ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್
ಮೊ : 78998 64552
ಸುದ್ದಿಒನ್, ಚಿತ್ರದುರ್ಗ, ಫೆಬ್ರವರಿ.24 : ನಗರದ ಹೊರವಲಯದಲ್ಲಿರುವ ಬಾಪೂಜಿ ಶಿಕ್ಷಣ ಮಹಾವಿದ್ಯಾಲಯದಲ್ಲಿ ಶನಿವಾರ ಮಕ್ಕಳ ಸಂತೆ ಏರ್ಪಡಿಸಲಾಗಿತ್ತು.
ಎಲ್.ಕೆ.ಜಿ.ಯಿಂದ ಹತ್ತನೆ ತರಗತಿ ವಿದ್ಯಾರ್ಥಿಗಳು ಹಸಿ ತರಕಾರಿ, ಸೊಪ್ಪು, ಪೌಷ್ಠಿಕಾಂಶವುಳ್ಳ ಕಾಳುಗಳು, ಫ್ರೂಟ್ ಸಲಾಡ್, ತಂಪು ಪಾನೀಯ, ಗೋಬಿ ಮಂಚೂರು ತರಹೆವಾರು ತಿಂಡಿ ತಿನಿಸುಗಳನ್ನು ಮಾರಾಟ ಮಾಡಿದರು.
ಬಾಪೂಜಿ ಶಿಕ್ಷಣ ಮಹಾವಿದ್ಯಾಲಯದ ನಿರ್ದೇಶಕ ಚೇತನ್ ಕೆ.ಎಂ. ಮಕ್ಕಳ ಸಂತೆ ವೀಕ್ಷಿಸಿ ಮಾತನಾಡುತ್ತ ಶಿಕ್ಷಣದ ಜೊತೆ ಮಕ್ಕಳಿಗೆ ಕಲಿಕಾ ಚೇತರಿಕೆ, ವ್ಯವಹಾರ ಜ್ಞಾನ ಮೂಡಿಸುವುದು ಮಕ್ಕಳ ಸಂತೆ ಉದ್ದೇಶವಾಗಿದೆ. ಸ್ವತಃ ಮಕ್ಕಳೆ ತಯಾರಿಸಿರುವ ಅನೇಕ ಬಗೆಯ ತಿಂಡಿ ತಿನಿಸುಗಳು ಶುಚಿ ಹಾಗೂ ರುಚಿಯಾಗಿವೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಪ್ರಾಂಶುಪಾಲರಾದ ಜಯಲಕ್ಷ್ಮಿ, ಉಪ ಪ್ರಾಚಾರ್ಯರಾದ ಶಿವಕುಮಾರ್ ಹಾಗೂ ಶಿಕ್ಷಕ ವೃಂದದವರು ಮಕ್ಕಳ ಸಂತೆ ವೀಕ್ಷಿಸಿದರು.