Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ವಿವಿ ಸಾಗರದಿಂದ DRDO ಗೆ ಹರಿಯುವ ನೀರನ್ನು ನಿಲ್ಲಿಸಿ : ಚಿತ್ರದುರ್ಗದಲ್ಲಿ ರಾಜ್ಯ ರೈತ ಸಂಘ ಆಗ್ರಹ

Facebook
Twitter
Telegram
WhatsApp

 

ವರದಿ ಮತ್ತು ಫೋಟೋ ಕೃಪೆ, ಸುರೇಶ್ ಪಟ್ಟಣ್,                     ಮೊ : 98862 95817

ಸುದ್ದಿಒನ್, ಚಿತ್ರದುರ್ಗ. ಫೆಬ್ರವರಿ 28 : ವಿ ವಿ ಸಾಗರದಿಂದ ಡಿಆರ್‍ಡಿಓಗೆ ಬಿಡುವ ನೀರನ್ನು ಸ್ಥಗಿತಗೊಳಿಸುವಂತೆ ರಾಜ್ಯ ರೈತ ಸಂಘ ಸರ್ಕಾರವನ್ನು ಆಗ್ರಹಿಸಿದೆ.

ಜಿಲ್ಲಾ ಪಂಚಾಯತಿ‌ಯ ಕೇಂದ್ರ ಸಚಿವರ ಕಛೇರಿಯ ಮುಂದೆ ಭದ್ರಾ ಮೇಲ್ದಂಡೆ ಯೋಜನೆಗೆ 5300 ಕೋಟಿ ಹಣವನ್ನು ನೀಡುವಂತೆ ಆಗ್ರಹಿಸಿ ಕಳೆದ 23 ದಿನಗಳಿಂದ ನಿರಂತರವಾಗಿ ರೈತರು ಧರಣಿ ನಡೆಸಲಾಗುತ್ತಿದೆ. ಕರ್ನಾಟಕದ ಹಿಂದಿನ ವಿಧಾನ ಸಭೆಯ ಚುನಾವಣೆ ಪ್ರಚಾರಕ್ಕೆ ಚಿತ್ರದುರ್ಗಕ್ಕೆ ಬಂದ ಪ್ರಧಾನ ಮಂತ್ರಿಗಳು ಭದ್ರಾ ಮೇಲ್ದಂಡೆ ಯೋಜನೆಗೆ 5300 ಕೋಟಿ ಹಣವನ್ನು ಕಾಯ್ದಿರಿಸಿದ್ದೇವೆ ಎಂದು ಹೇಳಿದ್ದು ಸರಿಯಷ್ಟೇ, ಆದರೆ ಒಂದು ವರ್ಷ ಕೆಳದರೂ ಬಿಡುಗೆಡೆ ಮಾಡಿಲಿಲ್ಲ. ಇದೇ ಕಾರಣಕ್ಕೆ ಚಿತ್ರದುರ್ಗ ಎಂಪಿ ಕಛೇರಿಯ ಮುಂದೆ 23 ದಿನಗಳಿಂದ ನಿರಂತರವಾಗಿ ರೈತರು ಧರಣಿ ನಡೆಸುತ್ತಿದ್ದಾರೆ ಈ ಬಗ್ಗೆ ಎಂಪಿ ನಾರಾಯಣಸ್ವಾಮಿ ಯವರಿಂದ ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ಸಕರಾತ್ಮಕವಾಗಿ ದೊರೆತಿರುವುದಿಲ್ಲ ಎಂದು ದೂರಿದ್ದಾರೆ.

ಈ ವರ್ಷ 50 ವರ್ಷಗಳಲ್ಲಿ ಅತ್ಯಂತ ಭೀಕರ ಬರವನ್ನು ನಮ್ಮ ಜಿಲ್ಲೆಯಲ್ಲೂ ಎದುರಿಸುತ್ತಿದೇವೆ ಕೃಷಿ ಭೂಮಿಯಲ್ಲಿ ಮೆಳೆಯಿಲ್ಲದೆ ಬೆಳೆ ಇಲ್ಲ ಮತ್ತು ಬೋರ್‍ವೆಲೆಗಳಲ್ಲಿ ನೀರು ಬತ್ತಿ ಹೋಗಿದೆ. ತೋಟಗಳೆಲ್ಲ ಒಣಗಲು ಪ್ರಾರಂಭಿಸಿವೆ. ಕುಡಿಯುವ ನೀರಿಗೂ ಆಹಾಕಾರ ಪಡುವಂತಾಗಿದೆ ಈ ಜಿಲ್ಲೆಯಲ್ಲಿ ಯಾವುದೇ ನೀರಿನ ಮೂಲಗಳು ಇಲ್ಲ, ಆದಾಗ್ಯೂ ತಾವುಗಳು ಭದ್ರಾ ಮೆಲ್ದಂಡೆ ಯೋಜನೆಗೆ ಸಹಕರಿಸಿ ನೀರಾವರಿ ಕಲ್ಪಿಸದೇ ಇರುವ ಕಾರಣ ಸುಮಾರು 30 ಸಾವಿರ ಎಕರೆಗಿಂತಲೂ ಹೆಚ್ಚು ಭೂಮಿಯಲ್ಲಿ ಬೆಳೆ ಬೆಳೆಯಬಹುದಾದ ನೀರನ್ನು ಡಿ.ಆರ್.ಡಿ.ಓಗೆ ಕೊಡುವುದನ್ನು ಪರಿಗಣಿಸಿ ಕೂಡಲೇ ಡಿ.ಆರ್.ಡಿ.ಓಗೆ ನೀರನ್ನು ತಡೆಹಿಡಿಯಬೇಕೆಂದು ಈ ಮೂಲಕ ಒತ್ತಾಯಿಸಲಾಯಿತು.

