Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

---Advertisement---

ಚಿಕ್ಕಣ್ಣ ಸಿನಿಮಾಗೆ ರಶ್ಮಿಕಾ ಬೆಂಬಲ : ನನ್ನ ಜೊತೆಗೆ ಅವರು ಕನ್ನಡದಲ್ಲೇ ಮಾತನಾಡಬೇಕೆಂದ ಚಿಕ್ಕಣ್ಣ

---Advertisement---

ಬೆಂಗಳೂರು: ಕಾಮಿಡಿ ಸ್ಟಾರ್ ಆಗಿ ಮಿಂಚಿದ್ದ ನಟ ಚಿಕ್ಕಣ್ಣ, ಈಗ ಫುಲ್ ಟೈಮ್ ಹೀರೋ ಆಗುವುದಕ್ಕೆ ಹೊರಟಿದ್ದಾರೆ. ಉಪಾಧ್ಯಕ್ಷ ಸಿನಿಮಾ ರಿಲೀಸ್ ಗೆ ರೆಡಿಯಾಗಿದೆ. ಇದರ ನಡುವೆ ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ಉಪಾಧ್ಯಕ್ಷ ಸಿನಿಮಾಗೆ ಶುಭಾಶಯ ಕೋರಿದ್ದಾರೆ. ಈ ಶುಭಾಶಯದ ವಿಡಿಯೋ ಸಾಕಷ್ಟು ಟಾಕ್ ಕ್ರಿಯೇಟ್ ಮಾಡಿತ್ತು. ಇದೀಗ ಈ ಬಗ್ಗೆ ನಟ ಚಿಕ್ಕಣ್ಣ ಕ್ಲಾರಿಟಿ ಕೊಟ್ಟಿದ್ದಾರೆ.

ಇಂದು ಉಪಾಧ್ಯಕ್ಷ ಸಿನಿಮಾ ಪ್ರಚಾರದಲ್ಲಿದ್ದ ಚಿಕ್ಕಣ್ಣ ಈ ಬಗ್ಗೆ ಮಾತನಾಡಿದ್ದು, ರಶ್ಮಿಕಾ ಮಂದಣ್ಣ ಅವರೊಂದಿಗೆ ನಾನು ಅಂಜನಿಪುತ್ರ, ಪೊಗರು ಸಿನಿಮಾ ಮಾಡಿದ್ದೀನಿ. ನನ್ನ ಸಿನಿಮಾ ಪ್ರಮೋಷನ್ ಗಾಗಿ ಬೈಟ್ ಕೇಳಿದ್ದೆ. ಅದಕ್ಕೆ ಪ್ರೀತಿಯಿಂದ ಅವರು ಕಳುಹಿಸಿದ್ದಾರೆ. ಅಲ್ಲಿಗೆ ನಾನೇ ಬರುತ್ತೀನಿ ಮೇಡಂ. ಒಂದು ಬೈಟ್ ವಿಡಿಯೋ ಮಾಡಿಕೊಳ್ಳುತ್ತೀನಿ ಎಂದೆ. ಅದಕ್ಕೆ ಅವರು ಬರುವುದು ಏನು ಬೇಡ. ನಾನೇ ವಿಡಿಯೋ ಮಾಡಿ ಕಳುಹಿಸುತ್ತೀನಿ ಅಂತ ವಿಡಿಯೋ ಕಳುಹಿಸಿದ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.

ಇನ್ನು ರಶ್ಮಿಕಾ ಮಂದಣ್ಣ ನನ್ನ ಜೊತೆಗೆ ಕನ್ನಡದಲ್ಲಿಯೇ ಮಾತನಾಡಬೇಕು. ಬೇರೆ ಯಾವ ಆಪ್ಶನ್ ಇಲ್ಲ. ನನಗೆ ಕನ್ನಡ ಬಿಟ್ಟರೆ ಬೇರೆ ಯಾವ ಭಾಷೆಯೂ ಬರುವುದಿಲ್ಲ. ಅವರಿಗೆ ಕ್ಙಡ ಬರದೆ ಹೋದರು ಕನ್ನಡದಲ್ಲಿಯೇ ಮಾತನಾಡಬೇಕು. ಅವರ ಜೊತೆಗೆ ಸಿನಿಮಾ ಮಾಡಿರುವುದರಿಂದ ನನ್ನ ಜೊತೆಗೆ ಅವರು ಕನ್ನಡದಲ್ಲಿಯೇ ಮಾತನಾಡುತ್ತಾರೆ. ನನಗೆ ಕನ್ನಡ ಮಾತ್ರ ಬರುವುದು ಎಂದು ರಶ್ಮಿಕಾ ಮಂದಣ್ಣ ಅವರಿಗೂ ಗೊತ್ತು. ಹೀಗಾಗಿ ಬೇರೆ ಭಾಷೆ ನಾತನಾಡುವುದಿಲ್ಲ ಎಂದು ಹೇಳಿದ್ದಾರೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment

🏫 ಅಡ್ಮಿಷನ್ ಓಪನ್
🔒

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್

ಸ್ವಾಗತ...