ಮಂಡ್ಯ: ಕೆರಗೋಡುವಿನ ಹನುಮ ಧ್ವಜದ ವಿಚಾರದಿಂದ ವಾತಾವರಣ ಇನ್ನು ತಿಳಿಯಾಗಿಲ್ಲ. ಈ ಸಂಬಂಧ ಮಂಡ್ಯ ಸಂಸದೆ ಸುಮಲತಾ ಅವರು ಮಾತನಾಡಿದ್ದು, ನಮಗೂ ಮಾಹಿತಿ ಇದೆ. ಆ ಎಂಎಲ್ಎ ಹೇಳಿದ್ದರಿಂದ ತಹಶಿಲ್ದಾರ್ ಈ ರೀತಿ ಮಾಡಿದ್ದಾರೆಂದು. ಆದರೆ ದಾಖಲೆಯ ಮಾಹಿತಿ ಇಲ್ಲ ಎಂದಿದ್ದಾರೆ.
ನನ್ನ ಜಿಲ್ಲೆಯಲ್ಲಿ ಅಕ್ರಮ ಗಣಿಗಾರಿಕೆ ಮಾಡ್ತಾ ಇದ್ದೀನಿ. ಎಲ್ಲಾ ಕಡೆ ಕೆರೆಗಳನ್ನು ಮುಚ್ಚಲಾಗಿದೆ. ಆ ಕಡೆ ಗಮನ ಹರಿಸಬಹುದಿತ್ತು. ರಾಮನ ಬಾವುಟವನ್ನೋ, ಹನುಮನ ಬಾವುಟವನ್ನೋ ಹಾರಿಸಿರುವುದು ಯಾರಿಗೂ ನೋವು ತಂದಿಲ್ಲ. ಮಂದಿರದ ಮೇಲೋ ಎಲ್ಲೋ ಹಾರಿಸಿದ್ದರೆ, ಆ ಸಮುದಾಯದವರು ಇದ್ದಲ್ಲಿ ಹೋಗಿ ಹಾರಿಸಿದ್ದರೆ ಅದು ತಪ್ಪು. ಆದರೆ ಆ ರೀತಿಯಾಗಿ ಏನು ಇಲ್ಲ. ನೀವೂ ಆ ಜಾಗಕ್ಕೆ ಹೋಗಿ ಸರಿಯಾದ ರಿತೀಯಲ್ಲಿ ಮಾತನಾಡಿ, ಆ ಸಮಸ್ಯೆಯನ್ನು ಬಗೆಹರಿಸಬಹುದಿತ್ತು.
ಸ್ಥಳೀಯವಾಗಿ ಅಲ್ಲಿ ರಾಜಕಾರಣ ನಡೆದಿದೆ. ಎಂಎಲ್ಎ ಸೂಚನೆ ಮೇರೆಗೆ ತಹಶಿಲ್ದಾರ್ ಕ್ರಮ ತೆಗೆದುಕೊಂಡಿದ್ದಾರೆ ಎಂಬ ಮಾತು ನಮ್ಮ ಕಿವಿಗೂ ಬಿದ್ದಿದೆ. ಆದರೆ ಪಕ್ಕ ಮಾಹಿತಿ ಇಲ್ಲ. ಸರಿಯಾದ ರೀತಿಯಲ್ಲಿ ಸಮಸ್ಯೆ ಬಗೆಹರಿಸದೆ, ಬಲವಂತವಾಗಿ ಆಕ್ಷನ್ ತೆಗೆದುಕೊಳ್ಳುವುದು ಸರಿಯಲ್ಲ. 30 ವರ್ಷದಿಂದಾನು ಮಂಡ್ಯದಲ್ಲಿ ರಾಜಕಾರಣ ಹೇಗೆ ಎಂಬುದನ್ನು ನೋಡಿಕೊಂಡು ಬಂದಿದ್ದೀನಿ. ನಿಜವಾಗಲೂ ಅಲ್ಲಿನ ಸ್ಥಳೀಯರಿಗೆ ಹರ್ಟ್ಸ್ ಆಗಿದೆ. ಈ ರೀತಿಯ ಪರಿಸ್ಥಿತಿ ಇದ್ದಾಗ ಎಲ್ಲಾ ಪಕ್ಷದವರು ಜಾಯಿನ್ ಆಗುತ್ತಾರೆ. ಹೀಗಾಗಿ ರಾಜಕೀಯ ಬಣ್ಣ ಬಳಿಯಲಾಗಿದೆ.
ಒಬ್ಬರ ಮೇಲೆ ಒಬ್ಬರು ಆರೋಪ ಮಾಡುವುದಕ್ಕಿಂತ, ಅಲ್ಲಿನ ಜನರ ಮನಸ್ಸಿಗೆ ಧಾರ್ಮಿಕ ಧಕ್ಕೆ ಉಂಟಾಗಿದೆ. ಅದನ್ನು ಸರಿ ಮಾಡಿಕೊಳ್ಳುವುದು ಹೇಗೆ ಎಂಬುದನ್ನು ನೋಡಬೇಕಿದೆ. ಇವತ್ತು ನೀವೂ ಪ್ರತಿಭಟನೆ ಮಾಡುತ್ತೀರಿ, ನಾಳೆ ನಾವೂ ಮಾಡುತ್ತೀವಿ ಎಂದರೆ ಅರ್ಥವಿಲ್ಲ ಎಂದಿದ್ದಾರೆ.