ಕಿಚ್ಚ ಸುದೀಪ್ ಅವರಿಗೆ ಕೊಟ್ಟ ಎರಡನೇ ಮಾತನ್ನು ನೆರವೇರಿಸಿದ ಡ್ರೋನ್ ಪ್ರತಾಪ್

suddionenews
1 Min Read

ಬೆಂಗಳೂರು: ಬಿಗ್ ಬಾಸ್ ಸೀಸನ್ 10ರಲ್ಲಿ ಈ ಬಾರಿ ಡ್ರೋನ್ ಪ್ರತಾಪ್ ಕೂಡ ಕಂಟೆಸ್ಟೆಂಟ್ ಆಗಿ ಬಂದಿದ್ದರು. ನೂರೆಂಟು ಆರೋಪಗಳನ್ನು ಹೊತ್ತು ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟಿದ್ದರು. ಆದರೆ ದಿನ ಕಳೆದಂತೆ ಪ್ರತಾಪ್ ಮುಗ್ಧತೆಗೆ ಜನ ಮರುಳಾಗಿದ್ದರು. ಹೀಗಾಗಿಯೇ ಜನರ ಮನಗೆದ್ದು ಫಸ್ಟ್ ರನ್ನರ್ ಅಪ್ ಆಗಿ ಹೊರ ಬಂದಿದ್ದರು.

ಅಂದು ಕಿಚ್ಚನ ವೇದಿಕೆಯಲ್ಲಿ ರನ್ನರ್ ಅಪ್ ಆದಾಗ ಹಲವು ಪ್ರಾಮೀಸ್ ಗಳನ್ನು ಮಾಡಿದ್ದರು. ಬಂದಂತಹ ಬಹುಮಾನದ ಹಣವನ್ನು ಅಗತ್ಯ ಇರುವ ಜನರಿಗೆ ಕೊಡುತ್ತೇನೆ ಎಂದಿದ್ದರು. ಅದರಂತೆ ಬೌನ್ಸ್ ಗಾಡಿಯನ್ನು ಫುಡ್ ಡೆಲಿವರಿ ಮಾಡುವ ಹುಡುಗನಿಗೆ ನೀಡಿದ್ದರು. ಇದೀಗ ಬಂದಂತ ಹಣವನ್ನು ಕಷ್ಟದಲ್ಲಿರುವವರಿಗೆ ನೀಡಿದ್ದಾರೆ.

ಬ್ಯುಸಿನೆಸ್​ನಲ್ಲಿ ಹಣ ಕಳೆದುಕೊಂಡ ಕುಟುಂಬ ಕಷ್ಟದ ದಿನಗಳನ್ನ ಕಳೆಯುತ್ತಿತ್ತು. ಆ ಕುಟುಂಬದ ಬಗ್ಗೆ ತಿಳಿದುಕೊಂಡ ಪ್ರತಾಪ್​ ಇಬ್ಬರೂ ಹೆಣ್ಣು ಮಕ್ಕಳಿಗೆ ಸಹಾಯ ಮಾಡಿದ್ದಾರೆ. ಒಟ್ಟಿನಲ್ಲಿ ಎಷ್ಟೋ ಭರವಸೆಗಳನ್ನ ಮರೆಯುವ ಈ ಕಾಲದಲ್ಲಿ ಮೂವರ ಬದುಕಿಗೆ ಆಸರೆ ಆಗಿದ್ದಾರೆ ಡ್ರೋನ್​​ ಪ್ರತಾಪ್​. ಅವರ ಈ ಕಾರ್ಯಕ್ಕೆ ಅಪಾರ ಜನಮನ್ನಣೆ ಸಿಗುತ್ತಿದೆ. ಇದಕ್ಕಿಂತ ಸಾರ್ಥಕತೆ ಇನ್ನೇನಿದೆ ಅಲ್ವಾ? ಇನ್ನೂ ಈ ವಿಡಿಯೋ ನೋಡಿದ ನೆಟ್ಟಿಗರು ತನ್ನ ಕಷ್ಟವನ್ನು ಬದಿಗಿಟ್ಟು ಪರರ ಕಷ್ಟಗಳಿಗೆ ಸ್ವಂದಿಸುವ ಗುಣ ನಿಮ್ಮದು, ನಿಮ್ಮಿಂದ ನೋಡಿ ಕಲಿಯಲಿಕ್ಕೆ ಸಾಕಷ್ಟಿದೆ ಎಂದು ಡ್ರೋನ್ ಪ್ರತಾಪ್ ಬಗ್ಗೆ ಪಾಸಿಟಿವ್ ಆಗಿ ಕಮೆಂಟ್ ಹಾಕುತ್ತಿದ್ದಾರೆ. ಡ್ರೋನ್ ಪ್ರತಾಪ್ ಸದ್ಯ ಕಲರ್ಸ್ ಕನ್ನಡದಲ್ಲಿಯೇ ಮನರಂಜನೆ ನೀಡುತ್ತಿದ್ದಾರೆ. ಗಿಚ್ಚಿ ಗಿಲಿಗಿಲಿಯಲ್ಲಿ ಕಾಮಿಡಿ ಮಾಡುತ್ತಾ ನಗಿಸುತ್ತಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *