Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

---Advertisement---

ಹಿಂದೂಗಳ ಕೆಂಗಣ್ಣಿಗೆ ಗುರಿಯಾಗಿದ್ದ ನಯನತಾರ : ‘ಅನ್ನಪೂರ್ಣಿ’ ಬಗ್ಗೆ ಹೇಳಿದ್ದೇನು..?

---Advertisement---

 

ಇತ್ತಿಚೆಗೆ ‘ಅನ್ನಪೂರ್ಣಿ’ ಸಿನಿಮಾ ಸಾಕಷ್ಟು ವಿವಾದಕ್ಕೆ ಸಿಲುಕಿತ್ತು. ಅಷ್ಟೇ ಯಾಕೆ ನೆಟ್ ಫ್ಲಿಕ್ಸ್ ನಿಂದ ಸಿನಿಮಾವನ್ನು ತೆಗೆದು ಹಾಕಲಾಗಿತ್ತು. ಜೀ ಸ್ಟುಡಿಯೋದವರು ಈ ಸಿನಿಮಾದ ವಿಚಾರಕ್ಕೆ ಕ್ಷಮೆಯನ್ನು ಕೇಳಿದ್ದರು. ಇದೀಗ ಈ ವಿಚಾರವಾಗಿ ನಟಿ ನಯನತಾರಾ ಬೇಸರ ಹೊರ ಹಾಕಿದ್ದಾರೆ. ನೋವಿನಿಂದ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಾಕಿದ್ದಾರೆ.

ಅನ್ನಪೂರ್ಣಿ ಸಿನಿಮಾ ಮೂಲಕ ನಯನತಾರಾ ಹಿಂದೂಗಳ ಭಾವನೆಗೆ ಧಕ್ಕೆ ಉಂಟು ಮಾಡಿದ್ದಾರೆಂಬ ಆರೋಪ ಕೇಳಿ ಬಂದಿತ್ತು. ಹಿಂದೂ ಮುಖಂಡರು ಈ ವಿಚಾರವಾಗಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದರು. ನಯನತಾರಾ ವಿರುದ್ಧ ದೂರು ನೀಡಿದ್ದರು. ಶ್ರೀರಾಮನನ್ನು ಮಾಂಸಾಹಾರಿ ಎಂದು ಕರೆಯಲಾಗಿದೆ. ಲವ್ ಜಿಹಾದ್ ವಿಚಾರಕ್ಕೆ ಸಿನಿಮಾದಲ್ಲಿ ಪ್ರೋತ್ಸಾಹ ನೀಡಲಾಗಿದೆ. ಬ್ರಾಹ್ಮಣ ಕುಟುಂಬದಲ್ಲಿ ಹುಟ್ಟಿದ ಅನ್ನಪೂರ್ಣಿ, ಕುಟುಂಬದವರ ವಿರೋಧದ ನಡುವೆಯೂ ಮಾಂಸಾಹಾರ ಅಡುಗೆ ಮಾಡಲು ನಿರ್ಧರಿಸುತ್ತಾಳೆ. ಈ ವೇಳೆ ಮುಸ್ಲಿಂ ಹುಡುಗನ ಗೆಳೆತನ ಮಾಡುತ್ತಾಳೆ. ಆತ ಶ್ರೀರಾಮನು ಮಾಂಸಹಾರಿಯೇ ಎನ್ನುತ್ತಾನೆ. ಮಾಂಸಾಹಾರ ಅಡುಗೆ ಮಾಡುವಾಗ ಅನ್ನಪೂರ್ಣೇ ಹಿಜಾಬ್ ಧರಿಸುತ್ತಾಳೆ. ಅನ್ನಪೂರ್ಣಿ ಪಾತ್ರವನ್ನು ನಯನತಾರ ನಿಭಾಯಿಸಿದ್ದಾರೆ.

ಅನ್ನಪೂರ್ಣಿ ಚಿತ್ರವನ್ನು ಒಟಿಟಿಯಿಂದ ಡಿಲೀಟ್ ಮಾಡಿರುವುದಕ್ಕೆ ನಟಿ ನಯನತಾರಾ ಕ್ಷಮೆ ಕೇಳಿದ್ದಾರೆ. ವರ್ಷಪೂರ್ತಿ ದೇವರು, ದೇವಾಲಯಗಳನ್ನು ಸುತ್ತುವ ನಾನು ಉದ್ದೇಶಪೂರ್ವಕವಾಗಿ ಯಾರ ಭಾವನೆಗಳಿಗೂ ನೋವುಂಟು ಮಾಡಲ್ಲ. ಸಮಾಜಕ್ಕೆ ಸ್ಪೂರ್ತಿದಾಯಕ ಸಿನಿಮಾ ಕೊಡಬೇಕು ಅನ್ನೋದಷ್ಟೇ ನಮ್ಮ ಉದ್ದೇಶ. ಈ ಚಿತ್ರದಿಂದ ಯಾರಿಗಾದರೂ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ ಎಂದು ಪೋಸ್ಟ್ ಹಾಕಿದ್ದಾರೆ. ನೆಟ್ ಫ್ಲಿಕ್ಸ್ ನಿಂದ ಸಿನಿಮಾ ತೆಗೆದಿರುವುದಕ್ಕೆ ನಟಿ ನಯನತಾರಾ ಬೇಸರ ಹಿರ ಹಾಕಿದ್ದಾರೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment

🏫 ಅಡ್ಮಿಷನ್ ಓಪನ್
🔒

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್

ಸ್ವಾಗತ...