ಸರ್ಕಾರ ನೀರನ್ನು ನಿಲ್ಲಿಸದಿದ್ದಲ್ಲಿ ರೈತರೇ ಈ ನೀರನ್ನು ತಡೆಹಿಡಿಯಬೇಕೆಂದು ಮುಂದಾಗಲಿದ್ದಾರೆಂದು ಈ ಮೂಲಕ ಗಮನ ಸೆಳೆದಿದೆ. ಅಲ್ಲದೆ ಮುಂದೆ ಜರುಗಬಹುದಾದ ಯಾವುದೇ ಅನಾಹುತಗಳಿಗೆ ರೈತ ಸಂಘಟನೆಯಾಗಲೀ, ರೈತರಾಗಲೀ ಸಾರ್ವಜನಿಕರಾಗಲೀ ಜವಾಬ್ದಾರರಲ್ಲ ಎಂದು ತಿಳಿಸಿದ್ದಾರೆ.

ಈ ಸಂದರ್ಭದಲ್ಲಿ ಈಚಘಟ್ಟ ಸಿದ್ದವೀರಪ್ಪ, ಡಿ ಸಿ ಹಳ್ಳಿ ಮಲ್ಲಿಕಾರ್ಜುನಪ್ಪ, ಹೆಚ್ ಡಿ ಪುರ ಮಲ್ಲಿಕಾರ್ಜುನ ಸತೀಶ್, ಬಸವರಾಜಪ್ಪ, ಜಯಣ್ಣ, ರಂಗಸ್ವಾಮಿ, ಚಂದ್ರಮೌಳಿ, ಇಂದೂದಾರ, ಲೋಕಣ್ಣ, ಮಹಾದೇವಪ್ಪ, ರಾಜಪ್ಪ, ವಿಶ್ವನಾಥಪ್ಪ, ಜಯಣ್ಣ,  ಸದಾಶಿವಪ್ಪ, ನಾಗರಾಜ ಚಾರ್, ಹರಳಯ್ಯ,  ಅಜ್ಜಪ್ಪ, ಚಂದ್ರಪ್ಪ, ನಾಗಪ್ಪ, ತುಳಜಮ್ಮ, ಇನ್ನೂ ಮುಂತದಾವರು ಭಾಗವಹಿಸಿದರು.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಸಿದ್ದರಾಮಯ್ಯ ಸರ್ಕಾರಕ್ಕೆ ವರ್ಷದ ಸಂಭ್ರಮ : ಬಿಜೆಪಿಯ ಪ್ಲ್ಯಾನ್ ಏನು ಗೊತ್ತಾ..?

ಬೆಂಗಳೂರು: ಕಳೆದ ವಿಧಾನಸಭಾ ಚುನಾವಣೆಯಲ್ಲಿ 135 ಕ್ಷೇತ್ರದಲ್ಲಿ ಭರ್ಜರಿಯಾಗಿ ಗೆಲುವು ಸಾಧಿಸಿ, ಸ್ವತಂತ್ರವಾಗಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದಿತ್ತು. ಇದೀಗ ಆ ಸಂತಸದ ಗಳಿಗೆಗೆ ಭರ್ತಿ ಒಂದು ವರ್ಷವಾಗುತ್ತಿದೆ. ಮೇ20ಕ್ಕೆ ಸರ್ಕಾರ ರಚನೆ ಮಾಡಿ

ಬಿಜೆಪಿ – ಜೆಡಿಎಸ್ ಪಕ್ಷದಿಂದ 25 ರಿಂದ 30 ಜನ  ನಮ್ಮ ಪಕ್ಷಕ್ಕೆ ಬರುತ್ತಾರೆ : ಚಿತ್ರದುರ್ಗದಲ್ಲಿ ಸಚಿವ ಸುಧಾಕರ್ ಹೇಳಿಕೆ

ವರದಿ ಮತ್ತು ಫೋಟೋ ಕೃಪೆ,  ಸುರೇಶ್ ಪಟ್ಟಣ್,                         ಮೊ : 98862 95817 ಸುದ್ದಿಒನ್, ಚಿತ್ರದುರ್ಗ ಮೇ. 17

ಮಳೆರಾಯನನ್ನೇ ಬೇಡಿದ ಅಭಿಮಾನಿಗಳು : RCB ಗೆಲುವಿಗಾಗಿ ವಿಶೇಷ ಪೂಜೆ

RCB ಅಭಿಮಾನಿಗಳು ಕಡೆಯ ತನಕ ತಮ್ಮ ಟೀಂ ಬಗ್ಗೆ ಹೋಪ್ ಕಳೆದುಕೊಳ್ಳುವುದೇ ಇಲ್ಲ. ಯಾಕಂದ್ರೆ ಆರ್ಸಿಬಿ ಆಟಗಾರರು ಸಹ ಅದೇ ಥರ ಕೊನೆಯಲ್ಲಿ ಚೋಕ್ ಕೊಡ್ತಾರೆ. ಈ ಬಾರಿಯ ಐಪಿಎಲ್ ನಲ್ಲಿ ಆರಂಭದ ಅಷ್ಟು

error: Content is protected !!