Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ತಪ್ಪು ತಪ್ಪೇ.. ಹೆಣ್ಣು ಹೆಣ್ಣೇ.. : ದರ್ಶನ್ ವಿರುದ್ಧ ಸಿಟ್ಟಿಗೆದ್ದ ಮಹಿಳಾ ಆಯೋಗದ ಅಧ್ಯಕ್ಷೆ

---Advertisement---

ಬೆಂಗಳೂರು: ಇತ್ತಿಚೆಗೆ ನಟ ದರ್ಶನ್ ಹೆಣ್ಣು ಮಕ್ಕಳ ಬಗ್ಗೆ ಬಹಳ ಹಗುರವಾಗಿ ಮಾತನಾಡಿದ್ದರು. ಇವತ್ತು ಇವಳಿರುತ್ತಾಳೆ. ನಾಳೆ ಅವಳಿರುತ್ತಾಳೆ ಎಂದು ಭಾಷಣದ ಬರದಲ್ಲಿ ಹೇಳಿದ್ದರು. ಬಳಿಕ ಈ ಹೇಳಿಕೆ ಖಂಡಿಸಿ, ಮಹಿಳೆಯರು ಹೋರಾಟಕ್ಕೆ ಇಳಿದಿದ್ದರು. ಇದೀಗ ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಮಹಿಳಾ ಆಯೋಗ ಕೂಡ ನೋಟೀಸ್ ನೀಡಿದೆ.

 

ದರ್ಶನ್ ಅವರ ಹೇಳಿಕೆಯ ಬಗ್ಗೆ ಮಾತನಾಡಿದ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಪ್ರಮೀಳಾ ನಾಯ್ಡು ಅವರು, ನಮಗೆ ನಿರ್ದಿಷ್ಟ ಕಾನೂನು ಎಂದು ಇರುತ್ತದೆ. ಅದರ ಪ್ರಕಾರವಾಗಿಯೇ ಮೊದಲು ಸ್ಪಷ್ಟನೆ ಕೇಳುತ್ತೀವಿ. ನಟ ದರ್ಶನ್ ಅವರಿಗೆ ಈ ಸಂಬಂಧ ನೋಟೀಸ್ ನೀಡಿದ್ದೇವೆ‌. ಅದಕ್ಕೆ ಉತ್ತರ ನೀಡುವುದಕ್ಕೆ ಏಳು ದಿನಗಳ ಕಾಲಾವಕಾಶ ಕೂಡ ಕೊಟ್ಟಿದ್ದೇವೆ. ನೋಟೀಸ್ ನೀಡಿ ಎರಡು ದಿನ ಕಳೆದಿದೆ. ಇನ್ನು ಐದು ದಿನ ಬಾಕಿ ಇದೆ. ಅಷ್ಟರಲ್ಲಿ ಅದಕ್ಕೆ ಸ್ಪಷ್ಟ ಉತ್ತರ ನೀಡಬೇಕು. ಇಲ್ಲವಾದರೆ ಕಾನೂನು ರೀತಿಯಲ್ಲಿ ಕ್ರಮ ತೆಗೆದುಕೊಳ್ಳುತ್ತೇವೆ ಎಂದಿದ್ದಾರೆ.

 

ಕಾನೂನಿನ ಮುಂದೆ ಎಲ್ಲರು ಒಂದೇ. ಎಲ್ಲರೂ ತಲೆ ತಗ್ಗಿಸಲೇಬೇಕು. ಸಾರ್ವಜನಿಕ ಸಭೆಯೊಂದರಲ್ಲಿ ಇವತ್ತು ಇವಳಿರದತಾಳೆ, ನಾಳೆ ಅವಳಿರ್ತಾಳೆ ಎಂದು ಮಾತನಾಡಿದ್ದಾರೆ. ಈ ಬಗ್ಗೆ ಗೌಡ್ತಿಯರ ಸೇನೆಯಿಂದ ಮಹಿಳಾ ಆಯೋಗಕ್ಕೆ ದೂರು ಬಂದಿದೆ. ಅಧಿಕಾರಿಗಳ ಜೊತೆಗೆ ಈ ಬಗ್ಗೆ ಚರ್ಚೆ ಮಾಡಿದ್ದೇನೆ. ಮನೆಗೆ ನೋಟೀಸ್ ನೀಡಲು ಹೋದಾಗ ಯಾರು ತೆಗೆದುಕೊಂಡಿರಲಿಲ್ಲ. ಅವರ ಪಿಎ ಬಂದು ಸೈನ್ ಮಾಡಿ ತೆಗೆದುಕೊಂಡು ಹೋಗಿದ್ದಾರೆ. ತಪ್ಪು ತಪ್ಪೇ, ಹೆಣ್ಣು ಹೆಣ್ಣೇ. ಸಾರ್ವಜನಿಕವಾಗಿ ಹೆಣ್ಣು ಮಕ್ಕಳ ಬಗ್ಗೆ ಯಾರೂ ಕೆಟ್ಟದಾಗಿ ಮಾತನಾಡಬಾರದು. ಕಾನೂನು ತುಂಬಾ ಕಠಿಣವಾಗಿದೆ ಎಂದಿದ್ದಾರೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment