ಐಪಿಎಲ್ ಫೀವರ್ ಈಗಾಗಲೇ ಶುರುವಾಗಿದ್ದು, ಮಾರ್ಚ್ 22ಕ್ಕೆ ಅಧಿಕೃತವಾಗಿ ಚಾಲನೆ ಸಿಗಲಿದೆ. ಮೊದಲ ಪಂದ್ಯ ಆರ್ಸಿಬಿಯಿಂದಾನೇ ಆರಂಭವಾಗಲಿದೆ. ಆರ್ಸಿಬಿ ಫ್ಯಾನ್ಸ್ ಅಂತು ಈ ಬಾರಿಯಾದರೂ ಕಪ್ ಗೆಲ್ಲುತ್ತಾರೆ ಎಂಬ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಹಲವು ವರ್ಷಗಳಿಂದ ಆರ್ ಸಿಬ ಫ್ಯಾನ್ಸ್ ಜೋಶ್ ನಿಂದ ಹೇಳಿದ್ದೆ ಬಂತು, ಈ ಸಲ ಕಪ್ ನಮ್ಮದೇ ಅಂತ. ಆದರೆ ಆ ಕಪ್ ಎತ್ತುವ ಅದೃಷ್ಟ ಅದ್ಯಾಕೋ ಆರ್ಸಿಬಿಗೆ ದೊರಕುತ್ತಿಲ್ಲ.
ಎಲ್ಲಾ ಮ್ಯಾಚ್ ಗಳನ್ನು ಚೆನ್ನಾಗಿ ಆಡಿ, ಇನ್ನೇನು ಫೈನಲ್ ತಲುಪಬೇಕು ಎನ್ನುವಷ್ಟರಲ್ಲಿ ಕಪ್ ಮಿಸ್ ಆಗುತ್ತಿದೆ. ಇದಕ್ಕೆಲ್ಲಾ ಕಾರಣ ಆ ಹೆಸರು ಎಂದೇ ಹೇಳಲಾಗುತ್ತಿದೆ. ಆರ್ ಬಿ ಯಲ್ಲಿರುವ ಬೆಂಗಳೂರು ಪದದಿಂದಾನೇ ಕಪ್ ಗೆಲ್ಲುತ್ತಿಲ್ಲ ಎಂಬ ಆರೋಪವಿದೆ. ಹೀಗಾಗಿ ಆ ಪದವನ್ನು ತೆಗೆಯಲು ಅಭಿಮಾನಿಗಳ ಒತ್ತಡವೂ ಇದೆ. ಇದೀಗ ಪಂದ್ಯಗಳ ಆರಂಭಕ್ಕೂ ಮೊದಲೇ ಆರ್ ಸಿಬ ಹೆಸರು ಬದಲಾವಣೆಗೆ ಮುಂದಾಗಿದೆ.
ಹೆಸರು ಬದಲಾವಣೆಗೆ ರಿಷಭ್ ಶೆಟ್ಟಿಯವರ ಒಂದು ವಿಡಿಯೋ ಬಳಸಿಕೊಂಡು ಹೆಸರು ಬದಲಾವಣೆಯ ಮಾಹಿತಿಯನ್ನು ತಿಳಿಸಲಾಗಿದೆ. ಮೂರು ಕೋಣಗಳ ಮೇಲೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಎಂದು ಬರೆದಿದ್ದು, ಅದರಲ್ಲಿ Bengaluru ಎಂಬ ಕೋಣವನ್ನು ರಿಷಭ್ ಶೆಟ್ಟಿ ರಿಜೆಕ್ಟ್ ಮಾಡಿದ್ದಾರೆ. ಆಮೇಲೆ ತಿಳೀತಲ್ಲ ಯಾಕೆ ಅಂತ ಎಂಬ ಡೈಲಾಗ್ ಹೊಡೆದಿದ್ದಾರೆ. ಇದು ಎಲ್ಲರಿಗೂ ಅರ್ಥವಾಗಿದೆ. ಹಾಗೇ ಮಾರ್ಚ್19ಕ್ಕೆ ಹೆಸರು ಬದಲಾವಣೆಯ ಅನ್ ಬಾಕ್ಸ್ ಕೂಡ ಮಾಡಲಾಗುತ್ತಿದೆ.
ಆರ್ ಬಿ ಈ ಬಗ್ಗೆ ತಮ್ಮ ಅಧಿಕೃತ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದೆ. ಜೊತೆಗೆ Bengaluru ಎಂದು ಇರುವ ಹೆಸರನ್ನು Banglore ಎಂದು ಬದಲಾಯಿಸಲಿದೆ. ಹೆಸರು ಬದಲಾದ ಮೇಲಾದ್ರು ನಮ್ಮವರು ಕಪ್ ಗೆಲ್ತಾರಾ ನೋಡಬೇಕಿದೆ.