಟ್ಟ ಪದಗಳನ್ನು ಬಳಸಲಾಗಿತ್ತು. ಅದಕ್ಕೆ ಸ್ಯಾಂಡಲ್ ವುಡ್ ನಟ-ನಟಿಯರಷ್ಟೇ ಅಲ್ಕ ಸಾಮಾನ್ಯರು ಕೂಡ ವಿರೋಧ ವ್ಯಕ್ತಪಡಿಸಿದ್ದರು. ಇದೀಗ ಆ ಪೋಸ್ಟ್ ಬಗ್ಗೆ ಅಶ್ವಿನಿ ಪುನೀತ್ ರಾಜ್‍ಕುಮಾರ್ ಉತ್ತರಿಸಿದ್ದಾರೆ.

 

ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ನಿಧನದ ಬಳಿಕ ಅಶ್ವಿನಿ ಅವರೇ ಎಲ್ಲಾ ಜವಾಬ್ದಾರಿಯನ್ನು ಹೊತ್ತಿದ್ದಾರೆ. ಮಕ್ಕಳ ಜವಾಬ್ದಾರಿ, ಇಂಡಸ್ಟ್ರಿಯಲ್ಲಿ ಆಕ್ಟೀವ್, ಪಿಆರ್ಕೆ ಸಂಸ್ಥೆ ಹೀಗೆ ಅಪ್ಪು ನೋಡಿಕೊಳ್ಳುತ್ತಿದ್ದ ಎಲ್ಲಾ ಜವಾಬ್ದಾರಿಯನ್ನು ಹೊತ್ತಿದ್ದಾರೆ. ಈಗ ಪಿಆರ್ಕೆ ಪ್ರೊಡಕ್ಷನ್ ನಿಂದ O2 ಸಿನಿಮಾ ಕೂಡ ರಿಲೀಸ್ ಗೆ ರೆಡಿ ಇದೆ. ಹೊಸಬರಿಗೆ ಅವಕಾಶ ನೀಡುತ್ತಾ, ಹೊಸತನಗಳನ್ನು ಹುಟ್ಟು ಹಾಕುವ ದಾರಿಯಲ್ಲಿ ಅಶ್ವಿನಿ ಪುನೀತ್ ರಾಜ್‍ಕುಮಾರ್ ಸಾಗುತ್ತಿದ್ದಾರೆ. ಇಂಥ ಧೈರ್ಯವಂತ ಮಹಿಳೆ ಬಗ್ಗೆ ಆ ವ್ಯಕ್ತಿ ಕೆಟ್ಟದಾಗಿ ಮಾತನಾಡಿದ್ದಲ್ಲದೆ, ಒಮ್ಮೆ ದರ್ಶನ್ ಫೋಟೋ, ಇನ್ನೊಮ್ಮೆ ಸುದೀಪ್ ಫೋಟೋ ಬಳಸಿ ಆಟವಾಡಿದ್ದಾನೆ.

ಪಾಸಿಟಿವ್ ಮತ್ತು ನೆಗೆಟಿವ್ ನ ಹೇಗೆ ಸ್ವೀಕಾರ ಮಾಡ್ತೀರಾ ಎಂಬ ಪ್ರಶ್ನೆಗೆ ಉತ್ತರ ನೀಡಿದ ಅಶ್ವಿನಿ ಪುನೀತ್ ರಾಜ್‍ಕುಮಾರ್, ಬೇರೆ ಆಯ್ಕೆ ಇಲ್ಲ. ಜೀವನ ಸಾಗಲೇಬೇಕು. ಎರಡನ್ನೂ ಸಮಾನವಾಗಿ ಸ್ವೀಕರಿಸುತ್ತೇನೆ ಎಂದಿದ್ದಾರೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment